ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ : ಸರ್ಕಾರ ಹಾಗೂ ಶಾಸಕರ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ : ಬೃಹತ್ ಹೋರಾಟಕ್ಕೆ ಚಿಂತನೆ

ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ : ಸರ್ಕಾರ ಹಾಗೂ ಶಾಸಕರ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ : ಬೃಹತ್ ಹೋರಾಟಕ್ಕೆ ಚಿಂತನೆ ಸಿದ್ದಾಪುರ : ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕರು ಬಲಿಯಾಗುತ್ತಿರುವುದರ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ಜಿಲ್ಲಾ ಕಾರ್ಯದರ್ಶಿ ಹಾಗೂ ವಕೀಲರಾದ ಸುನೀಲ್ ಕುಮಾರ್ ಕುಮಾರ್ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಆಡಿಯೋ ಒಂದನ್ನು ಹಂಚಿಕೊಂಡಿರುವ ಅವರು ಬಿಜೆಪಿ […]
ಸಿದ್ದಾಪುರ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ದಾಳಿ : ಕಾರ್ಮಿಕರಿಬ್ಬರು ಗಂಭೀರ

ಸಿದ್ದಾಪುರ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ದಾಳಿ : ಕಾರ್ಮಿಕರಿಬ್ಬರು ಗಂಭೀರ ಸಿದ್ದಾಪುರ : ಸಿದ್ದಾಪುರ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ. ಕಾಡಾನೆ ದಾಳಿಗೆ ಇಬ್ಬರು ಕಾರ್ಮಿಕರು ಗಂಭೀರ ಸಿದ್ದಾಪುರ ಸಮೀಪದ ಕಂಬಿರಂಡ ಮತ್ತು ಸ್ವರ್ಣಗಿರಿ ಎಸ್ಟೇಟ್ ನಲ್ಲಿ ನಡೆದ ಘಟನೆ. ತೋಟ ಕಾರ್ಮಿಕರಾದ ಕಣ್ಣನ್ ಮತ್ತು ಸಾಬು ಆಲಿ ಎಂಬುವವರೇ ಕಾಡಾನೆ ದಾಳಿಗೊಳಗಾದ ಕಾರ್ಮಿಕರು. ಸಿದ್ದಾಪುರ ಸಮೀಪದ ಕಂಬಿರಂಡ ಹಾಗೂ ಸ್ವರ್ಣಗಿರಿ ಎಸ್ಟೇಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಾಡಾನೆ ದಾಳಿ ಮಾಡಿದ್ದು, ದಾಳಿಗೆ ಒಳಗಾದ ಇಬ್ಬರು ಕಾರ್ಮಿಕರನ್ನು […]
ಪತ್ರಕರ್ತರು ದೃಷ್ಟಿ ಹೀನರಾದರೆ ಕಣ್ಣಿರುವ ಕುರುಡರು ಕಿವಿಯಿರುವ ಕಿವುಡರು ಸೃಷ್ಟಿಯಾಗುತ್ತಾರೆ : ಕೆ.ವಿ.ಪ್ರಭಾಕರ್

ಪತ್ರಕರ್ತರು ದೃಷ್ಟಿ ಹೀನರಾದರೆ ಕಣ್ಣಿರುವ ಕುರುಡರು ಕಿವಿಯಿರುವ ಕಿವುಡರು ಸೃಷ್ಟಿಯಾಗುತ್ತಾರೆ : ಕೆ.ವಿ.ಪ್ರಭಾಕರ ಮಡಿಕೇರಿ : ನಾವು ಸಮಾಜವನ್ನು ನೋಡುವ ದೃಷ್ಟಿಯನ್ನು ಕಳೆದುಕೊಂಡರೆ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುತ್ತೇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕ ಸಾಧಕ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ […]
ಮರ ಬಿದ್ದು ಮಾರುತಿ ವ್ಯಾನ್ ಜಖಂ : ಚಾಲಕ ಪಾರು

ಮರ ಬಿದ್ದು ಮಾರುತಿ ವ್ಯಾನ್ ಜಖಂ : ಚಾಲಕ ಪಾರು ಮಡಿಕೇರಿ : ಸೋಮವಾರಪೇಟೆ – ಶಾಂತಳ್ಳಿ ರಸ್ತೆಯ ಜೆಡಿಗುಂಡಿ ಬಳಿ ಹರಗ ಗ್ರಾಮದ ಚರಣ್ ರವರ ಮಾರುತಿ ಓಮ್ನಿ ವ್ಯಾನ್ ಮೇಲೆ ಮರ ಬಿದ್ದು ತೀವ್ರವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಅದರಲ್ಲಿದ್ದ ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಪ್ರವೀಣ್ ನೆಟ್ಟಾರ್ ಹತ್ಯೆಗೆ ಮೂರು ವರ್ಷ : ಸಂಸದ, ಶಾಸಕರಿಂದ ಪುತ್ಥಳಿ, ಸ್ಮಾರಕಕ್ಕೆ ಗೌರವಾರ್ಪಣೆ

ಪ್ರವೀಣ್ ನೆಟ್ಟಾರ್ ಹತ್ಯೆಗೆ ಮೂರು ವರ್ಷ : ಸಂಸದ, ಶಾಸಕರಿಂದ ಪುತ್ಥಳಿ, ಸ್ಮಾರಕಕ್ಕೆ ಗೌರವಾರ್ಪಣೆ ಸುಳ್ಯ : ಭಾರತೀಯ ಜನತಾ ಪಕ್ಷದ ಯುವ ಮೋರ್ಛಾ ನಾಯಕ ಪ್ರವೀಣ್ ನೆಟ್ಟಾರ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದು ಮೂರು ವರ್ಷಗಳಾದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಬಲಿದಾನ ದಿನವನ್ನಾಗಿ ಆಚರಿಸಲಾಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟರವರು ಅವರ ಸಮಾಧಿಗೆ ತೆರಳಿ ಪುಷ್ಪಾರ್ಚನೆ ನಡೆಸಿ ಗೌರವ ಸಲ್ಲಿಸಿದರು. ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿ, ಅವರ ಪೋಷಕರು ಮತ್ತು ಕುಟುಂಬಸ್ಥರ ಬಗ್ಗೆ ಕುಶಲೋಪರಿ ನಡೆಸಿದರು. […]
ಚನ್ನಯ್ಯನಕೋಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ

ಚನ್ನಯ್ಯನಕೋಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ ಮಡಿಕೇರಿ : ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ (ಜು 27) ರಂದು ಇಂದು ಕಾರ್ಗಿಲ್ ವಿಜಯೋತ್ಸವ, ಡಾ. ಎಪಿಜೆ ಅಬ್ದುಲ್ ಕಲಾಂ ಪುಣ್ಯ ಸ್ಮರಣೆ ಹಾಗೂ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸರ್ವಸಹಾಯಿ ಮಿತ್ರ ಮಂಡಳಿ ಅಧ್ಯಕ್ಷ ವಿಜು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ಯೋಧರಿಗೆ ನಮನ ಕಾರ್ಗಿಲ್ ವಿಜಯೋತ್ಸವ, […]
ಬಿಜೆಪಿಗರಿಂದ ಜನತೆಗೆ ತಪ್ಪು ಸಂದೇಶ : ಕಾಂಗ್ರೆಸ್ ಆರೋಪ

ಬಿಜೆಪಿಗರಿಂದ ತಪ್ಪು ಸಂದೇಶ : ಕಾಂಗ್ರೆಸ್ ಆರೋಪ ಮಡಿಕೇರಿ : ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರ ಹಾಗೂ ಶಾಸಕರ ಕಾಳಜಿಯಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಇದನ್ನು ತಾಳಲಾರದೆ ಬಿಜೆಪಿಗರು ಜನತೆಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಟಿ.ಇ.ಸುರೇಶ್ ಆರೋಪಿಸಿದ್ದಾರೆ. ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಅಭಿವೃದ್ಧಿಯ ಕಾಳಜಿ ಇರಲಿಲ್ಲ. ಆದರೆ, ಇಂದು ಸರ್ಕಾರ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್‌ಗೌಡ ವಿಶೇಷ ಕಾಳಜಿಯಿಂದ ಜಿಲ್ಲೆಗೆ ಸಾಕಷ್ಟು […]
ವಿಜಯ್ ದಿವಸ್: ಮಡಿಕೇರಿಯಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ

ಮಡಿಕೇರಿಯಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಮಡಿಕೇರಿ : ವಿವಿಧ ಸಂಘಟನೆಗಳ ವತಿಯಿಂದ ನಗರದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. ಕೊಡಗು ಹಿಂದು ಜಾಗರಣ ವೇದಿಕೆ, ಮಡಿಕೇರಿ ಮಾಜಿ ಸೈನಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳಿಂದ ನಗರದ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ವಕೀಲರಾದ ಮೇಜರ್ ಓ.ಎಸ್.ಚಿಂಗಪ್ಪ ಕಾರ್ಗಿಲ್ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ಭಾರತೀಯ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. […]
ದಸರಾ ಸಮಿತಿಯಿಂದ ಪೇಟೆ ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ

ದಸರಾ ಸಮಿತಿಯಿಂದ ಪೇಟೆ ಶ್ರೀ ರಾಮಮಂದಿರದಲ್ಲಿ ವಿಶೇಷ ಪೂಜೆ ಮಡಿಕೇರಿ : ಮಡಿಕೇರಿಯ ಐತಿಹಾಸಿಕ ದಸರಾ ಉತ್ಸವಾಚರಣೆಗೆ ಸಾಂಪ್ರದಾಯದಂತೆ ಮಡಿಕೇರಿ ನಗರ ದಸರಾ ಉತ್ಸವ ಸಮಿತಿ ವತಿಯಿಂದ ನಗರದ ಪೇಟೆ ಶ್ರೀರಾಮಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಉತ್ಸವದ ಕಾರ್ಯಗಳಿಗೆ ಶನಿವಾರ ಚಾಲನೆ ನೀಡಲಾಯಿತು. ಈ ಸಂದರ್ಭ ಮಡಿಕೇರಿ ನಗರ ದಸರಾ ಉತ್ಸವ ಸಮಿತಿಯ ನೂತನ ಕಾರ್ಯಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಐತಿಹಾಸಿಕ ಮಡಿಕೇರಿ ದಸರಾಗೆ ಚಾಲನೆ ನೀಡಲಾಗಿದೆ. ಈ ಭಾರಿ ಕಾರ್ಯಧ್ಯಕ್ಷ ಸ್ಥಾನದ ಮಹತ್ವದ ಜವಾಬ್ದಾರಿ ಕೂಡ […]
ಕ್ಷೇತ್ರದ ಜನಪರ – ಅಭಿವೃದ್ಧಿ ಕೆಲಸ ಮಾಡುವುದರಲ್ಲಿ ಶಿವಲಿಂಗೇಗೌಡರು ಮುಂದಿದ್ದಾರೆ : ಸಿಎಂ ಸಿದ್ದರಾಮಯ್ಯ ಶ್ಲಾಘನೆ

ಕ್ಷೇತ್ರದ ಜನಪರ – ಅಭಿವೃದ್ಧಿ ಕೆಲಸ ಮಾಡುವುದರಲ್ಲಿ ಶಿವಲಿಂಗೇಗೌಡರು ಮುಂದಿದ್ದಾರೆ : ಸಿಎಂ ಸಿದ್ದರಾಮಯ್ಯ ಶ್ಲಾಘನೆ ಹಾಸನ : ಕ್ಷೇತ್ರದ ಜನಪರ – ಅಭಿವೃದ್ಧಿ ಕೆಲಸ ಮಾಡುವುದರಲ್ಲಿ, ವಿಧಾನಸಭೆಯಲ್ಲಿ ಪಕ್ಷ ಮತ್ತು ಸರ್ಕಾರದ ಕಾರ್ಯಗಳನ್ನು ಸಮರ್ಥವಾಗಿ ಮಂಡಿಸುವುದರಲ್ಲೂ ಶಿವಲಿಂಗೇಗೌಡರು ಮುಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡಿದರು 148 […]