Breaking News :

ಡಿ.08 ರಂದು ಪಿಂಚಣಿ ಅದಾಲತ್

 


ಜನವಾಹಿನಿ News ಮಡಿಕೇರಿ : ಪಿಂಚಣಿ ಅದಾಲತ್‍ನ ಮುಂದಿನ ಸಭೆಯು ಡಿಸೆಂಬರ್, 08 ರಂದು ಮಧ್ಯಾಹ್ನ 4 ಗಂಟೆಗೆ ಕೊಡಗು ಅಂಚೆ ವಿಭಾಗದ ವಿಭಾಗೀಯ ಕಚೇರಿ ಸಿದ್ದಾಪುರ ರಸ್ತೆ ಅಶೋಕಪುರದಲ್ಲಿ ನಡೆಯಲಿದೆ.

ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಪೋಸ್ಟಲ್ ಪಿಂಚಣಿ ಸಂಬಂಧಿಸಿದ ಎಲ್ಲಾ ತರಹದ ಅಹವಾಲುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ಅಹವಾಲುಗಳಿದ್ದಲ್ಲಿ ‘ಪಿಂಚಣಿ ಅದಾಲತ್’ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಡಿಸೆಂಬರ್, 08 ರೊಳಗೆ ತಲುಪುವಂತೆ ಕಳುಹಿಸಬೇಕು. ನಂತರ ಡಿಸೆಂಬರ್, 08 ರಂದು ನಡೆಯುವ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್

More News