ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿದ್ದಾಪುರದಲ್ಲಿ ಪೊಲೀಸ್ ಪಥ ಸಂಚಲನ

ಜನವಾಹಿನಿ News ಸಿದ್ದಾಪುರ : ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕರಲ್ಲಿ ಆತ್ಮ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಜಿಲ್ಲೆಯ ಸಿದ್ದಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪಥ ಸಂಚಲನವನ್ನು ನಡೆಸಲಾಯಿತು. ಸಂತ ಅನ್ನಮ್ಮ ಶಾಲೆಯಿಂದ – ಮೈಸೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ – ಮಾರ್ಕೆಟ್ ರಸ್ತೆ ಬಸ್ಸು ನಿಲ್ದಾಣ ಮುಖಾಂತರ ಪೊಲೀಸ್ ಠಾಣೆ ವರೆಗೆ ಪಥ ಸಂಚಲನ ನಡೆಸಿದ ಪೊಲೀಸರು, ನಾಗರಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ ಎಂಬ […]
ಮಡಿಕೇರಿಯಲ್ಲಿ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಜನವಾಹಿನಿ News ಮಡಿಕೇರಿ : ವ್ಯಕ್ತಿಯೋರ್ವ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಬದಿ ಬಡಾವಣೆ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಉಪನ್ಯಾಸಕಿ ಕವಿತಾ ರವರ ಪತಿ ಮಡಿಕೇರಿಯ ಆಮೆಮನೆ ದೇವಿಪ್ರಸಾದ್ (43) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಘಟನಾ ಸ್ಥಳಕ್ಕೆ ನಗರ ಠಾಣೆಯ ಠಾಣಾಧಿಕಾರಿ ಅನ್ನಪೂರ್ಣ, ಡಿವೈಎಸ್ ಪಿ.ಸೂರಜ್ , ಸರ್ಕಲ್ ಇನ್ಸ್‌ಪೆಕ್ಟರ್ ರಾಜು ಭೇಟಿ ನೀಡಿ ಪರಿಶೀಲನೆ […]
ತೋಳುರುಶೆಟ್ಟಳ್ಳಿಯಲ್ಲಿ ಅಗ್ನಿ ಅವಘಡ ಮಾಜಿ ಸಿಆರ್‌ಪಿಎಫ್ ಯೋಧ ಸಾವು

ಜನವಾಹಿನಿ News ಸೋಮವಾರಪೇಟೆ : ಸೋಮವಾರಪೇಟೆ ಸಮೀಪದ ತೋಳುರುಶೆಟ್ಟಳ್ಳಿ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿ ಮಾಜಿ ಸಿಆರ್‌ಪಿಎಫ್ ಯೋಧ ಹೆಚ್.ಎ. ವೆಂಕಟೇಶ್ (64) ಸಾವನ್ನಪ್ಪಿದ್ದಾರೆ. ಮನೆಯಲ್ಲಿ ತೋಟ ಯಂತ್ರಗಳಿಗೆಂದು ಸಂಗ್ರಹಿಸಿದ್ದ ಪೆಟ್ರೋಲ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬೆಂಕಿ ವೇಗವಾಗಿ ವ್ಯಾಪಿಸಿವೆ. ಗ್ಯಾಂಗ್ರಿನ್ ಸಮಸ್ಯೆಯಿಂದಾಗಿ ಒಂದು ಕಾಲು ಕಳೆದುಕೊಂಡಿದ್ದ ವೆಂಕಟೇಶ್ ಅವರು ತಕ್ಷಣ ಹೊರಬರಲು ಸಾಧ್ಯವಾಗದೆ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಂಕಿಯಿಂದ ಮನೆಯ ಒಂದು ಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು […]
ಆನೆ ದಾಳಿಗೆ ವಿದ್ಯಾರ್ಥಿನಿ ಬಲಿ : ಮಡಿಕೇರಿ ಸಮೀಪದ ಬೆಟ್ಟತ್ತೂರಿನಲ್ಲಿ ಘಟನೆ

ಜನವಾಹಿನಿ News ಮಡಿಕೇರಿ : ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಶಾಲಾ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಮೃತ ಬಾಲಕಿಯನ್ನು ಮದೆ ಬೆಟ್ಟತ್ತುರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ (16) ಎಂದು ಗುರುತಿಸಲಾಗಿದೆ. ಮಡಿಕೇರಿಯ ಸಂತ ಮೈಕಲರ ಶಾಲೆಯ ಪ್ರಥಮ PUC ಯಲ್ಲಿ ವ್ಯಾಸಂಗ ಮಾಡುತಿದ್ದ ಪೂಜಾ ನಿನ್ನೆ ಸಂಜೆ 5:30 ಕ್ಕೆ ಬೆಟ್ಟತ್ತೂರಿನ ತನ್ನ ಮನೆಗೆ ಬಸ್ಸಿನಲ್ಲಿ ಬಂದು ಇಳಿದು ಸ್ವಲ್ಪ ದೂರ ನಡೆಯುವಾಗ ಏಕಏಕಿ […]
ಬಲಮಾವುಟಿ ಹಲ್ಲೆ ಪ್ರಕರಣ : ಆರೋಪಿಗಳ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು – ಓರ್ವ ಆರೋಪಿ ಅರೆಸ್ಟ್

ಉಳಿದವರ ಬಂಧನಕ್ಕೆ ಪೊಲೀಸರ ತೀವ್ರ ಕಾರ್ಯಚರಣೆ ಜನವಾಹಿನಿ News ಮಡಿಕೇರಿ : ನಾಪೋಕ್ಲುವಿನಲ್ಲಿ ಬಿಗುವಿನ ವಾತವರಣ ಏರ್ಪಟ್ಟಿದ್ದು ಇದೀಗ ಹಿಂದೂ ಪರ ಸಂಘಟನೆಗಳ ಪ್ರಮುಖರು ಪೊಲೀಸರಿಗೆ ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಕೊಲೆ ಯತ್ನ ಮೊಕದಮೆ ದಾಖಲು ಪಡಿಸಲಾಗಿ, ಅವರನ್ನು ಬಂಧಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಗೌತಮ್ ಎಂಬುವರು ಅಂಗಡಿ ಒಂದರಲ್ಲಿ ಸಾಮಗ್ರಿಗಳನ್ನು ತೆಗೆಯಲು ಹೋದಾಗ, ಅಂಗಡಿಯಲ್ಲಿದ್ದ ಹಂಸ ಅವರ ಪುತ್ರ ಸುಹೇಲ್ ಎಂಬಾತ ಗೌತಮ್ಮನ ಜೀಪಿನಲ್ಲಿ ಇದ್ದ ಕೇಸರಿ […]
ಭೀಕರ ರಸ್ತೆ ಅಪಘಾತ – ಓರ್ವ ಸ್ಥಳದಲ್ಲೇ ಸಾವು – ಮತ್ತೋರ್ವ ಗಂಭೀರ

ಜನವಾಹಿನಿ News ಸಿದ್ದಾಪುರ ಭೀಕರ ರಸ್ತೆ ಅಪಘಾತ ಓರ್ವ ಸ್ಥಳದಲ್ಲೇ ಸಾವು ಮತ್ತೋರ್ವ ಗಂಭೀರ ಅಮ್ಮತ್ತಿ ಸಮೀಪದ ಆನಂದಪುರದಲ್ಲಿ ನಡೆದ ಘಟನೆ ಅಮ್ಮ ತ್ತಿ ಕಡೆಯಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದ ವ್ಯಕ್ತಿಗೆ ಸ್ಕೂಟಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವ್ಯಕ್ತಿ ರಸ್ತೆಗೆ ಬಿದ್ದಿದ್ದಾನೆ. ರಸ್ತೆಗೆ ಬಿದ್ದ ಆತನ ಮೇಲೆ ಹಿಂಬದಿಯಿಂದ ಬಂದ ಕಾರೊಂದು ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆನಂದಪುರ ನಿವಾಸಿ ಏನೋಸ್ ಮನೋಹರ್ (ಮನು) 43 ಎಂಬಾತನೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ […]
ಅಜ್ಞಾತ ದಿಕ್ಕಿನಿಂದ ಹಾರಿಬಂದ ಗುಂಡು ತಗುಲಿ ವ್ಯಕ್ತಿ ಗಂಭೀರ : ಸಿದ್ದಾಪುರ ಸಮೀಪದ ಆನಂದಪುರದಲ್ಲಿ ಘಟನೆ

ಜನವಾಹಿನಿ News ಮಡಿಕೇರಿ : ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಅಜ್ಞಾತ ದಿಕ್ಕಿನಿಂದ ಹಾರಿಬಂದ ಗುಂಡು ತಗಲಿ ಗಂಭೀರ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಆನಂದಪುರದಲ್ಲಿ ನಡೆದಿದೆ. ಪುಲಿಯೇರಿ ಗ್ರಾಮ ವ್ಯಾಪ್ತಿಗೆ ಒಳಪಡುವ ಆನಂದಪುರದ ನಿವಾಸಿ ಆನೆಸ್‌ಡಿಕುಂಞ (63) ಎಂಬುವರು ಮಂಗಳವಾರ ಮಧ್ಯಾಹ್ನ 12 ಗಂಟೆ ಸಮಯಕ್ಕೆ ತಮ್ಮಮನೆಯ ಹಿಂಭಾಗದಲ್ಲಿ ಅವರ ತೋಟದಿಂದ ಬಚ್ಚಲೂ ಕೊಠಡಿಗೆ ಸೌದೆಗಳನ್ನು ತೆಗೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ದಿಡೀರನೆ ತೂರಿ ಬಂದ ಗುಂಡು(ಚಿಲ್ಲು) ತಗಲಿ ಎದೆ ಭಾಗಕ್ಕೆ ಕಾಲಿಗೆ ಗಂಭೀರ ಗಾಯವಾಗಿದ್ದು […]
ಮಡಿಕೇರಿಯಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟ- ಸರಬರಾಜು ಮಾಡುತ್ತಿದ್ದ ಐವರ ಬಂಧನ

ಜನವಾಹಿನಿ News ಮಡಿಕೇರಿ: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ- ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಕಚೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬಂದಿದ್ದು ನಿಷೇಧಿತ ಮಾದಕ ವಸ್ತುಗಳ ಮಾರಾಟ-ಸರಬರಾಜು ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಗ್ಗಾಲು ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಸೇವನೆ ಕುರಿತು […]
ಸಿದ್ದಾಪುರ : ಟ್ರಾಕ್ಟರ್ ಮಗುಚಿಬಿದ್ದು ಕಾರ್ಮಿಕ ದುರ್ಮರಣ

ಜನವಾಹಿನಿ News ಸಿದ್ದಾಪುರ:- ವಾಹನ ಚಲಾಯಿಸುವ ಆಸೆಯಿಂದ ಕಾರ್ಮಿಕನೋರ್ವ ಟ್ರಾಕ್ಟರ್ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಹಳ್ಳಕ್ಕೆ ಮಗುಚಿ ಬಿದ್ದಿದ್ದು, ಕಾರ್ಮಿಕ ಸ್ಥಳದಲ್ಲೆ ಮೃತಪಟ್ಟ ಘಟನೆ ಸಿದ್ದಾಪುರ ಸಮೀಪದ ಹಿಲ್ ಕಿಲ್ ಎಸ್ವೇಟ್ನಲ್ಲಿ ಸಂಭವಿಸಿದೆ. ಬಾಗಲಕೋಟೆಯ ನಿವಾಸಿ ಪ್ರವೀಣ್ (35) ಎಂಬಾತನೇ ಮೃತ ದುರ್ದೈವಿ. ಎಸ್ಟೇಟ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಂಜಾನೆ ಸಾಮಗ್ರಿಗಳನ್ನು ಒದಗಿಸಲು ಚಾಲಕನು ಇಲ್ಲದ ಸಂದರ್ಭ ವಾಹನ ಚಲಾಯಿಸುವ ಆಸೆಯಿಂದ ಟ್ರಾಕ್ಟರ್ ಚಲಾಯಿಸಿದ್ದು, ಈ ದುರ್ಘಟನೆಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಪೋಲೀಸ್ ಠಾಣಾಧಿಕಾರಿ […]
ಆಟೋಗೆ ಹಿಂದಿನಿಂದ ಕಾರು ಡಿಕ್ಕಿ : ಆಟೋ ಚಾಲಕನ ಮೇಲೆ ಹರಿದ ಲಾರಿ – ಚಾಲಕ ಸ್ಥಳದಲ್ಲೇ ಸಾವು

ಜನವಾಹಿನಿ News ಮಡಿಕೇರಿ: ಕಾರೊಂದು ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ರಸ್ತೆ ಮೇಲೆ ಬಿದ್ದಿದ್ದು, ಈ ವೇಳೆ ಲಾರಿಯೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಈ ಭೀಕರ ಸರಣಿ ಅಪಘಾತದಲ್ಲಿ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನಪ್ಪಿದ ಘಟನೆ ಕೊಡಗು ಜಿಲ್ಲೆಯ ಸಂಪಾಜೆ ಗೇಟಿನ ಬಳಿ ಸಂಭವಿಸಿದೆ. ಸುಂದರ ಚಿಟ್ಟಿಕಾನ ಎಂಬುವವರೇ ಮೃತ ದುರ್ದೈವಿ. ಅವರಿಗೆ 62 ವರ್ಷ ವಯಸ್ಸಾಗಿತ್ತು. ದಿ.ಬಿಸಿಲುಮನೆ ರಾಮಣ್ಣ ಗೌಡರ ಪುತ್ರರಾದ ಸುಂದರರವರು ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾಗಿ […]