Breaking News :

ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ : ನಾಲ್ಕಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮ

ಜನವಾಹಿನಿ News ಬಂಟ್ವಾಳ : ವಿಟ್ಲ ಕಲ್ಲಡ್ಕ ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಭಸ್ಮಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

ಸಂತೋಷ್ ಎಂಬವರ ಮಾಲಕತ್ವದ ಶ್ರೀ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಧಗಧಗನೇ ಸಂಪೂರ್ಣ ಅಂಗಡಿಯನ್ನು ಆಹುತಿ ಪಡೆದುಕೊಂಡಿದ್ದು, ಹತ್ತಿರದ ಟೈಲರ್ ಶಾಪ್,ಅಮಿತ್ ಹೋಟೆಲ್, ಗಣೇಶ್ ಡ್ರೈವಿಂಗ್ ಸ್ಕೂಲ್ ಅಂಗಡಿ ಕಟ್ಟಡಗಳೂ ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹತ್ತಿಕೊಂಡಿದೆನ್ನಲಾಗಿದೆ.

ಘಟನಾ ಸ್ಥಳದ ಸುತ್ತಮುತ್ತ ಹಲವಾರು ಅಂಗಡಿ ಮುಂಗಟ್ಟುಗಳಿರುವುದರಿಂದ, ಬೆಂಕಿ ವಿಸ್ತಾರಗೊಳ್ಳುವ ಭಾರೀ ಅಪಾಯ ಎದುರಾಗಿದೆ.

ಘಟನಾ ಸ್ಥಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಮಾಹಿತಿ ಪಡೆದ ಪೊಲೀಸರು ಕೂಡ ತಕ್ಷಣವೇ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ವಿಟ್ಲಕ್ಕೆ ಸ್ವಂತ ಅಗ್ನಿಶಾಮಕ ಕಚೇರಿ ಇಲ್ಲದ ಕಾರಣ ಪುತ್ತೂರು ಅಥವಾ ಬಿಸಿರೋಡ್‌ನಿಂದ ಅಗ್ನಿಶಾಮಕ ದಳ ಆಗಮಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಪುತ್ತೂರಿನಿಂದ ಅಗ್ನಿಶಾಮಕ ದಳದ ವಾಹನ ಬೆಂಕಿ ಆರಿಸುವ ಕಾರ್ಯಾಚರಣೆ ಮಾಡಿದೆ. ಘಟನೆಯಿಂದ ಸುಮಾರು 2 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು‌ ಅಂದಾಜಿಸಲಾಗಿದೆ. ವರ್ಷಾಂತ್ಯಗೊಂಡು‌ ಹೊಸ ವರ್ಷದ ಸಂಭ್ರಮದ‌ ನಿರೀಕ್ಷೆಯಲ್ಲಿದ್ದ ವಿಟ್ಲದ‌ ಜನತೆಗೆ ಈ ಬೆಂಕಿ‌ಅವಘಡ ದೊಡ್ಡ ಆಘಾತ ನೀಬಂಟ್ವಾಳ : ವಿಟ್ಲ ಕಲ್ಲಡ್ಕ ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಭಸ್ಮಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

ಸಂತೋಷ್ ಎಂಬವರ ಮಾಲಕತ್ವದ ಶ್ರೀ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಧಗಧಗನೇ ಸಂಪೂರ್ಣ ಅಂಗಡಿಯನ್ನು ಆಹುತಿ ಪಡೆದುಕೊಂಡಿದ್ದು, ಹತ್ತಿರದ ಟೈಲರ್ ಶಾಪ್,ಅಮಿತ್ ಹೋಟೆಲ್, ಗಣೇಶ್ ಡ್ರೈವಿಂಗ್ ಸ್ಕೂಲ್ ಅಂಗಡಿ ಕಟ್ಟಡಗಳೂ ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹತ್ತಿಕೊಂಡಿದೆನ್ನಲಾಗಿದೆ.

ಘಟನಾ ಸ್ಥಳದ ಸುತ್ತಮುತ್ತ ಹಲವಾರು ಅಂಗಡಿ ಮುಂಗಟ್ಟುಗಳಿರುವುದರಿಂದ, ಬೆಂಕಿ ವಿಸ್ತಾರಗೊಳ್ಳುವ ಭಾರೀ ಅಪಾಯ ಎದುರಾಗಿದೆ.

ಘಟನಾ ಸ್ಥಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಮಾಹಿತಿ ಪಡೆದ ಪೊಲೀಸರು ಕೂಡ ತಕ್ಷಣವೇ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ವಿಟ್ಲಕ್ಕೆ ಸ್ವಂತ ಅಗ್ನಿಶಾಮಕ ಕಚೇರಿ ಇಲ್ಲದ ಕಾರಣ ಪುತ್ತೂರು ಅಥವಾ ಬಿಸಿರೋಡ್‌ನಿಂದ ಅಗ್ನಿಶಾಮಕ ದಳ ಆಗಮಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಪುತ್ತೂರಿನಿಂದ ಅಗ್ನಿಶಾಮಕ ದಳದ ವಾಹನ ಬೆಂಕಿ ಆರಿಸುವ ಕಾರ್ಯಾಚರಣೆ ಮಾಡಿದೆ. ಘಟನೆಯಿಂದ ಸುಮಾರು 2 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು‌ ಅಂದಾಜಿಸಲಾಗಿದೆ. ವರ್ಷಾಂತ್ಯಗೊಂಡು‌ ಹೊಸ ವರ್ಷದ ಸಂಭ್ರಮದ‌ ನಿರೀಕ್ಷೆಯಲ್ಲಿದ್ದ ವಿಟ್ಲದ‌ ಜನತೆಗೆ ಈ ಬೆಂಕಿ‌ಅವಘಡ ದೊಡ್ಡ ಆಘಾತ ನೀಡಿದೆ.ಡಿದೆ.

Share this article

ಟಾಪ್ ನ್ಯೂಸ್

More News