ಜನವಾಹಿನಿ News ಮಡಿಕೇರಿ : ಕರ್ನಾಟಕ ರಾಜ್ಯ ಕಟ್ಡಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೊಡಗು ಜಿಲ್ಲಾ ವ್ಯಾಪ್ತಿಯ ನೋಂದಾಯಿತ ಅರ್ಹ ಕಟ್ಟಡ ಕಾರ್ಮಿಕರಿಗೆ ಆರು ವೃತ್ತಿಗಳ ಸೇಫ್ಟಿ ಕಿಟ್‍ಗಳಾದ ಮೇಷನ್, ಎಲೆಕ್ಟ್ರೀಷಿಯನ್, ಪ್ಲಂಬರ್, ಪೈಂಟರ್, ವೆಲ್ಡರ್ ಮತ್ತು ಕಾರ್ಪೆಂಟರ್ ವೃತ್ತಿಗಳ ಕಾರ್ಮಿಕರಿಗೆ ವಿತರಿಸುವ ಸಲುವಾಗಿ ಕಿಟ್‍ಗಳನ್ನು ಸರಬರಾಜು ಮಾಡಲಾಗಿದೆ.
ಈ ಕಿಟ್‍ಗಳನ್ನು ನೋಂದಾಯಿತ ಅರ್ಹ ಕಟ್ಟಡ ಕಾರ್ಮಿಕರು ಜಿಲ್ಲೆಯ ಐದು ತಾಲ್ಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕರ ವೃತ್ತದ ಕಚೇರಿಯಲ್ಲಿ ಕಾರ್ಮಿಕರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್‍ನ ಪ್ರತಿಗಳನ್ನು ನೀಡಿ ಸಂಬಂಧಿಸಿದ ವೃತ್ತಿಯ ಕಿಟ್‍ಗಳನ್ನು ಮಾರ್ಚ್, 18 ರೊಳಗೆ ಪಡೆದುಕೊಳ್ಳುವಂತೆ ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಟಿ.ಕಾವೇರಿ ಅವರು ತಿಳಿಸಿದ್ದಾರೆ.







