Breaking News :

ಅಖಂಡ ಭಾರತ ಸಂಕಲ್ಪ  : ಮಡಿಕೇರಿಯಲ್ಲಿ ಬೃಹತ್ ಪಂಜಿನ ಮೆರವಣಿಗೆ


ಅಖಂಡ ಭಾರತ ಸಂಕಲ್ಪ  : ಮಡಿಕೇರಿಯಲ್ಲಿ ಬೃಹತ್ ಪಂಜಿನ ಮೆರವಣಿಗೆ


ಮಡಿಕೇರಿ : ಕೊಡಗು ಜಿಲ್ಲಾ ಹಿಂದು ಜಾಗರಣ ವೇದಿಕೆಯ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು. ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಅಖಂಡ ಭಾರತದ ಸಂಕಲ್ಪ ತೊಟ್ಟರು.

ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರಂಭಗೊಂಡ ಪಂಜಿನ ಮೆರವಣಿಗೆ ಇಂದಿರಾ ಗಾಂಧಿ ವೃತ್ತ, ಅಂಚೆ ಕಚೇರಿ, ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಕೊಡವ ಸಮಾಜದ ವರೆಗೆ ಮೆರವಣಿಗೆ ಸಾಗಿತು.

ಕೊಡವ ಸಮಾಜದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಸ್ತುತ ಭಾರತ ಎದುರಿಸುತ್ತಿರುವ ಸವಾಲುಗಳ ಕುರಿತು ಪ್ರಮುಖರು ಮಾಹಿತಿ ನೀಡಿದರು.

ಇದೆ ಸಂದರ್ಭ ದೇಶಭಕ್ತಿ ಗಾಯನ ಕೂಡ ನಡೆಯಿತು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಏಳು ಕಡೆಗಳಲ್ಲಿ ಖಂಡ ಭಾರತದ ಸಂಕಲ್ಪ ದಿನ ಕಾರ್ಯಕ್ರಮ, ಪಂಜಿನ ಮರವಣಿಗೆ ಹಾಗೂ ವಾಹನ ಜಾಥಾ ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜ ರಂಜನ್ (ಬೋಜೇಗೌಡ) ತಿಳಿಸಿದರು.

ಜಾಗರಣ ವೇದಿಕೆಯ ಪ್ರಮುಖರಾದ ಸುನಿಲ್‌, ಚೇತನ್ ಶಾಂತಿನಿಕೇತನ, ಅಲ್ಲಮಾಡ ಶರತ್, ತಿಮ್ಮಯ್ಯ, ಅಪ್ಪು ರೈ ಮತ್ತಿತರರು ಇದ್ದರು.

Share this article

ಟಾಪ್ ನ್ಯೂಸ್

More News