ಜನವಾಹಿನಿ News ಸಿದ್ದಾಪುರ : ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕರಡಿಗೋಡು ಗ್ರಾಮಕ್ಕೆ ತೆರಳುವ ರಸ್ತೆ ದುರಸ್ತಿ ಕಾರ್ಯಕ್ಕೆ ಭಾನುವಾರ ಶಾಸಕ ಪೊನ್ನಣ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದಿದ್ದ ಈ ರಸ್ತೆಗೆ ಸುಮಾರು 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಸೇಕ್ರೆಡ್ ಹಾರ್ಟ್ ಹಾಸ್ಪಿಟಲ್ ಸಮೀಪದಿಂದ ಬಸವೇಶ್ವರ ದೇವಾಲಯದ ವರೆಗಿನ ಸುಮಾರು ಒಂದು ಕಿಲೋ ಮೀಟರ್ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ. ಇದರಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಡಾಂಬರು ರಸ್ತೆ ಕಾಮಗಾರಿ ಅಡಕವಾಗಿದೆ.
ವಿರಾಜಪೇಟೆ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಮಾಜಿ ಪಟಣಪಂಚಾಯತಿ ಸದಸ್ಯ ಮತಿನ್, ಸಿದ್ದಾಪುರ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರತೀಶ್, ಗ್ರಾಮ ಪಂಚಾಯತಿ ಸದಸ್ಯ ಜಾಫರ್ ಅಲಿ, ಮತ್ತಿರರು ಉಪಸ್ಥಿತರಿದ್ದರು.
ಇದೆ ಸಂದರ್ಭ ಕರಡಿಗೋಡು ಗ್ರಾಮಸ್ಥರಾದ ಅಜಿತ್ ಕರುಂಬಯ್ಯ, ವಿನೋದ್ ಸೇರಿದಂತೆ ಮತ್ತಿತರರು ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದ ತಮ್ಮ ಗ್ರಾಮದ ರಸ್ತೆ ದುರಸ್ತಿಗೆ ಅನುದಾನ ಒದಗಿಸಿದ ಶಾಸಕ ಪೊನ್ನಣ್ಣ ನವರಿಗೆ ಅಭಿನಂದನೆ ಸಲ್ಲಿಸಿದ್ದರು.







