ವೀಲಿಂಗ್ ಮಾಡುತ್ತಿದ್ದ ಪುಂಡರಿಂದ ಬೇಸತ್ತು ಸ್ಕೂಟರ್ ಕಿತ್ತುಕೊಂಡು ಫ್ಲೈಓವರ್ ನಿಂದ ಎಸೆದ ಜನ

ಬೆಂಗಳೂರಿನಲ್ಲಿ ರಸ್ತೆಯಲ್ಲಿ ಅಪಾಯಕಾರಿ ವೀಲಿಂಗ್ ಮಾಡುತ್ತಿದ್ದ ಪುಂಡರ ಕೃತ್ಯದಿಂದ ಬೇಸತ್ತ ಸಾರ್ವಜನಿಕರು, ವೀಲಿಂಗ್ ಮಾಡುತ್ತಿದ್ದವರ ಸ್ಕೂಟರ್ ಗಳನ್ನು ಕಿತ್ತುಕೊಂಡು ನೆಲಮಂಗಲ ಮೇಲ್ಸೇತುವೆಯಿಂದ ಕೆಳಗೆ ಎಸೆದಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಸವಾರರು ಸೇರಿದಂತೆ ಇಬ್ಬರು ಯುವಕರು ತಮ್ಮ ಸ್ಕೂಟರ್‌ಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರಲ್ಲಿ ಒಬ್ಬ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಾಹನ ಸವಾರರು ಆತನ ಮತ್ತು ಮತ್ತೊಬ್ಬ ಯುವಕನ ಸ್ಕೂಟರ್ಅನ್ನು […]
ಮೈಸೂರಿನಲ್ಲಿ ಸುಳ್ಯದ ಸಹೋದರರಿಬ್ಬರು ಆತ್ಮಹತ್ಯೆ

ಮೈಸೂರಿನಲ್ಲಿ ಸುಳ್ಯದ ಸಹೋದರರಿಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸುಳ್ಯದ ಧರ್ಮಪಾಲ ಮುಂಡೋಡಿ ದಂಪತಿಯ ಪುತ್ರರಾದ ನಾಗೇಂದ್ರ ಮುಂಡೋಡಿ (39) ಸನತ್ ಮುಂಡೋಡಿ (36) ಮಾನಸಿಕ ಖನ್ನತೆಗೊಳಗಾಗಿ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಇವರ ಅಂತ್ಯಸಂಸ್ಕಾರವನ್ನು ಆ.16ರಂದು ಮೈಸೂರಿನಲ್ಲಿ ನಡೆಸಲಾಗಿದೆ.
ಉಪ್ಪಿನಂಗಡಿ; ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು

ಉಪ್ಪಿನಂಗಡಿ; ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯ ತುರ್ಕಳಿಕೆ ಎಂಬಲ್ಲಿ ನಡೆದಿದೆ. ಮುಸ್ತಫಾ ಎಂಬವರ ಮಗ ಮೊಹಮ್ಮದ್ ತಂಝೀರ್(14) ಮೃತ ಬಾಲಕ. ಮಧ್ಯಾಹ್ನ ಶಾಲೆಯಿಂದ ಸ್ನೇಹಿತರ ಜೊತೆ ಈಜಲು ತೆರಳಿ ಬಾಲಕ ಅವಘಢಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಮುಸ್ತಫಾ ಅವರ ತಾಯಿ ಇತ್ತೀಚೆಗೆ ನಿಧನ ಹೊಂದಿದ್ದರು. ಆ ಬಳಿಕ ಮುಸ್ತಫಾ ಅವರ ಸಹೋದರನ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ಇದರ ಬೆನ್ನಲ್ಲೇ ತಂಝೀರ್ ಆಕಸ್ಮಿಕವಾಗಿ ನಿಧನರಾಗಿದ್ದು, ಕುಟುಂಬ ಮತ್ತಷ್ಟು ಆಘಾತಕ್ಕೆ ಒಳಗಾಗಿದೆ.
ಪ್ರಾಸಿಕ್ಯುಷನ್ ಗೆ ಅನುಮತಿ: ರಾಜ್ಯಪಾಲರ ನಿರ್ಧಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನೆಲ್ಲಾ ಹೇಳಿದ್ರು?

ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯುಷನ್ ಗೆ ಅನುಮತಿ ಕೊಟ್ಟಿರುವ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿಯನ್ನು ನಡೆಸಿದ್ದಾರೆ. ಗೌರವಾನ್ವಿತ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ನನ್ನ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವುದು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಟ್ಟ ಪಿತೂರಿಯಲ್ಲದೆ ಬೇರೇನೂ ಅಲ್ಲ. ಇದು ಪ್ರಜಾಪ್ರಭುತ್ವಕ್ಕೆ ನೇರ ಬೆದರಿಕೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ರಾಜ್ಯಪಾಲರನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ನನ್ನ ರಾಜೀನಾಮೆಗೆ ಒತ್ತಾಯಿಸಲು ಅವರಿಗೆ ಯಾವುದೇ […]
ಕಾಸರಗೋಡಿನಲ್ಲಿ ಭೀಕರ ಅಪಘಾತ; ಮಂಗಳೂರು ಕಾಲೇಜು ವಿದ್ಯಾರ್ಥಿ ಮೃತ್ಯು

ನಿಯಂತ್ರಣ ತಪ್ಪಿ ಕಾರು ಮಗುಚಿ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಕಾಸರಗೋಡು ರಾಣಿಪುರ ಸಮೀಪದ ಪೆರುತ್ತಡಿ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ ಸುರತ್ಕಲ್ ಎನ್ ಐ ಟಿ ಕೆ ಯ ವಿದ್ಯಾರ್ಥಿ ರಾಯಚೂರು ನಿವಾಸಿ ಆರಿಬುದ್ದೀನ್ (21) ಮೃತರು. ಇನ್ನು ಗಾಯಗೊಂಡವರನ್ನು ಪೂಡಂಕಲ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಿ ಕೇಂದ್ರವಾದ ರಾಣಿಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ […]
ಸಿದ್ದರಾಮಯ್ಯಗೆ ಅಭಯ ನೀಡಿದ ಕಾಂಗ್ರೆಸ್ ಹೈಕಮಾಂಡ್

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸ್ಯುಕ್ಯೂಷನ್ ಗೆ ಅನುಮತಿ ನೀಡುವ ಕಡತಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲಿ ಹೈಕಮಾಂಡ್ ಸಿಎಂ ಸಿದ್ದರಾಮಯ್ಯಗೆ ಅಭಯ ನೀಡಿದ್ದು, ಎಐಸಿಸಿ ನಾಯಕರಾದ ರಣದೀಪ್ ಸುರ್ಜೆವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಕರೆ ಮಾಡಿ ಸಿಎಂ ಸಿದ್ದರಾಮಯ್ಯಗೆ ಧೈರ್ಯ ತುಂಬಿದ್ದಾರೆ. ನಿಮ್ಮ ಜೊತೆಗೆ ನಾವು ಇದ್ದೇವೆ ನೀವು ಧೈರ್ಯವಾಗಿರಿ, ಏನೇ ಆದರೂ ಕಾನೂನು ಹೋರಾಟ ಮಾಡೋಣ. ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮಿಸಿದ್ದು, […]
ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ; ಪ್ರಾಸಿಕ್ಯೂಷನ್ ಗೆ ಕಾನೂನು ತಡೆಯಾಜ್ಞೆ ತರದಂತೆ ಹೈಕೋರ್ಟ್ ಗೆ ಕೇವಿಯಟ್ ಸಲ್ಲಿಕೆ

ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ತಡೆಯಾಜ್ಞೆ ನೀಡದಂತೆ ದೂರುದಾರರು ಹೈಕೋರ್ಟ್ ನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ. ದೂರುದಾರ ಪ್ರದೀಪ್ ಕುಮಾರ್ ಎಂಬುವವರು ಸಿಎಂ ಸಿದ್ದರಾಮಯ್ಯ ಕಾನೂನು ತಡೆಯಾಜ್ಞೆ ತರಬಾರದು ಎಂಬ ಕಾರಣಕ್ಕೆ ಹೈಕೋರ್ಟ್ ಗೆ ಕೇವಿಯೆಟ್ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸುದ್ದಿಗರರೊಂದಿಗೆ ಮಾತನಾಡಿದ ಪ್ರದೀಪ್ ಕುಮಾರ್, ಮೂಡ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಕಾನೂನು […]
ಮೈಮೇಲೆ ಡೀಸೆಲ್ ಸುರಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ

ಮೈಮೇಲೆ ಡೀಸೆಲ್ ಸುರಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಮನ್ನಾಎಕ್ಕೆಳ್ಳಿ ರಾಜ್ಯ ಹೆದ್ದಾರಿಯ ಫತ್ತೆಪುರ ಗ್ರಾಮದ ಕ್ರಾಸ್ ನಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ರೇಕುಳಗಿ ಗ್ರಾಮದ ಮಹೇಶ್ ಮಾರುತಿ ನಾಗನಕೇರಾ(27) ಮೃತಪಟ್ಟ ವ್ಯಕ್ತಿ. ಮಹೇಶ್ ಮಾರುತಿ ಹೆಂಡತಿಯ ತವರು ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಿದ್ದು. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಹಿಂದೊಮ್ಮೆ ಆತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಈತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಚಿಂಚೋಳಿ ಪೋಲಿಸ್ ಠಾಣೆಯ […]
BIG NEWS ಮೂಡಾ ಹಗರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರು

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಬಗ್ಗೆ ವರದಿಯಾಗಿದೆ. ಟಿ.ಜೆ.ಅಬ್ರಾಹಂ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅಲ್ಲದೆ ಟಿ.ಜೆ.ಅಬ್ರಾಹಂ ಅವರಿಗೆ ಬೆಳಿಗ್ಗೆ 10 ಗಂಟೆಗೆ ರಾಜಭವನಕ್ಕೆ ಬಂದು ಭೇಟಿಯಾಗಲು ರಾಜ್ಯಪಾಲರು ಸೂಚಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಇತ್ತೀಚೆಗೆ ದೂರು ದಾಖಲಾಗಿತ್ತು. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ […]
ಶಾಸಕ ಹರೀಶ್ ಪೂಂಜಾಗೆ ತರಾಟೆಗೆ ತೆಗೆದುಕೊಂಡ ಕ್ಷೇತ್ರದ ಜನ; ವಿಡಿಯೋ ವೈರಲ್

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಹರೀಶ್ ಪೂಂಜಾ ತಡವಾಗಿ ಭೇಟಿ ನೀಡಿದ್ದು, ಜನರು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸವಾಣಾಲಿನಲ್ಲಿ ನಡೆದಿದೆ. ಸ್ವಕ್ಷೇತ್ರದ ಜನರೊಂದಿಗೆಯೇ ಶಾಸಕ ಹರೀಶ್ ಪೂಂಜ ಕಿರಿಕ್ ಮಾಡಿದ್ದಾರೆ. ಎಂಎಲ್‌ಎ ಗೆ ಯಾಕೆ ತಡವಾಗಿ ಬಂದೆ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ, ಆ ತರ ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದು ಹರೀಶ್ ಪೂಂಜ ಹೇಳಿದ್ದಾರೆ. ತೀವ್ರ ಮಳೆ ಹಾನಿ ಆದ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ […]