ಜನವಾಹಿನಿ News ಸಿದ್ದಾಪುರ : ವಿರಾಜಪೇಟೆಯಿಂದ ಕುಶಾಲನಗರಕ್ಕೆ ಟಿಂಬರ್ ಸಾಗಿಸುತ್ತಿದ್ದ ಲಾರಿಯೊಂದು ಹಳೆ ಸಿದ್ದಾಪುರ ಚರ್ಚ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದಿದ್ದು, ಸಂಜೆ 7.15 ರ ನಂತರ ಸಿದ್ದಾಪುರ, ನೆಲ್ಯಹುದಿಕೇರಿ, ಗುಹ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು ಸುಮಾರು 2 ಗಂಟೆಗೂ ಅಧಿಕ ಕಾಲ ಕತ್ತಲಲ್ಲಿ ಮುಳುಗುವಂತಾಗಿತು.
ವಿಷಯ ತಿಳಿದು ಸ್ಥಳಕ್ಕೆ ಬಂದ ಸೆಸ್ಕ್ ಸಿಬ್ಬಂದಿಗಳಾದ ಪರಶುರಾಮ್, ಆನಂದ, ಅಕ್ಷಯ ಮತ್ತಿತರರು ಸೇರಿ ತಾತ್ಕಾಲಿಕವಾಗಿ ಸಂಪರ್ಕವನ್ನು ಸರಿಪಡಿಸಿದ್ದು, ಬಳಿಕ ವಿದ್ಯುತ್ ಸರಬರಾಜು ಮಾಡಲಾಗಿದೆ.
ಘಟನೆಯಲ್ಲಿ ಅಂದಾಜು 25 ಸಾವಿರ ಮೌಲ್ಯದ ವಿದ್ಯುತ್ ಪರಿಕರಗಳು ಹಾನಿಯಾಗಿವೆ ಎಂದು ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.






