Breaking News :

ನೇಜಾರು ತಾಯಿ- ಮಕ್ಕಳ ಕೊಲೆ ಪ್ರಕರಣ; ಜೈಲಿನಲ್ಲಿ ಉಪವಾಸ ಕುಳಿತ ಆರೋಪಿ ಪ್ರವೀಣ್ ಚೌಗಲೆ

ಉಡುಪಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಮಾಡಿದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅನ್ನ, ನೀರು ಸ್ವೀಕರಿಸದೆ ಉಪವಾಸ ಮುಷ್ಕರ ಹೂಡಿದ್ದಾನೆ ಎಂದು ವರದಿಯಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪ್ರವೀಣ್, ಆಹಾರ ಸೇವಿಸದೆ ಉಪವಾಸ ಮುಷ್ಕರ ಮಾಡುತ್ತಿದ್ದು, ಪ್ರತ್ಯೇಕ ಸೆಲ್‌ನಿಂದ ಪ್ರಧಾನ ಸೆಲ್‌ಗೆ ಶಿಫ್ಟ್‌ ಮಾಡಲು ಬೇಡಿಕೆ ಇಟ್ಟಿದ್ದಾನೆ.

2023ರ ನವೆಂಬರ್ 12ರಂದು ಉಡುಪಿಯ ನೇಜಾರ್ ಬಳಿಯ ತ್ರಿಪಾಠಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದಿತ್ತು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿಯಾಗಿದ್ದ ಪ್ರವೀಣ್ ಅರುಣ್ ಚೌಗುಲೆ ಉಡುಪಿಯಲ್ಲಿನ ಮನೆಗೆ ನುಗ್ಗಿ ಕೊಲೆ ಮಾಡಿದ್ದ. ಆರೋಪಿ ಪ್ರವೀಣನನ್ನು ಜೈಲಿ​ನ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ. ಪ್ರಕರಣದ ವಿಚಾರಣೆ ಉಡುಪಿ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಪ್ರಕರಣದ ವಿಚಾರಣೆಯನ್ನು ಬೆಂಗಳೂರು ಕೋರ್ಟ್​ಗೆ ವರ್ಗಾಯಿಸುವಂತೆ ಹಾಗೂ ಪ್ರತ್ಯೇಕ ಸೆಲ್‌ನಿಂದ ತನ್ನನ್ನು ಪ್ರಧಾನ ಸೆಲ್‌ಗೆ ಶಿಫ್ಟ್‌ ಮಾಡುವಂತೆ ಒತ್ತಾಯಿಸಿ ಈತ ಆಹಾರ ಸೇವಿಸದೆ ಹಠ ಹಿಡಿದಿದ್ದಾನೆ ಎನ್ನಲಾಗಿದೆ.

Share this article

ಟಾಪ್ ನ್ಯೂಸ್

More News