Breaking News :

ನಿಯಂತ್ರಣ ತಪ್ಪಿದ ಸರಕಾರಿ ಬಸ್ : ಮಡಿಕೇರಿ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ಅನಾಹುತ 

 


ಜನವಾಹಿನಿ News ಮಡಿಕೇರಿ : ನಿಯಂತ್ರಣ ತಪ್ಪಿದ ಬಸ್ಸೊಂದು ಬಸ್ ನಿಲ್ದಾಣದ ಕಂಭಕ್ಕೆ ಡಿಕ್ಕಿಯಾಗಿ ನಿಂತ ಘಟನೆ ಮಡಿಕೇರಿ ಸರಕಾರಿ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಮಡಿಕೇರಿಯಿಂದ ಸುಳ್ಯಕ್ಕೆ ತೆರಳಬೇಕಿದ್ದ ಸರಕಾರಿ ಶಟಲ್ ಬಸ್ಸೊಂದು ಮಡಿಕೇರಿ ಬಸ್ ನಿಲ್ದಾಣದಲ್ಲೇ ಬ್ರೇಕ್ ವಿಫಲಗೊಂಡು ನಿಲ್ದಾಣದ ಕಂಭಕ್ಕೆ ಡಿಕ್ಕಿಯಾಗಿ ನಿಂತಿದ್ದು, ಅದೃಷ್ಟವಾಸವಾಗಿ ಪ್ರಯಾಣಿಕರು ಅನಾಹುತದಿಂದ ಪಾರಾಗಿದ್ದಾರೆ.

ಕಂಬ ಇಲ್ಲದೇ ಹೋಗಿದ್ದರೆ ಇತರ ಬಸ್ ಗೆ ಕಾಯುತ್ತಿದ್ದ ಮತ್ತು ನಿಲ್ದಾಣದಲ್ಲಿ ಕುಳಿತಿದ್ದ ಹತ್ತಾರು ಪ್ರಯಾಣಿಕರ ಜೀವಕ್ಕೆ ಅಪಾಯ ಇತ್ತು.

ಚಾಲಕನ ಅಜಾಗರುಕತೆ ಹಾಗೂ ಬಸ್ ಗಳ ಸಮರ್ಪಕ ನಿರ್ವಹಣೆ ಕೊರತೆ ಇಂಥ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share this article

ಟಾಪ್ ನ್ಯೂಸ್

More News