Breaking News :

ಆ.೨೩ ರಂದು ಭಾಗಮಂಡಲದಲ್ಲಿ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ

    ಆ.೨೩ ರಂದು ಭಾಗಮಂಡಲದಲ್ಲಿ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಮಡಿಕೇರಿ : ಕೊಡಗು ಜಿಲ್ಲಾ ಯುವ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆ.೨೩ ರಂದು ಭಾಗಮಂಡಲದಲ್ಲಿ ೩೩ನೇ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಮತ್ತು […]

ತಾಲ್ಲೂಕು ಮಟ್ಟದ ಹಾಕಿ ಪಂದ್ಯಾವಳಿ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಂಡಕ್ಕೆ ಜಯ

ತಾಲ್ಲೂಕು ಮಟ್ಟದ ಹಾಕಿ ಪಂದ್ಯಾವಳಿ : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಂಡಕ್ಕೆ ಜಯ ಮಡಿಕೇರಿ : ಪ್ರಸಕ್ತ ಸಾಲಿನ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯು ಮಂಗಳವಾರ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ ಸಾಯಿ ಹಾಕಿ ಮೈದಾನದಲ್ಲಿ ನಡೆಯಿತು. ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯಿ) ಸಹಾಯಕ ನಿರ್ದೇಶಕರಾದ ಮಿನಿ ಉಣ್ಣಿರಾಜ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿದರು. ಪಂದ್ಯಾವಳಿಯ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ, ದೈಹಿಕ ಶಿಕ್ಷಕರಾದ ರಾಕಿ […]

ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರಿಂದ ಅಜಿ೯ ಅಹ್ವಾನ

ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರಿಂದ ಅಜಿ೯ ಅಹ್ವಾನ ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿಯಿಂದ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 2ರ ವರೆಗೆ ನಗರದಲ್ಲಿ ಆಯೋಜಿತ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದ ಎಂದು ಸಮಿತಿಯ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ. ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.23 ರಿಂದ ಅ2 ರವರೆಗೆ ದಸರಾ ಸಾಂಸ್ಕೖತಿಕ ಸಮಿತಿಯಿಂದ ವೈವಿಧ್ಯಮಯ ಕಾಯ೯ಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಸಾಂಸ್ಕೖತಿಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ […]

ವಸತಿ ನಿಲಯಕ್ಕೆ ಮಹಿಳಾ ಕ್ಷೇಮಪಾಲಕರ ಹುದ್ದೆಗೆ ಅರ್ಜಿ ಆಹ್ವಾನ

ವಸತಿ ನಿಲಯಕ್ಕೆ ಮಹಿಳಾ ಕ್ಷೇಮಪಾಲಕರ ಹುದ್ದೆಗೆ ಅರ್ಜಿ ಆಹ್ವಾನ ಮಡಿಕೇರಿ : ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯಕ್ಕೆ ಮಹಿಳಾ ಕ್ಷೇಮಪಾಲಕರ (ಕೇರ್‍ಟೇಕರ್) ಹುದ್ದೆಗೆ (ಹೊರಗುತ್ತಿಗೆ ಆಧಾರದ ಮೇಲೆ) ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಗಲು ಮತ್ತು ರಾತ್ರಿಯ ವೇಳೆಯಲ್ಲಿ ಕ್ಷೇಮಪಾಲಕರು ಕಿರಿಯರ ಕ್ರೀಡಾ ನಿಲಯದಲ್ಲಿಯೇ ಇರಬೇಕು. ಮಹಿಳಾ ಅಭ್ಯರ್ಥಿಯಾಗಿರಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ. 08272-220986 ಅಥವಾ 9480032712 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ […]

ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಬ ಕ್ರೀಡಾಕೂಟ ಆಯೋಜನೆಗೆ ಸರಕಾರದಿಂದ ಧನಸಹಾಯ : ಆಸಕ್ತ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು

ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಬ ಕ್ರೀಡಾಕೂಟ ಆಯೋಜನೆಗೆ ಸರಕಾರದಿಂದ ಧನಸಹಾಯ : ಆಸಕ್ತ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು ಮಡಿಕೇರಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ತಮ್ಮ 2025-26 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಗ್ರಾಮೀಣ ಕ್ರೀಡೆಗಳಾದ ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಬ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು ಎಂದು ಘೋಷಿಸಿರುತ್ತಾರೆ. ಅದರಂತೆ ಗ್ರಾಮೀಣ ಕ್ರೀಡೆಗಳಾದ ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಬ ಕ್ರೀಡೆಯನ್ನು ಆಯೋಜಿಸಲು […]

ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿರುವ ಶಾಲೆಗೆ ಪ್ರೋತ್ಸಾಹಧನ

ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿರುವ ಶಾಲೆಗೆ ಪ್ರೋತ್ಸಾಹಧನ ಮಡಿಕೇರಿ : ರಾಜ್ಯ ಯುವನೀತಿ-2012 ಅನುಷ್ಠಾನ ಅಡಿಯಲ್ಲಿ ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು 2017-18ನೇ ಸಾಲಿನಿಂದ ಅನ್ವಯವಾಗುವಂತೆ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿರುವ ಕ್ರೀಡಾಪಟುಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಆಯ್ಕೆಯಾದ ಪ್ರತಿ ಶಾಲೆಗೆ ಪ್ರೋತ್ಸಾಹವಾಗಿ ತಲಾ ರೂ.1 […]

ದಿಯಾ ಭೀಮಯ್ಯ ಗೆ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿ

ದಿಯಾ ಭೀಮಯ್ಯ ಗೆ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿ ಮಡಿಕೇರಿ : ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾದ ಯೋನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಬ್ಯಾಡ್ಮಿಂಟನ್ ಸ್ಪರ್ಧೆಯು ಜುಲೈ 27 ರಿಂದ ಆಗಸ್ಟ್ 2 ರವರೆಗೆ ನಡೆಯಿತು. ಪಂದ್ಯಾವಳಿಯಲ್ಲಿ 357 ಕರ್ನಾಟಕದ ಅತ್ಯುತ್ತಮ ಶ್ರೇಯಾಂಕಿತ ಆಟಗಾರರು ಪ್ರಶಸ್ತಿಗಾಗಿ ಸೆಣಸಾಡಿದರು. ಇದರಲ್ಲಿ ದಿಯಾ ಭೀಮಯ್ಯ ಮೂರು ವಿಭಾಗದಲ್ಲಿ ಅಂತಿಮ ಘಟ್ಟಕ್ಕೆ ತಲುಪಿದ್ದು, ಪ್ರಸಂಶನೀಯ ಕೊಡಗಿನ ಬೊಪ್ಪಂಡ […]

ಮಾಜಿ SAI ಹಾಕಿ ತರಬೇತುದಾರ ಚೇಂದಂಡ ಅಶ್ವತ್ ನಿಧನ

ಮಾಜಿ SAI ಹಾಕಿ ತರಬೇತುದಾರ ಚೇಂದಂಡ ಅಶ್ವತ್ ನಿಧನ ಮಡಿಕೇರಿ : ಮಾಜಿ SAI ಹಾಕಿ ತರಬೇತುದಾರ ಚೇಂದಂಡ ಅಶ್ವತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಪಾರ ಕ್ರೀಡಾ ಪ್ರೇಮಿಗಳನ್ನು ಹಾಗೂ ಸ್ನೇಹಿತರ ಬಳಗವನ್ನು ಅಗಲಿದ್ದಾರೆ. ಗ್ವಾಲಿಯರ್ ನಲ್ಲಿ B.P.Ed ಹಾಗೂ M.P.Ed ಪಡೆದು NIS ಪದವಿ ಪಡೆದಿರುವ ಇವರು ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ತರಬೇತುದಾರ, ದಶಕಗಳಿಂದ ಬೆಂಗಳೂರಿನ SAI ತರಬೇತಿದಾರನಾಗಿ ಸೇವೆಸಲ್ಲಿಸಿದ್ದಾರೆ. ಕೊಡಗು ಹಾಗೂ ಕರ್ನಾಟಕದಿಂದ ಹಲವು ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಆಟಗಾರರನ್ನು ತಯಾರು […]

ಮಡಿಕೇರಿಯಲ್ಲಿ ನಡೆದ 4 ಲೈನ್ ಕ್ರಿಕೆಟ್‌ ಪಂದ್ಯಾವಳಿ ಟೀಮ್ ಫ್ಲ್ಯಾಶ್ ಚಾಂಪಿಯನ್ಸ್

ಮಡಿಕೇರಿಯಲ್ಲಿ ನಡೆದ 4 ಲೈನ್ ಕ್ರಿಕೆಟ್‌ ಪಂದ್ಯಾವಳಿ ಟೀಮ್ ಫ್ಲ್ಯಾಶ್ ಚಾಂಪಿಯನ್ಸ್ ಮಡಿಕೇರಿ : ನಗರದ ರಾಣಿಪೇಟೆಯ ಮುನೇಶ್ವರ ಯುವಕ ಸಂಘದ ವತಿಯಿಂದ ಗಾಂಧಿ ಮೈದಾನದಲ್ಲಿ ನಡೆದ 2ನೇ ವರ್ಷದ 4 ಲೈನ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಮ್ ಫ್ಲ್ಯಾಶ್ ತಂಡ ಚಾಂಪಿಯನ್ಸ್ ಪಟ್ಟವನ್ನು ತನ್ನದಾಗಿಸಿಕೊಂಡರೆ. ಟೀಂ ಡಿ.ಕೆ.ಬಾಯ್ಸ್ ಬಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಸಂತು ಮ್ಯಾಕ್ಸ್ ವೆಲ್ ಬೆಸ್ಟ್ ಬ್ಯಾಟ್ಸ್‌ಮನ್, ಮ್ಯಾನ್ ಆಫ್ ದಿ ಮ್ಯಾಚ್, ರಕ್ಷಿತ್ ಬೆಸ್ಟ್ ಬೌಲ‌ರ್ ಹಾಗೂ ಪುನೀತ್ ಮ್ಯಾನ್ ಆಫ್ […]

ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ಕ್ರೀಡಾಕೂಟ ಪೂರಕ ಸಾಧನ : ಮಂತರ್ ಗೌಡ 

ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ಕ್ರೀಡಾಕೂಟ ಪೂರಕ ಸಾಧನ : ಮಂತರ್ ಗೌಡ ಸುಂಟಿಕೊಪ್ಪ : ಯಾವುದೇ ಒಂದು ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮಲು ಕ್ರೀಡಾಕೂಟ ಪೂರಕ ಸಾಧನವೆಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಗದ್ದೆಹಳ್ಳದ ವೈಎಂ.ಕರುಂಬಾಯ್ಯ ನವರ ಗದ್ದೆಯಲ್ಲಿ ಪ್ರಪಥಮ ಬಾರಿಗೆ ಅಯೋಜಿತವಾಗಿದ್ದ ಗದ್ದೆಹಳ್ಳಲಿ ಗದ್ದೆಆಟ ಮಳೆಗಾಲದ ಹಬ್ಬ 2025 ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭತ್ತದ ಬೇಸಾಯ […]