ಉಡುಪಿ;8 ತಿಂಗಳ ಹಿಂದೆ ವಿವಾಹವಾಗಿದ್ದ ಮಹಿಳೆಯೋರ್ವರು ದಾರುಣವಾಗಿ ಕೊಲೆಗೀಡಾದ ಘಟನೆ ಸಾಲಿಗ್ರಾಮದಲ್ಲಿ ಸಂಭವಿಸಿದೆ.
ಮೂಲತಃ ಕೊಪ್ಪಳದ ನಿವಾಸಿ ಜಯಶ್ರೀ ಹತ್ಯೆಗೀಡಾದವರು.
ಜಯಶ್ರೀಗೆ ಗುಂಡ್ಮಿ ಗ್ರಾಮದ ಕಿರಣ್ ಉಪಾಧ್ಯ ಅವರೊಂದಿಗೆ 8 ತಿಂಗಳ ಹಿಂದೆ ವಿವಾಹವಾಗಿತ್ತು.
ವಿವಾಹದ ನಂತರ ಇವರಿಬ್ಬರು ಕಾರ್ಕಡದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಇಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಜಯಶ್ರಿಗೆ ಕೌಟುಂಬಿಕ ಕಲಹದಿಂದ ಪತಿ ಕಿರಣ್ ಹತ್ಯೆ ನಡೆಸಿದ್ದಾನೆ ಎನ್ನಲಾಗಿದ್ದು, ಕೋಟ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.







