ಜನವಾಹಿನಿ News ಗೋಣಿಕೊಪ್ಪ : ಪೊನ್ನಂಪೇಟೆ ತಾಲೂಕು ಮೂಗಟಿಗೇರಿ ಗ್ರಾಮದಲ್ಲಿರುವ ಅಂಬಲ ಬಳಿ ನಿನ್ನೆ ರಾತ್ರಿ ಈ ಭಾಗದಲ್ಲಿ ಹೆಚ್ಚಿನ ಮಳೆಯ ಆದ ಸಂದರ್ಭ ಬಾರಿ ಗುಡುಗು ಸಿಡಿಲು ಕಾಣಿಸಿಕೊಂಡು ಇಲ್ಲಿನ ವಿದ್ಯುತ್ ಟ್ರಾನ್ಸ್ಫಾರ್ಮರ್ ಗೆ ಸಿಡಿಲು ಅಪ್ಪಳಿಸಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಟ್ರಾನ್ಸ್ಫಾರ್ಮರ್ ಹೊತ್ತಿ ಉರಿದ ಘಟನೆ ನಡೆದಿದೆ.
ಟ್ರಾನ್ಸ್ಫಾರ್ಮರ್ ಸಮೀಪ ಯಾವುದೇ ಮನೆಗಳು ಇಲ್ಲದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಚೆಸ್ಕಾಂ ಸಿಬ್ಬಂದಿಗಳು ತೆರಳಿ ಆಗಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.







