Breaking News :

ಇಲಾಖೆ ಕಾರ್ಯಚರಣೆ : ಅರಣ್ಯಕ್ಕೆ ಮರಳಿದ 23 ಆನೆಗಳು 

 

ಇಲಾಖೆ ಕಾರ್ಯಚರಣೆ : ಅರಣ್ಯಕ್ಕೆ ಮರಳಿದ 23 ಆನೆಗಳು


 ಸಿದ್ದಾಪುರ : ತಿತಿಮತಿ ವಲಯದ ಚೆನ್ನಂಗಿ ಶಾಖಾ ವ್ಯಾಪ್ತಿಗೆ ಒಳಪಡುವ ಮಾರ್ಗೋಳ್ಳಿ ಮತ್ತು ಮೈಲಾಪುರ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಮತ್ತೆ ಅರಣ್ಯಕ್ಕೆ ಅಟ್ಟಲಾಗಿದೆ.

ಮಂಗಳವಾರ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಸುಮಾರು 4 ಮರಿ ಸೇರಿದಂತೆ 23 ಕಾಡಾನೆಗಳನ್ನು ಮಾಲ್ದಾರೆ ಮೀಸಲು ಅರಣ್ಯಕ್ಕೆ ಮರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯವರ ಸೂಚನೆ ಮೇರೆಗೆ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಕೆ.ಪಿ ರವರ ನಿರ್ದೇಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಗಂಗಾಧರ್ ರವರ ಮಾರ್ಗದರ್ಶನದಲ್ಲಿ ಚೆನ್ನಂಗಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಗಸ್ತು ಅರಣ್ಯ ಪಾಲಕ ರಾಜೇಶ್ ಆರ್ ಆರ್‌ಟಿ ತಂಡದ ರಂಜಿತ್, ಶಂಕರ್, ಪ್ರದೀಪ, ರೋಷನ್, ಸುಂದರ, ಧನು, ಪ್ರವೀಣ, ಪ್ರಜ್ವಲ್ ಮತ್ತು ಅರುಣ ಹಾಗೂ ಮಾಲ್ದಾರೆ ಶಶಿ ಭಾಗವಹಿಸಿದ್ದರು.

Share this article

ಟಾಪ್ ನ್ಯೂಸ್

More News