Breaking News :

ಮೂಡಬಿದ್ರೆ; ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಲ್ಲಿ ಇರಿತ ಪ್ರಕರಣ; ಆರೋಪಿ ಅರೆಸ್ಟ್, ತನಿಖೆಯ ವೇಳೆ ಮಹತ್ವದ ಅಂಶಗಳು ಬಯಲು

ಪ್ರೇಮ ಪೈಫಲ್ಯದಿಂದ ವಿದ್ಯಾರ್ಥಿನಿಗೆ ಕತ್ತರಿಯಿಂದ ಯುವಕ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ನಡೆದಿದೆ.

ನಿನ್ನೆ  ಮುಂಜಾನೆ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ತುಮಕೂರು ಮೂಲದ ಮಂಜುನಾಥ್‌ನನ್ನು ಮೂಡಬಿದಿರೆ ಪೋಲೀಸರು ಬಂಧಿಸಿದ್ದಾರೆ.

ಆಳ್ವಾಸ್‌ನಲ್ಲಿ ಪಿಯುಸಿ ಓದುತ್ತಿರುವ ತುಮಕೂರು ಮೂಲದ ವಿದ್ಯಾರ್ಥಿನಿಗೆ ಕತ್ತರಿಯಿಂದ ಮಂಜುನಾಥ್ ಇರಿದಿದ್ದಾನೆ. ಮಂಜುನಾಥ್ ಹಾಗು ಯುವತಿ ಪಿಯುಸಿ ತನಕ ಜೊತೆಯಲ್ಲೇ ವಿದ್ಯಾಭ್ಯಾಸ ನಡೆಸಿದ್ದರು. ವಿದ್ಯಾರ್ಥಿನಿ ಮೆಸೇಜ್‌ಗೆ ಉತ್ತರಿಸುತ್ತಿಲ್ಲ ಎಂದು ಕುಪಿತಗೊಂಡಿದ್ದ ಯುವಕ ಮಂಜುನಾಥ್, ತುಮಕೂರಿನಿಂದ ಮೂಡಬಿದರೆಗೆ ಬಂದಿದ್ದ.

ಜೊತೆಗೆ ಯುವತಿಯ ಭೇಟಿಗೆ ಹಲವು ಬಾರಿ ಮುಂದಾಗಿದ್ದ. ಭೇಟಿ ಸಾಧ್ಯವಾಗದಕ್ಕೆ ಕುಪಿತಗೊಂಡಿದ್ದ ಮಂಜುನಾಥ್ ನಿನ್ನೆ ತರಗತಿಗೆ ತೆರಳಿ ಯುವತಿಗೆ ಕತ್ತರಿಯಿಂದ ಇರಿದಿದ್ದಾನೆ. ಘಟನೆಯಲ್ಲಿ ಯುವತಿ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಯುವಕನನನ್ನು ಹಿಡಿದು ವಿದ್ಯಾರ್ಥಿಗಳು ಪೊಲೀಸರಿಗೆ ಒಪ್ಪಿಸಿದ್ದು, ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

Share this article

ಟಾಪ್ ನ್ಯೂಸ್

More News