Breaking News :

ಕಾಡುಕೋಣಗಳ ಹಿಂಡು ಪ್ರತ್ಯಕ್ಷ ; ಕಾರ್ಮಿಕರಲ್ಲಿ ಹೆಚ್ಚಿದ ಆತಂಕ

 


ಜನವಾಹಿನಿ News ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಕರಡಿಗೋಡು ವ್ಯಾಪ್ತಿಯ ಕಾಫಿತೋಟದಲ್ಲಿ 10ಕ್ಕೂ ಅಧಿಕ ಕಾಡುಕೋಣಗಳ ಹಿಂಡು ಬೀಡುಬಿಟ್ಟಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ.

ಕಾಫಿತೋಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಡುಕೋಣಗಳು ಸಂಚರಿಸುತ್ತಿರುವ ದೃಶ್ಯ ಕಂಡು ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುತ್ತಿದ್ದಾರೆ. ಕಾಡಾನೆಗಳ ಹಾವಳಿ ಇನ್ನೂ ಕಡಿಮೆಯಾಗದಿರುವಾಗಲೇ ಕಾಡುಕೋಣಗಳ ದಾಳಿ ಭೀತಿ ಹೆಚ್ಚಾಗಿದೆ.

ಇತ್ತೀಚೆಗಷ್ಟೇ ಈ ವ್ಯಾಪ್ತಿಯಲ್ಲಿ ಗೂಡ್ಸ್ ವಾಹನಕ್ಕೆ ಕಾಡುಕೋಣವೊಂದು ಡಿಕ್ಕಿ ಹೊಡೆದು ಕಾಲು ಮುರಿತಕ್ಕೊಳಗಾಗಿದ್ದ ಪ್ರಸಂಗ ನಡೆದಿತ್ತು. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಕಾಡುಕೋಣಗಳು ಪ್ರತ್ಯಕ್ಷಗೊಳ್ಳುವ ಮೂಲಕ ಮತ್ತೆ ಕಾರ್ಮಿಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದು, ಅರಣ್ಯ ಇಲಾಖೆ ಇತ್ತ ಗಮನ ಹರಿಸಿ ಕಾಡುಕೋಣಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Share this article

ಟಾಪ್ ನ್ಯೂಸ್

More News