Breaking News :

ಗೃಹ ಬಳಕೆ ಅಡುಗೆ ಅನಿಲ ಪೂರೈಕೆ ಆತಂಕ ಅಗತ್ಯವಿಲ್ಲ: ಜಿಲ್ಲಾಧಿಕಾರಿ ಸೋಮಶೇಖರ್

  ಜನವಾಹಿನಿ News ಮಡಿಕೇರಿ : ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಂಪರ್ಕ ಹೊಂದಿರುವ ಪ್ರತಿ ಮನೆಗೂ ಅಡುಗೆ ಅನಿಲ ಸಿಲಿಂಡರ್ ಅನ್ನು ಪೂರೈಕೆ ಮತ್ತು ಬೇಡಿಕೆಗೆ ತಕ್ಕಂತೆ ಸರ್ಕಾರದ ನಿಯಮಾನುಸಾರ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಡುಗೆ ಅನಿಲ ವಿತರಕರ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ದ ಸಾರಿರುವ ಸಮರ ತೀವ್ರಗೊಂಡಿರುವ […]

ಕಾನೂರು : ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪೊನ್ನಣ್ಣನವರಿಂದ ಭೂಮಿ ಪೂಜೆ

  ಜನವಾಹಿನಿ News ಮಡಿಕೇರಿ : ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮಕ್ಕೆ ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಪೊನ್ನಂಪೇಟೆ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಯುಕ್ತ ಪ್ರವಾಸ ಕೈಗೊಂಡಿರುವ ಮಾನ್ಯ ಶಾಸಕರು, ಕಾನೂರು ಗ್ರಾಮ ಪಂಚಾಯತ್ ಭಾಗದಲ್ಲಿ, ಚೊಟ್ಟೆಕಮಾಡ ಹಾಗೂ ಚೇಂದಿರ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿಗೆ ₹ 5 ಲಕ್ಷ ನೀಡಿದ್ದು, ಸದರಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಭೂಮಿ […]

ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಕೊಡಗಿನ ಶಾಸಕದ್ವಯರ ನಡೆ ಸ್ವಾಗತಾರ್ಹ – ನಕಲಿ ಬಿಲ್ ಪಾವತಿ ಮಾಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕ್ಕದಮ್ಮೆ

  ಜನವಾಹಿನಿ News ಮಡಿಕೇರಿ : ಕೊಡಗಿನ ಜ್ವಲಂತ ಸಮಸ್ಯೆಯಾದ ಮಾನವ ಮತ್ತು ವನ್ಯಜೀವಿ ಸಂಘರ್ಷ ಕುರಿತು ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರ ನಡೆ ಸ್ವಾಗತಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಮಾದ್ಯಮ ವಕ್ತಾರರಾದ ತೆನ್ನಿರ ಮೈನಾ ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ಕಳೆದ ಎರಡು ದಶಕಗಳಿಂದ ವನ್ಯಜೀವಿ ಧಾಳಿಯಿಂದ ಅನೇಕ ಮಾನವ ಜೀವಹಾನಿ ಹಾಗೂ ಜಾನುವಾರುಗಳ ಜೀವಹಾನಿ ಸಂಭವಿಸುತ್ತಿದ್ದು ಇದನ್ನು ಶಾಶ್ವತವಾಗಿ ತಡೆಗಟ್ಟುವ ಪ್ರಯತ್ನ ಮಾಡುವುದಾಗಿ ಇಬ್ಬರು ಶಾಸಕದ್ವಯರು ಚುನಾವಣೆ ಸಂಧರ್ಭದಲ್ಲಿ ಭರವಸೆ ನೀಡಿದ್ದರು. […]

ಅಕ್ರಮ ಬೀಟೆ ಮರ ಸಾಗಣೆ ಪತ್ತೆ – ₹10 ಲಕ್ಷ ಮೌಲ್ಯದ ನಾಟಾ, ವಾಹನಗಳ ವಶ

ಜನವಾಹಿನಿ News ಸಿದ್ದಾಪುರ : ಅಕ್ರಮವಾಗಿ ಬೀಟೆ ಮರ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿ, ಸುಮಾರು ₹10 ಲಕ್ಷ ಮೌಲ್ಯದ ಬೀಟೆ ನಾಟಾಗಳನ್ನು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮದ ನವೀನ್ ಸೋಮಣ್ಣ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯ ಮೇರೆಗೆ ಅರಣ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಈ ವೇಳೆ 7.108 ಘನ ಮೀಟರ್ ಪ್ರಮಾಣದ ಬೀಟೆ […]

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳಕ್ಕೆ ಯತ್ನ : ಆಟೋ ಚಾಲಕ ಅರೆಸ್ಟ್ 

  ಜನವಾಹಿನಿ News ಸಿದ್ದಾಪುರ : ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಿಕ್ಷಾ ಚಾಲಕನೋರ್ವಾನನ್ನು ಪೊಲೀಸರು ಬಂಧಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಸಿದ್ದಾಪುರದ ಪಾಲಿಬೆಟ್ಟ ರಸ್ತೆಯಲ್ಲಿ ವಾಸವಿರುವ ಮೊಹಮ್ಮದ್ ಎಂಬುವವರ ಮಗ ಅನ್ಸಾರ್ ( 34) ಎಂದು ಗುರುತಿಸಲಾಗಿದ್ದು, ಆತ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಮಾಹಿತಿಯ ಪ್ರಕಾರ, ಯುಗಾದಿ ಹಬ್ಬದ ಹಿನ್ನೆಲೆ ಶಾಲೆಗೆ ರಜೆ ಇದ್ದ ಕಾರಣ ಬಾಲಕಿಯೂ ಸ್ಪೆಷಲ್ ಕ್ಲಾಸ್ ಗೆ ತೆರಳಲೆಂದು ನೆಲ್ಯಹುದಿಕೇರಿಯಲ್ಲಿ ನಿಂತಿದ್ದ ಸಂದರ್ಭ […]

ಮಾ.28 ರಂದು ಅಗ್ನಿಬನ್ನಿರಾಯ ಸ್ವಾಮಿ ಜಯಂತಿ

  ಜನವಾಹಿನಿ News ಮಡಿಕೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾ.28 ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ‘ಅಗ್ನಿ ಬನ್ನಿರಾಯ’ ಸ್ವಾಮಿ ಜಯಂತಿ ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಮುಖ್ಯಮಂತ್ರಿ ಕಾನೂನು ಸಲಹೆಗರಾರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಮೈಸೂರು ಲೋಕಸಭಾ ಕ್ಷೇತ್ರ […]

ಮಾ.24 ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಧಿಕೃತ ಬೋರ್ಡ್ ಮತ್ತು ಮಳಿಗೆಗಳ ತೆರವು ಕಾರ್ಯ 

  ಜನವಾಹಿನಿ News ಮಡಿಕೇರಿ : ರಾಷ್ಟ್ರೀಯ ಹೆದ್ದಾರಿ-275 ಕಿ.ಮೀ.71.600 ರಿಂದ ಕಿ.ಮೀ.130.21 ರವರೆಗೆ ಸಂಪಾಜೆಯಿಂದ ಕುಶಾಲನಗರ ಕಾವೇರಿ ನದಿ ಸೇತುವೆ ವರೆವಿಗೂ ಈಗಾಗಲೇ ತೆರವುಗೊಳಿಸಲಾಗಿದ್ದ ಅನಧಿಕೃತ ಜಾಹಿರಾತು ಫಲಕಗಳನ್ನು ಮತ್ತು ವ್ಯಾಪಾರಿಗಳು ಹಣ್ಣಿನ ಅಂಗಡಿ ಮತ್ತು ಗೂಡಂಗಡಿಗಳನ್ನು ರಾಷ್ಟ್ರೀಯ ಹೆದ್ದಾರಿಯ ಪರಧಿಯ ಒಳಗೆ ಪುನರ್ ಸ್ಥಾಪಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಗ್ರಾಹಕರ ವಾಹನಗಳು ಪುಟ್‍ಪಾತಿನಲ್ಲಿ ನಿಂತು ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಮತ್ತು ವಾಹನಗಳ ಸರಾಗ ಚಲನೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ಮತ್ತು ಅನಧಿಕೃತ […]

ಮಾ.24 ರಂದು ಕಣ್ಣಿನ ತಪಾಸಣಾ ಶಿಬಿರ

  ಜನವಾಹಿನಿ News ಮಡಿಕೇರಿ : ಹಿರಿಯ ನಾಗರಿಕರ ವೇದಿಕೆ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್, 24 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಉಚಿತವಾಗಿ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ. ಖ್ಯಾತ ಕಣ್ಣಿನ ತಜ್ಞರಾದ ಡಾ.ಪ್ರಶಾಂತ್ ಅವರು ಕಣ್ಣಿನ ತಪಾಸಣೆ ನಡೆಸಲಿದ್ದಾರೆ. ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಕೆ.ಎ.ತಿಮ್ಮಯ್ಯ ಅವರು ತಿಳಿಸಿದ್ದಾರೆ.

ಆನೆ ಕಂದಕ, ಸೌರಬೇಲಿ ಸಮರ್ಪಕ ನಿರ್ವಹಣೆಗೆ ಈಶ್ವರ ಖಂಡ್ರೆ ಸೂಚನೆ

  ಜನವಾಹಿನಿ News ಬೆಂಗಳೂರು :  ಕೊಡಗು ಜಿಲ್ಲೆಯಲ್ಲಿ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ತೋಡಲಾಗಿರುವ ಆನೆ ಕಂದಕ ಮತ್ತು ಅಳವಡಿಸಿರುವ ತೂಗು ಸೌರಬೇಲಿಯ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ.ಮಂಥರ ಗೌಡ ಮತ್ತು ದರ್ಶನ್ ಧ್ರುವನಾರಾಯಣ್ ಅವರೊಂದಿಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಕೊಡಗಿನಲ್ಲಿ ವನ್ಯಜೀವಿಗಳಿಂದ ಅಮೂಲ್ಯ ಜೀವ ಹಾನಿ ಆಗುತ್ತಿರುವುದು ಆತಂಕದ […]

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡೀಪಾರು ನೋಟೀಸ್..!

  ಜನವಾಹಿನಿ News ಬೆಳ್ತಂಗಡಿ : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮೂರನೇ ಬಾರಿಗೆ ಹೊರ ಜಿಲ್ಲೆ ಗೆ ಗಡಿಪಾರು ಮಾಡಲಾಗಿದೆ. ಅವರನ್ನು ಮಾ.16 ರಿಂದ ಸೆ.19ರ ತನಕ 6 ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಿ ನೋಟೀಸ್ ಜಾರಿಗೊಳಿಸಲಾಗಿದೆ. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಗಡೀಪಾರು ಆದೇಶ ಜಾರಿಗೊಳಿಸಿದ್ದಾರೆ. ಕೆಲ ಸಮಯದ ಹಿಂದೆ ಎರಡನೇ ಬಾರಿ ದ.ಕ ಜಿಲ್ಲೆಯಿಂದ ತಿಮರೋಡಿ ಅವರನ್ಮು ಎಸಿ ಅವರು ಗಡೀಪಾರು ಮಾಡಿದ್ದರು. […]