Breaking News :

ಉಪ್ಪಿನಂಗಡಿ: ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೋ ಪ್ರಕರಣ ದಾಖಲು

ಉಪ್ಪಿನಂಗಡಿ:  ಅಪ್ರಾಪ್ತ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪದ ಮೇಲೆ ಆರೋಪಿಯೋರ್ವನ ಮೇಲೆ ಪ್ರಕರಣ ದಾಖಲಾಗಿದೆ‌.

ವಿಟ್ಲ ನಿವಾಸಿ ಸತೀಶ್ (38) ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ

ಜೂನ್ 14 ರಂದು ಸ್ಥಳೀಯ ಕಾಲೇಜೊಂದರ ವಿಧ್ಯಾರ್ಥಿನಿಯನ್ನು ಆರೋಪಿ ಪರಿಚಯಮಾಡಿಕೊಂಡಿದ್ದ, ಬಳಿಕ ಮೊಬೈಲ್ ಪೋನ್ ನಂಬರ ಪಡೆದು ಆತ್ಮೀಯತೆ ಬೆಳೆಸಿದ್ದಾನೆ.

ಈ ನಡುವೆ ಜುಲೈ 21 ರಂದು ಆಕೆಯನ್ನು ನೆಲ್ಯಾಡಿಗೆ ಬರಲು ಹೇಳಿ, ನೆಲ್ಯಾಡಿಗೆ ಬಂದ ಆಕೆಯನ್ನು ಪಿಕಪ್ ವಾಹನದಲ್ಲಿ ಬಜತ್ತೂರು ಗ್ರಾಮದ ಕಾಂಚನ ಎಂಬಲ್ಲಿನ ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ, ಹಾಗೂ ಈ ವಿಚಾರವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಸಂತ್ರಸ್ತ ವಿದ್ಯಾರ್ಥಿನಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

Share this article

ಟಾಪ್ ನ್ಯೂಸ್

More News