Breaking News :

ಗೋಮಾಂಸ ಮಾಂಸ ಮಾರಾಟಕ್ಕೆ ಯತ್ನ : ಅಸ್ಸಾಂ ಕಾರ್ಮಿಕನ ಬಂಧನ

  1. ಗೋಮಾಂಸ ಮಾಂಸ ಮಾರಾಟಕ್ಕೆ ಯತ್ನ : ಅಸ್ಸಾಂ ಕಾರ್ಮಿಕನ ಬಂಧನ

ಮಡಿಕೇರಿ : ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಪೋಲೀಸ್ ಉಪಠಾಣಾ ವ್ಯಾಪ್ತಿಯ ಕುಂಬೂರು ಎಸ್ಟೇಟ್ ನಲ್ಲಿ ಕಾರ್ಮಿಕನಾಗಿರುವ ಅಸ್ಸಾಂ ಮೂಲದ ಕಾರ್ಮಿಕ ಉಲಾಲ್ ಬಿಲ್ (28) ಎಂಬಾತ ಗೋಮಾಂಸವನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಪೋಲೀಸರಿಗೆ ಮಾಹಿತಿ ನೀಡಿದರು

ಸ್ಥಳಕ್ಸಕೆ ಆಗಮಿಸಿದ ಪೊಲೀಸರು 15 ಕೆ.ಜಿ.ಯಷ್ಟು ಗೋಮಾಂಸದ ಸಮೇತ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ನಿಷೇಧವಿದ್ದರೂ ಸಹ ಪದೇ ಪದೇ ಈ ರೀತಿಯ ಪ್ರಕರಣಗಳು ಮರುಕಳುಹಿಸುತ್ತಿರುವುದಕ್ಕೆ ಪೋಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಬೋಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this article

ಟಾಪ್ ನ್ಯೂಸ್

More News