Breaking News :

ಮದುವೆಯಾಗಿ ಒಂದೇ ದಿನದಲ್ಲಿ ಚಿನ್ನ, ನಗದು ಎಗರಿಸಿ ಪರಾರಿಯಾಗುತ್ತಿದ್ದ ಖತರ್ನಾಕ್ ಮ್ಯಾರೇಜ್ ಗ್ಯಾಂಗ್ ಅರೆಸ್ಟ್

ಗ್ರಾಮೀಣ ಭಾಗದ ಯುವಕರನ್ನು ಟಾರ್ಗೆಟ್‌ ಮಾಡಿಕೊಂಡು ಮದುವೆ ಹೆಸರಿನಲ್ಲಿ ಮೋಸ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗ್‌ಅನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಮದುಮಗಳು ಮೂರು ವರ್ಷದಲ್ಲಿ ನಾಲ್ಕು ಮದುವೆ ಆಗಿದ್ದಾಳೆ. ಮದುವೆಯಾಗಿದ್ದ ವಂಚಕ ಜಾಲವನ್ನು ಗುಬ್ಬಿ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.

ತಾಲ್ಲೂಕಿನ ಲಕ್ಷ್ಮೀ ಬಾಳಸಾಬ್‌ ಜನಕರ್‌ ಅಲಿಯಾಸ್‌‍ ಕೋಮಲ, ಸಿದ್ದಪ್ಪ , ಲಕ್ಷ್ಮೀಬಾಯಿ, ಬ್ರೋಕರ್‌ ಲಕ್ಷ್ಮಿ ಬಂಧಿತರು.

ಅತ್ತಿಗಟ್ಟೆ ಪಾಲಾಕ್ಷ ಎಂಬುವವರು ತಮ್ಮ ಮಗನಿಗೆ ಮದುವೆ ಮಾಡಿಸಲು ಹೆಣ್ಣು ಹುಡುಕುತ್ತಿದ್ದರು. ಹತ್ತಾರು ಮದುವೆ ಬ್ರೋಕರ್‌ ಮೂಲಕ ಹೆಣ್ಣು ಹುಡುಕಿಸಿದ್ದರೂ ಮದುವೆ ಸೆಟ್‌ ಆಗಿರಲಿಲ್ಲ. ಕುಷ್ಟಗಿ ಮೂಲದ ಬಸವರಾಜು ಎಂಬುವವರ ಮೂಲಕ ಬ್ರೋಕರ್‌ ಲಕ್ಷಿ ಎಂಬಾಕೆಯ ಪರಿಚಯವಾಗಿದ್ದು, ನಿಮ ಮಗನಿಗೆ ನಾನು ಹೆಣ್ಣು ತೋರಿಸಿ ಮದುವೆ ಮಾಡಿಸುತ್ತೇವೆ ಎಂದು ಭರವಸೆ ನೀಡಿದ್ದಳು.

ಇದಾದ ಕೆಲವು ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೆ ಮದುವೆ ಮಾಡಿಕೊಳ್ಳಬೇಕೆಂದು ಹೇಳಿದ್ದಾಳೆ. ಆಗ ಬ್ರೋಕರ್‌ ಲಕ್ಷ್ಮಿ ಈ ಕೋಮಲ ಎಂಬ ಹೆಸರಿನಲ್ಲಿ ಯುವತಿಯ ಪೋಟೋ ತೋರಿಸಿದ್ದಾಳೆ.

ಇನ್ನು ಹುಡುಗನ ಮನೆ ನೋಡಲು ಅತ್ತಿಕಟ್ಟೆ ಗ್ರಾಮಕ್ಕೆ ಬಂದಿದ್ದ ಯುವತಿ ಹಾಗೂ ಆಕೆಯ ಚಿಕ್ಕಮ-ಚಿಕ್ಕಪ್ಪ ಬಂದು ಮದುವೆ ಮಾತುಕತೆಯನ್ನೂ ಮುಗಿಸಿದ್ದರು. ನಂತರ, ಹುಡುಗ ಒಪ್ಪಿಗೆ ಇದ್ದಾನೆ, ನಿಮಗೂ ಹುಡುಗಿ ಒಪ್ಪಿಗೆ ಇದ್ದರೆ ನಾಳೆಯೇ ನಿಮೂರಿನ ದೇವಸ್ಥಾನದಲ್ಲಿ ಸಿಂಪಲ್ಲಾಗಿ ಮದುವೆ ಮಾಡಿಬಿಡೋಣ ಎಂದು ಹೇಳಿದ್ದಾರೆ.

ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದು ಮುಂದು ಯೋಚಿಸದೆ ದಿಢೀರ್‌ ಮದುವೆಗೆ ಒಪ್ಪಿಕೊಂಡು ಗ್ರಾಮದಲ್ಲಿ ಮದುವೆ ಮಾಡಿದ್ದರು. ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು. ಮದುಮಗಳಿಗೆ ಚಿನ್ನದ ಸರ, ತಾಳಿ, ಓಲೆ ಸೇರಿ ಸುಮಾರು 25 ಗ್ರಾಂ ತೂಕದ ಚಿನ್ನಾಭರಣವನ್ನು ಗಂಡಿನ ಮನೆಯವರು ಮಾಡಿಸಿಕೊಟ್ಟಿದ್ದರು. ಜತೆಗೆ ಇನ್ನು ಬ್ರೋಕರ್‌ ಲಕ್ಷ್ಮೀಗೆ ಬರೋಬ್ಬರಿ 1.5 ಲಕ್ಷ ರೂ. ಹಣ ನೀಡಿದ್ದರು.

ಮದುವೆ ಮುಗಿದ 2 ದಿನದ ನಂತರ ತವರು ಮನೆಗೆ ಯುವತಿಯನ್ನು ಕರೆದುಕೊಂಡು ಹೋಗಬೇಕೆಂದು ಮದುವೆಯಾಗಿದ್ದ ಕೋಮಲಳನ್ನು ಆಭರಣದೊಂದಿಗೆ ಕರೆದುಕೊಂದು ಹೋಗಿದ್ದರು. ಒಂದು ವಾರ ಕಳೆದರೂ ವಾಪಸ್‌‍ ಬರಲಿಲ್ಲ. ಇದರದ ಆತಂಕಗೊಂಡ ಪಾಲಾಕ್ಷ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ.

Share this article

ಟಾಪ್ ನ್ಯೂಸ್

More News