Breaking News :

ಫೆ.22ರಂದು ಮೂರ್ನಾಡುವಿನ ಪಾಂಡಾಣೆ ನಾಡ್‌ಮಂದ್ ಮತ್ತು ಶಾಲಾ ಮೈದಾನದಲ್ಲಿ ವಿರಾಟ್ ಹಿಂದೂ ಸಂಗಮ ಕಾರ್ಯಕ್ರಮ

 


ಜನವಾಹಿನಿ News ಮಡಿಕೇರಿ : ಹಿಂದೂ ಸಂಗಮ ಆಯೋಜನಾ ಸಮಿತಿಯ ಮೂರ್ನಾಡು ಮಂಡಲ ವತಿಯಿಂದ ಫೆ.೨೨ ರಂದು ಮೂರ್ನಾಡುವಿನ ಪಾಂಡಾಣೆ ನಾಡ್‌ಮಂದ್ ಮತ್ತು ಶಾಲಾ ಮೈದಾನದಲ್ಲಿ ವಿರಾಟ್ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಡಲ ಅಧ್ಯಕ್ಷ ಚೆಟ್ಟಿಮಾಡ ಜಯಂತ್ ಕುಮಾರ್ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃಭೂಮಿ, ಹಿಂದೂಧರ್ಮ ಮತ್ತು ಸಂಸ್ಕೃತಿ ರಕ್ಷಣೆ ಹಾಗೂ ಸಂವರ್ಧನೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಹಿಂದೂ ಸಂಘಟಿತನಾದಾಗ ಮಾತ್ರ ಧರ್ಮ ಬಲಿಷ್ಠವಾಗುತ್ತದೆ. ಮಾತೃಭೂಮಿ ರಕ್ಷಣೆಯಾಗುತ್ತದೆ. ಈ ಮಹತ್ವದ ಉದ್ದೇಶದಿಂದ ಮೂರ್ನಾಡು ಮಂಡಲ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮೂರ್ನಾಡು ಮಂಡಲದ ಕಾರ್ಯದರ್ಶಿ ಪುದಿಯೊಕ್ಕಡ ಮದುಕುಮಾರ್ ಮಾತನಾಡಿ, ಅಂದು ಮಧ್ಯಾಹ್ನ ೨.೧೫ ಗಂಟೆಗೆ ಮೂರ್ನಾಡು ವಿದ್ಯಾಸಂಸ್ಥೆಯ ಆಟದ ಮೈದಾನದಿಂದ ಗಾಂಧಿನಗರ-ಮಹಿಳಾ ಸಮಾಜದ ಮಾರ್ಗವಾಗಿ ಮೂರ್ನಾಡು ಮುಖ್ಯಬೀದಿಯಲ್ಲಿ ಶೋಭಾಯಾತ್ರೆ ಸಾಗಲಿದೆ. ಪಟ್ಟಣದ ಪಂಚರತ್ನ ಹೊಟೇಲ್‌ನ ಸಮೀಪದ ವೃತ್ತದಿಂದ ಅದೇ ಮಾರ್ಗವಾಗಿ ಪಾಂಡಾಣೆ ನಾಡ್‌ಮಂದ್ ಮತ್ತು ಶಾಲಾಮೈದಾನದವರೆಗೆ ಶೋಭಾಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ಚಂಡೆವಾದ್ಯ, ಕೊಡವ ವಾಲಗ, ಭಜನೆ ನೃತ್ಯ ಸಾಗಲಿದೆ. ಸಭಾ ಕಾರ್ಯಕ್ರಮ ಸಂಜೆ ೪ ಗಂಟೆಗೆ ಆರಂಭವಾಗಲಿದ್ದು, ಈ ಸಂದರ್ಭ ಬೌದ್ಧಿಕ್ ನಡೆಯಲಿದೆ. ಅಂದು ಮೂರ್ನಾಡು ಮತ್ತು ಸುತ್ತಮುತ್ತಲಿನ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಹಿಂದೂ ಧರ್ಮ ಮತ್ತು ಮಾತೃಭೂಮಿ ರಕ್ಷಣೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮೂರ್ನಾಡು ಮಂಡಲ ಸಂಯೋಜಕರಾದ ಈರಾ ಸುಬ್ಬಯ್ಯ, ಕೆ.ವಸಂತ್.ಕೊಡಂಬೂರು, ಖಜಾಂಚಿ ಎ.ಸಜೀವ್ ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News