Breaking News :

ಹೊಸೂರಿನಲ್ಲಿ ಹಿಂದೂ ಸಂಗಮ ಬೃಹತ್ ಸಮಾವೇಶ : ಹಿಂದೂ ಸಮಾಜ ಸಂಘಟಿತವಾದರೆ ಮಾತ್ರ ಸದೃಢ ಮತ್ತು ಸುರಕ್ಷಿತ ರಾಷ್ಟ್ರ ನಿರ್ಮಾಣ ಸಾಧ್ಯ : ಮೋಹನ್ ಗೌಡ

ಶೋಭಾಯಾತ್ರೆಯಲ್ಲಿ ಕೇಸರಿ ಶಲ್ಯ ಧರಿಸಿ ಬಾವುಟ ಹಿಡಿದು ಮೆರವಣಿಗೆ ಸಾಗಿದ ಹಿಂದೂ ಬಾಂಧವರು


ಜನವಾಹಿನಿ News ಮಡಿಕೇರಿ : ಹಿಂದೂ ಸಮಾಜ ಸಂಘಟಿತವಾದರೆ ಮಾತ್ರ ಸದೃಢ ಮತ್ತು ಸುರಕ್ಷಿತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ.

ಹಿಂದೂ ಸಂಗಮ ಆಯೋಜನಾ ಸಮಿತಿ ವಿರಾಜಪೇಟೆ ತಾಲ್ಲೂಕು, ಹೊಸೂರು ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತೀಯರು ಜಗತ್ತಿಗೆ ಸಂಸ್ಕೃತಿ, ನಾಗರಿಕತೆ ಹಾಗೂ ಬದುಕುವ ಕಲೆ ಹೇಳಿಕೊಟ್ಟಿದ್ದು, ನಮ್ಮ ದೇಶ ಉಳಿಯಬೇಕೆಂದರೇ ನಮ್ಮ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕು ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಭದ್ರಕಾಳಿ ದೇವಾಲಯದಿಂದ ಶ್ರೀ ಮಹಾದೇವರ ದೇವಸ್ಥಾನದವರೆಗೂ ಭವ್ಯ ಶೋಭಾಯಾತ್ರೆ ನಡೆಯಿತು. ಶ್ರೀ ಭದ್ರಕಾಳಿ ದೇವಸ್ಥಾನದಿಂದ ಆರಂಭಗೊಂಡ ಶೋಭಾ ಯಾತ್ರೆಗೆ ಶಂಖನಾದ ಮೊಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಿಂದೂ ಸಮಾಜದ ಮುಖಂಡರು ಚಾಲನೆ ನೀಡಿದರು.

ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು ಕೇಸರಿ ಶಲ್ಯ ಧರಿಸಿ ಬಾವುಟ ಹಿಡಿದು ಮೆರವಣಿಗೆ ಸಾಗಿದರು. ಚಂಡೆವಾದ್ಯ, ಕೊಡಗಿನ ವಾಲಗ, ಗೊಂಬೆ ಕುಣಿತ ಸಮ್ಮುಖದಲ್ಲಿ ಕಳಸ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾಗಿ ಮೆರಗು ನೀಡಿದರೆ. ಸುವೃತ ನಾಟ್ಯಾಲಯದ ವಿದ್ಯಾರ್ಥಿಗಳ ಭಜನಾ ನೃತ್ಯ ಗಮನ ಸೆಳೆಯಿತು.

ಬಳಿಕ ಮಹಾದೇವರ ದೇವಾಲಯ ಆವರಣದಲ್ಲಿರುವ ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಸಮಾಜದ ಮುಖಂಡರುಗಳು ಮಾತನಾಡಿ “ಪ್ರತಿ ಹಿಂದೂ ನಾವೆಲ್ಲ ಒಂದು” ಎಂಬ ಪರಿಕಲ್ಪನೆಯಲ್ಲಿ ಒಗ್ಗೂಡಬೇಕಾಗಿದೆ’ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಸುಬ್ರಮಣ್ಯ ಭರಣಿಕೆರೆ, ಮೊಳ್ಳೇರ ಸುಭಾಷ್ ಭೀಮಯ್ಯ, ಮೊಳ್ಳೇರ ರತ್ನ ಪೂಣಚ್ಚ, ಮೊಳ್ಳೇರ ಸದಾ ಅಪ್ಪಚ್ಚು, ಕತ್ರಿ ಕೊಲ್ಲಿ ದರ್ಶನ್, ಪ್ರಭು ಉತ್ತಪ್ಪ ಗೊಟ್ಟಡ, ಚೋವಂಡ ದರ್ಶನ್, ನಾರಾಯಣ, ತಂಗರಾಜ್, ಹೆಚ್ ಪ್ರಕಾಶ್, ಲಕ್ಷ್ಮಿ. ಹೆಚ್ ಸೇರಿದಂತೆ ಹಿಂದೂ ಸಮಾಜದ ಪ್ರಮುಖರು ಹಾಗೂ ಕಾರ್ಯಕರ್ತರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಗ್ರಾ.ಪಂ ಸದಸ್ಯೆ ಸುಶೀಲಾ.ಟಿ ಹಾಗೂ ಲೇಖಕಿ ಹಾಗೂ ಸಾಹಿತಿ ಪಂದ್ಯಂಡ ರೇಣುಕಾ ಸೋಮಯ್ಯ ನಿರೂಪಿಸಿದರೆ. ಕೊಲ್ಲೀರ ಗೋಪಿ ಚಿನ್ನಪ್ಪ ಸ್ವಾಗತಿಸಿ ಕೊಲ್ಲೀರ ಧರ್ಮಜ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಮಕ್ಕಳ ಸಾಂಸ್ಕೃತಿಕ ನೃತ್ಯ ವೈಭವ ಆಕರ್ಷಣೀಯವಾಗಿತು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ನೀರು ,ತಂಪು ಪಾನಿಯ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ನೆರೆದಿದ್ದವರಿಗೆ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

*******************

ಹೊಸೂರು ಮಂಡಲದಿಂದ ಆಯೋಜಿಸಲಾಗಿದ್ದ ಹಿಂದೂ ಸಂಗಮ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮ ಯಶಸ್ವಿಯಾಗಿದೆ.ಕಳೆದ ಹತ್ತು ದಿನಗಳಿಂದ ಮನೆ ಮನೆಗೆ ತೆರಳಿ ಸಮಾಜ ಬಾಂಧವರನ್ನು ಆಹ್ವಾನಿಸಿ, ಪ್ರಮುಖ ಬೀದಿಗಳಲ್ಲಿ ಬಂಟಿಂಗ್ಸ್ ಹಾಗೂ ಫ್ಲೆಕ್ಸ್ ಗಳನ್ನ ಅಳವಡಿಸಿ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಯಲು ಸಹಕರಿಸಿದ ಸರ್ವರಿಗೂ ಮನದಾಳದ ಧನ್ಯವಾದಗಳು. ಧರ್ಮದ ರಕ್ಷಣೆ ಪ್ರತಿಯೊಬ್ಬ ಹಿಂದೂವಿನ ಹೊಣೆ, ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು.

ಕೊಲ್ಲೀರ ಗೋಪಿ ಚಿನ್ನಪ್ಪ, ಹಿಂದೂ ಸಂಗಮ ಕಾರ್ಯಕ್ರಮ ಸಂಚಾಲಕರು ಹೊಸೂರು ಮಂಡಲ


Share this article

ಟಾಪ್ ನ್ಯೂಸ್

More News