Breaking News :

ಎಸ್‌ಐಆರ್ ಅಡಿಯಲ್ಲಿ ಮತದಾರರ ಪಟ್ಟಿ ಅಪ್ಡೇಟ್ ಕಡ್ಡಾಯ : ಇಂದೇ ಮಾಹಿತಿ ಅಪ್ಡೇಟ್ ಮಾಡಿಸಿ ತಪ್ಪಿದಲ್ಲಿ, ಮತದಾನದ ಹಕ್ಕನ್ನೇ ಕಳೆದುಕೊಳ್ಳುವಿರಿ ಹುಷಾರ್…!


ಜನವಾಹಿನಿ News ಮಡಿಕೇರಿ : ಚುನಾವಣಾ ಆಯೋಗವು ನಡೆಸುವ ಈ ಪರಿಷ್ಕರಣೆ ಮತದಾರರ ಪಟ್ಟಿಯನ್ನು ನಿಖರಗೊಳಿಸಲು ಕಡ್ಡಾಯ.

ಯಾರಿಗೆ ಅನ್ವಯ: ಅರ್ಹ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ ಅಥವಾ ತೆಗೆದುಹಾಕುವಿಕೆಗಾಗಿ ಇದು ಅನ್ವಯಿಸುತ್ತದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಗಳಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯನ್ನು ಅಪ್ಡೇಟ್ ಮಾಡುತ್ತಾರೆ. ಎಸ್‌ಐಆರ್ ಅಡಿಯಲ್ಲಿ ಮತದಾರರ ಪಟ್ಟಿ ಅಪ್ಡೇಟ್ ಆಗುವುದರಿಂದ ಪ್ರತಿಯೊಬ್ಬ ಮತದಾರರು ಪರಿಶೀಲನೆಗೆ ಸಹಕರಿಸುವುದು ಮುಖ್ಯ.ಇದು ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪುಗಳಿಲ್ಲದೆ, ಹೊಸ ಮತದಾರರು ಸೇರ್ಪಡೆಗೊಳ್ಳಲು ಸಹಕಾರಿಯಾಗಿದೆ.

ಒಂದು ವೇಳೆ BLO ನಿಮ್ಮ ಮನೆಗೆ ಭೇಟಿ ನೀಡಿದ್ದಲ್ಲಿ ಅಥವಾ ಅವರು ಭೇಟಿ ನೀಡಿದಾಗ ತಾವು ಅಲಭ್ಯವಾಗಿ ಮಾಹಿತಿ ಅಪ್ಡೇಟ್ ಆಗದಿದ್ದಲಿ ಇಂದೇ ನಿಮ್ಮ ಮಾಹಿತಿಯನ್ನು ನಿಮ್ಮ ವ್ಯಾಪ್ತಿಗೆ ಒಳಪಡುವ BLO ಅವರನ್ನು ಸಂಪರ್ಕಿಸಿ ನೀಡಿ. ಒಂದು ವೇಳೆ ಎಸ್‌ಐಆರ್ ಅಪ್ಡೇಟ್ ಮಾಡದಿದ್ದರೆ ನಿಮ್ಮ ಮತದಾನದ ಹಕ್ಕು ಮುಂದಕ್ಕೆ ಸಿಗುವುದಿಲ್ಲ. ದಯವಿಟ್ಟು ಎಲ್ಲರೂ ಅಪ್ಡೇಟ್ ಮಾಡಿಸಿಕೊಳ್ಳಿ.

2002 ರಲ್ಲಿ ತಾವು ಮತದಾನ ಮಾಡಿದಲ್ಲಿ ನೀವು ಮತದಾನ ಮಾಡಿದ ವಿಧಾನಸಭಾ ಕ್ಷೇತ್ರ ಸಂಖ್ಯೆ, ಭಾಗ ಸಂಖ್ಯೆ ಹಾಗೂ ನಿಮ್ಮ ಕ್ರಮ ಸಂಖ್ಯೆಯನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ BLO ಗಳಿಂದ ಪಡೆದು ಪ್ರಸ್ತುತ ತಾವಿರುವ ಭಾಗದ BLO ಗಳ ಬಳಿ ಅಪ್ಡೇಟ್ ಮಾಡಿಸಿಕೊಳ್ಳಿ. ನೀವು 2002ರಲ್ಲಿ ಒಂದು ವೇಳೆ ಮತದಾನದ ಹಕ್ಕು ಪಡೆಯದಿದ್ದು, ಬಳಿಕ ಮತದಾನ ಮಾಡಿದವರೇ ಆದಲ್ಲಿ ನಿಮ್ಮ ತಂದೆ, ತಾಯಿಯ ಅಂದಿನ ವಿಧಾನಸಭಾ ಕ್ಷೇತ್ರ ಸಂಖ್ಯೆ, ಭಾಗ ಸಂಖ್ಯೆ ಹಾಗೂ ನಿಮ್ಮ ಕ್ರಮ ಸಂಖ್ಯೆಯನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ BLO ಗಳಿಂದ ಪಡೆದು ಅಪ್ಡೇಟ್ ಮಾಡಿಸಿಕೊಳ್ಳಿ..

ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ನಡೆದ ಎಸ್‌ಐಆರ್ ಅಪ್ಡೇಟ್ ಕಾರ್ಯದಲ್ಲಿ ಮಾಹಿತಿ ಅಪ್ಡೇಟ್ ಮಾಡಿಸಿಕೊಳ್ಳದ ಲಕ್ಷಾಂತರ ಮಂದಿ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ.

Share this article

ಟಾಪ್ ನ್ಯೂಸ್

More News