Breaking News :

ಒತ್ತಡ ನಡುವೆ ಕೆಸರುಗದ್ದೆಯಲ್ಲಿ ಕಾದಾಡಲಿರುವ ಖಾಕಿ ಪಡೆ : ನಾಳೆ ಗೋಣಿಕೊಪ್ಪಲುವಿನಲ್ಲಿ ಜಿಲ್ಲಾ ಪೊಲೀಸರ ಕೆಸರುಗದ್ದೆ ಕ್ರೀಡಾಕೂಟ

ಒತ್ತಡ ನಡುವೆ ಕೆಸರುಗದ್ದೆಯಲ್ಲಿ ಕಾದಾಡಲಿರುವ ಜಿಲ್ಲಾ ಖಾಕಿ ಪಡೆ : ನಾಳೆ ಗೋಣಿಕೊಪ್ಪಲುವಿನಲ್ಲಿ ಪೊಲೀಸರ ಕೆಸರುಗದ್ದೆ ಕ್ರೀಡಾಕೂಟ –  ಮಡಿಕೇರಿ : ಸದಾ ಒತ್ತಡಲ್ಲೇ ಕಾರ್ಯ ನಿರ್ವಹಿಸುವ ಜಿಲ್ಲೆಯ ಆರಕ್ಷಕರಿಗೆ ರಿಲಿಪ್ ನೀಡುವ ಸಲುವಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ವಿರಾಜಪೇಟೆ ಉಪ ವಿಭಾಗದ ವತಿಯಿಂದ ಪೊಲೀಸ್ ಸಿಬ್ಬಂದಿಗಳು ಹಾಗೂ ಕುಟುಂಬಸ್ಥರಿಗಾಗಿ ಇದೆ ಮೊದಲ ಬಾರಿಗೆ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜನೆ ಮಾಡಿದೆ. ಗೋಣಿಕೊಪ್ಪಲು ಕಾವೇರಿ ಕಾಲೇಜು ಹಿಂಭಾಗದ ಗದ್ದೆಯಲ್ಲಿ ನಾಳೆ (ಜುಲೈ […]

ಮನೆಯ ಗೋಡೆ ಕುಸಿದು ಕಾರ್ಮಿಕ‌ ಮಹಿಳೆ ದುರ್ಮರಣ

ಮನೆಯ ಗೋಡೆ ಕುಸಿದು ಕಾರ್ಮಿಕ‌ ಮಹಿಳೆ ದುರ್ಮರಣ ಮಡಿಕೇರಿ : ಮನೆಯ ಗೋಡೆ ಕುಸಿದು ಬಿದ್ದು ಕಾರ್ಮಿಕ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಅಫ್ಜಲ್ ಪುರದ ರವಿ ಎಂಬುವವರ ಪತ್ನಿ ಸುಷ್ಮಾ(29) ಮೃತ ಮಹಿಳೆ. ಮೃತ ಮಹಿಳೆ, ಸಹೋದರ ಹಾಗೂ ಮಕ್ಕಳು ಕಳೆದ ಎರಡು ವರ್ಷಗಳ ಹಿಂದೆ ಸೋಮವಾರಪೇಟೆಗೆ ಆಗಮಿಸಿದ್ದು, ಹಾನಗಲ್ಲು ಗ್ರಾಮದ ಸಚಿನ್ ಎ.ಎನ್ ಎಂಬುವವರ ವಾಸದ ಮನೆಯಲ್ಲಿ ಬಾಡಿಗೆ ಇದ್ದರು. ಇಂದು ಬೆಳಿಗ್ಗೆ 5.30 […]

ದೇವರಕೊಲ್ಲಿ ಬಳಿ ಭೀಕರ ಅಪಘಾತ ನಾಲ್ವರು ದಾರುಣ ಸಾವು 

ದೇವರಕೊಲ್ಲಿ ಬಳಿ ಭೀಕರ ಅಪಘಾತ ನಾಲ್ವರು ದಾರುಣ ಸಾವು  ಮಡಿಕೇರಿ : ಮಡಿಕೇರಿ ಸಮೀಪದ ದೇವರ ಕೊಲ್ಲಿ ಬಳಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಮತ್ತಿಬ್ಬರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತಕ್ಕೊಳಗಾದ ಕಾರು ಕೊಡಗು ಜಿಲ್ಲೆ ಗೋಣಿಕೊಪ್ಪ ಮೂಲದ್ದೆಂದು ತಿಳಿದು ಬಂದಿದ್ದು, ಮೃತಪಟ್ಟವರನ್ನು ನಿಹಾದ್, ರಿಷಾನ್, ಮತ್ತು ರಾಶಿಬ್ ಎಂದು ಗುರುತಿಸಲಾಗಿದೆ. […]

ಕೊಂಡಂಗೇರಿ ಸರ ಕಳ್ಳತನಕ್ಕೆ ಬಿಗ್ ಟ್ವಿಸ್ಟ್ : ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಬಂಧನ 

ಕೊಂಡಂಗೇರಿ ಸರ ಕಳ್ಳತನಕ್ಕೆ ಬಿಗ್ ಟ್ವಿಸ್ಟ್ : ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಬಂಧನ ಮಡಿಕೇರಿ : ಸಿದ್ದಾಪುರ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮ ಪೆರಂಬು ಎಂಬಲ್ಲಿ ವಾಸವಿರುವ ಶ್ರೀಮತಿ ಸಫಾನ ಮತ್ತು ಶ್ರೀಮತಿ ಸಾರಮ್ಮ ಎಂಬುವವರು ಮನೆಯಲ್ಲಿದ್ದ ಸಂದರ್ಭ ದಿನಾಂಕ: 21-07-2025 ರಂದು ಮಧ್ಯಾಹ್ನ ಸುಮಾರು 01.30 ಘಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯು ನೀರು ಕೇಳುವ ನೆಪದಲ್ಲಿ ಮನೆಯ ಬಳಿ ಬಂದು ಮಹಿಳೆಯರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಕುತ್ತಿಗೆಯಲ್ಲಿದ ಚಿನ್ನದ ಸರವನ್ನು ಕಿತ್ತುಕೊಂಡು […]

ಕೊಡಗು: ನೇಣು ಬಿಗಿದು ಶಿಕ್ಷಕಿ ಆತ್ಮಹ*ತ್ಯೆ – ಕೊ*ಲೆ ಶಂಕೆ…!

ನಾಪೋಕ್ಲು : ಶಿಕ್ಷಕಿಯೊಬ್ಬರು  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಪೋಕ್ಲು ವ್ಯಾಪ್ತಿಗೆ ಒಳಪಡುವ ಎಮ್ಮೆಮಾಡುವಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸಫ್ರೀನಾ(32)ಆತ್ಮಹ*ತ್ಯೆ ಮಾಡಿಕೊಂಡ ಶಿಕ್ಷಕಿ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಮಧ್ಯರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಗಂಭೀರ ಸ್ವರೂಪದಲ್ಲಿದ್ದ ಅವರನ್ನು ತಕ್ಷಣ ನಾಪೋಕ್ಲು ಆಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಈ ನಡುವೆ ಪತಿ ನಜೀರ್ ವಿರುದ್ಧ ಸಫ್ರೀನಾ ಕುಟುಂಬಸ್ಥರು […]

ವಾಹನ ಅಪಘಾತ: ಗುತ್ತಿಗೆದಾರ ದುರ್ಮರಣ

ವಾಹನ ಅಪಘಾತ: ಗುತ್ತಿಗೆದಾರ ದುರ್ಮರಣ ಕುಶಾಲನಗರ : ಪಿರಿಯಾಪಟ್ಟಣ ತಾಲೂಕಿನ ಮಂತನಹಳ್ಳಿ ಬಳಿ ನಡೆದ ವಾಹನ ಅಪಘಾತದಲ್ಲಿ ಗುತ್ತಿಗೆದಾರ ಬೈಲುಕೊಪ್ಪದ ಅರುಣ (45) ಮೃತಪಟ್ಟಿದ್ದಾರೆ. ರಾತ್ರಿ ಸ್ನೇಹಿತರೊಂದಿಗೆ ಬೈಲುಕೊಪ್ಪದತ್ತ ತಮ್ಮ ಕಾರಿನಲ್ಲಿ ಆಗಮಿಸುತ್ತಿದ್ದ ಸಂದರ್ಭ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಅರುಣ ಸ್ಥಳದಲ್ಲಿ ಮೃತರಾದರು. ಕಾರಿನಲ್ಲಿದ್ದ ಮತ್ತೋರ್ವ ಅರುಣ ಹಾಗೂ ರವಿ ಎಂಬವರಿಗೆ ಗಾಯಗಳಾಗಿದೆ.  

ದೂರು ನೀಡಿದರೂ ಆರೋಪಿ ವಿರುದ್ಧ ಕ್ರಮ ಕೈಗೊಂಡಿಲ್ಲ : ದಲಿತ ಸಂಘರ್ಷ ಸಮಿತಿ ಆರೋಪ

ಮಡಿಕೇರಿ : ಜಾತಿ ನಿಂದನೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿದ ವ್ಯಕ್ತಿಯ ವಿರುದ್ಧ ದೂರು ನೀಡಿದ್ದರು ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.   ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಸಿ.ಲೋಕೇಶ್, ಇತ್ತೀಚೆಗೆ ಸಮಿತಿಯ ಜಿಲ್ಲಾ ಸಂಚಾಲಕರಾದ ಡಿ.ಜೆ.ಈರಪ್ಪ ಅವರು ನಾಕಲಗೂಡುದಿಂದ ಕೆಲಸಗಾರರೊಬ್ಬರನ್ನು ಕರೆತರಲು ತೆಳಿದ್ದರು. ಈ ಸಂದರ್ಭ ಕೆಲಸಗಾರ ಬರುವವರೆಗೆ ರಸ್ತೆ ಬದಿಯಲ್ಲಿ ಕಾರು ನಿಲುಗಡೆಗೊಳಿಸಿದ್ದರು. ಈ ಸಂದರ್ಭ ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದು ನಿಲ್ಲಿಸಿ ಅವಾಚ್ಯ […]

ನೀರು ಕೇಳುವ ನೆಪದಲ್ಲಿ ಹಲ್ಲೆ ನಡೆಸಿ ಕಳ್ಳತನ : ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು 

ನೀರು ಕೇಳುವ ನೆಪದಲ್ಲಿ ಹಲ್ಲೆ ನಡೆಸಿ ಕಳ್ಳತನ : ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು  ಮಡಿಕೇರಿ : ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಸರ ಕದ್ದೊಯ್ದಿರುವ ಘಟನೆ ಕೊಂಡಗೇರಿಯಲ್ಲಿ ಇಂದು ಮಧ್ಯಾಹ್ನ ನಡೆದಿದ್ದು, ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಕೊಂಡಂಗೇರಿಯ ಸಾರಮ್ಮ ಎಂಬುವವರೇ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ. ಏನಿದು ಪ್ರಕರಣ :: ಸಾರಮ್ಮ ತನ್ನ ಸೊಸೆಯೊಂದಿಗೆ ಮನೆಯಲ್ಲಿದ್ದು, ʼನಾನು ಪಕ್ಕದಲ್ಲಿ ಕೆಲಸಕ್ಕೆ ಬಂದಿದ್ದೇನೆ. ಕುಡಿಯೋಕೆ ನೀರು ಕೊಡಿʼ ಅಂತ ವ್ಯಕ್ತಿಯೊಬ್ಬ […]

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ತನಿಖೆ : ಎಸ್ಐಟಿಗೆ ವಹಿಸಿದ ಸರ್ಕಾರ 

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ತನಿಖೆ ಎಸ್ಐಟಿಗೆ ವಹಿಸಿದ ಸರ್ಕಾರ  ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿರುವುದಾಗಿ ಆರೋಪಿಸಲಾದ ಸರಣಿ ಹತ್ಯೆಗಳು ಮತ್ತು ಶವಗಳನ್ನು ಹೂತಿಡುವ ಪ್ರಕರಣದ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರವು 4 ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ SIT ತಂಡವನ್ನು ರಚಿಸಿದೆ. ಈ ತಂಡವನ್ನು ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಮಹಾನಿರ್ದೇಶಕ ಡಾ. ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ರಚಿಸಲಾಗಿದ್ದು, ಅನುಚೇತ್, ಸೌಮ್ಯಲತಾ, ಜಿತೇಂದ್ರಕುಮಾರ್ ಅವರನ್ನು ಎಸ್ಐಟಿ ಸದಸ್ಯರಾಗಿ ನಿಯೋಜಿಸಲಾಗಿದೆ. ಮಹಿಳಾ […]

ಕಾರ್ಮಿಕರ ಮೇಲೆ ಕಾಡಾನೆ ದಾಳಿ : ಓರ್ವ ಗಂಭೀರ ಮತ್ತೋರ್ವ ಸಣ್ಣಪುಟ್ಟ ಗಾಯಗಳೊಂದಿಗೆ ಪಾರು

ಕಾರ್ಮಿಕನ ಮೇಲೆ ಕಾಡಾನೆ ದಾಳಿ : ಓರ್ವ ಗಂಭೀರ ಕೊಡಗು ಜಿಲ್ಲೆಯ ಸಿದ್ದಾಪುರ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ದಾಳಿ ಬೆಳ್ಳಂ ಬೆಳಗ್ಗೆ ಕಾರ್ಮಿಕನ ಮೇಲೆ ಕಾಡಾನೆ ಅಟ್ಯಾಕ್ ಸಿದ್ದಾಪುರ ಬಳಿಯ ಇವಾಲ್ವ್ ಬ್ಯಾಕ್ ರೆಸಾರ್ಟ್ ಮಾಲೀಕತ್ವದ ಶಿಲ್ಪಿ ಎಸ್ಟೇಟ್ ನಲ್ಲಿ ನಡೆದ ಘಟನೆ ಬೆಳಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಕಾರ್ಮಿಕರ ಮೇಲೆ ಏಕಾಏಕಿ ದಾಳಿಗೆ ಮುಂದಾದ ಕಾಡಾನೆ. ಕಾರ್ಮಿಕನೋರ್ವನ ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು , ಮತ್ತೋರ್ವನಿಗೆ ಕಾಲಿಗೆ ಪೆಟ್ಟಾಗಿದೆ. ಮೂಲತಃ ಬಾಗಲಕೋಟೆ ನಿವಾಸಿ […]