Breaking News :

ಸುಳ್ಯ; ಮಸೀದಿ ವಠಾರಕ್ಕೆ ಬಂದು ಕಿಡಿಗೇಡಿಗಳಿಂದ ಬೆದರಿಕೆ: ಪ್ರಕರಣ ದಾಖಲು

ಸುಳ್ಯ; ಎಲಿಮಲೆ ಜುಮ್ಮಾ ಮಸೀದಿ ವಠಾರಕ್ಕೆ ರಾತ್ರಿ ವೇಳೆ ಇಬ್ಬರು ದುಷ್ಕರ್ಮಿಗಳು ಬಂದು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿರುವ ಬಗ್ಗೆ ಮಸೀದಿ ಕಮಿಟಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.

ಎಲಿಮಲೆ ಮಸೀದಿಗೆ ಗುರುವಾರ ರಾತ್ರಿ ಸುಮಾರು 11 ಗಂಟೆಗೆ ಸತೀಶ್ ಗುಡ್ಡನಮನೆ ಮತ್ತು ಇತರರು ಬಂದು
ಮಸೀದಿಯ ಆವರಣದಲ್ಲಿ ನಿಂತು ಜೋರಾಗಿ ಬೈದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಇದಲ್ಲದೆ ಎರಡು ದಿನ ಮೊದಲು ಮಸೀದಿಯ ವಿದ್ಯಾರ್ಥಿಗಳು ಶಾಲೆಗೆ ಹೋಗುವ ವೇಳೆ ರಸ್ತೆಯಲ್ಲಿ ಇಬ್ಬರು ಅಡ್ಡಗಟ್ಟಿ ನೀವು ಈ ರೀತಿಯ ಟೋಪಿಗಳನ್ನು ಧರಿಸಿ ಶಾಲೆಗೆ ಹೋಗಬಾರದು ಎಂದು ಹೆದರಿಸಿದ್ದರು ಎಂದೂ ಸುಬ್ರಮಣ್ಯ ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿ ಶುಕ್ರವಾರ ಪುತ್ತೂರು ಡಿ ವೈ ಎಸ್ ಪಿ ಅರುಣ್ ನಾಗೇಗೌಡ, ಸುಬ್ರಮಣ್ಯ ಠಾಣಾ ಎಸ್.ಐ. ಕಾರ್ತಿಕ್, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



Share this article

ಟಾಪ್ ನ್ಯೂಸ್

More News