Breaking News :

ಕಾಡಾನೆ ದಾಳಿ: ತೋಟ ಕಾರ್ಮಿಕನ ದುರ್ಮರಣ : ಆಸ್ಪತ್ರೆ ಎದುರು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ 

 


ಜನವಾಹಿನಿ News ಸಿದ್ದಾಪುರ : ಎಮ್ಮೆಗುಂಡಿ ತೋಟದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಹನುಮಂತ ಎಚ್.ಡಿ (56) ಎಂದು ಗುರುತಿಸಲಾಗಿದೆ. ಟಾಟಾ ಸಂಸ್ಥೆಯ ಎಮ್ಮೆಗುಂಡಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದೀಡರ್ ದಾಳಿ ನಡೆಸಿದ್ದು, ಕಾಡಾನೆ ಅವರ ಹೊಟ್ಟೆ ಭಾಗಕ್ಕೆ ದಂತದಿಂದ ತಿವಿದ ಪರಿಣಾಮ ಅವರ ಹೊಟ್ಟೆಯೊಳಗಿನ ಭಾಗಗಳು ಹೊರಗಡೆ ಬಂದಿದ್ದು ಹನುಮಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಮೃತದೇಹವನ್ನು ಸಿದ್ದಾಪುರ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ತಂದ ಸಂಧರ್ಭ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳನ್ನು ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆ ಮುಂಭಾಗ ಸೇರಿದ ಸ್ನೇಹಿತರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತು. ಮೃತ ಹನುಮಂತ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಈ ವೇಳೆ ಮಾತನಾಡಿದ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಮಿತಿಮೀರಿದ್ದು, ಆನೆ ದಾಳಿಗೆ ಹಲವು ಬಡ ಜೀವಗಳು ಬಲಿಯಾಗಿವೆ. ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆ ಮತ್ತು ಸರ್ಕಾರಗಳು ವಿಫಲಗೊಂಡಿದೆ. ಇದರಿಂದಾಗಿ ದಿನೇ ದಿನೇ ಆನೆ ಮಾನವ ಸಂಘರ್ಷ ಹೆಚ್ಚುತ್ತಲೇ ಎಂದು ಆಕ್ರೋಶ ಹೊರಹಾಕಿದರಲ್ಲದೆ. ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿರುವ ಅರಣ್ಯ ಮಂತ್ರಿಗಳು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದು, ಜಿಲ್ಲೆಯ ವಿವಿಧ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವಿಜು ಸುಬ್ರಮಣಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಜಿತ್ ಕರುಂಬಯ್ಯ, ಕಾರ್ಮಿಕ ಮುಖಂಡ ಸೋಮಪ್ಪ, ಭರತ್, ಮಹದೇವ್, ರಮೇಶ್, ರಾಚಪ್ಪಾಜಿ, ಮುದ್ದ ಕಳಲ ಸಂಘದ ನಗರಾಧ್ಯಕ್ಷ ಕವಿರಾಜು, ತಮಿಳು ಸಂಘದ ತಿರುಮಾಳ್ ರಾಜ ಸೇರಿದಂತೆ ಮತ್ತಿರರು ಇದ್ದರು.

Share this article

ಟಾಪ್ ನ್ಯೂಸ್

More News