Breaking News :

ಕೂಡುಗದ್ದೆ ಲೆಜೆಂಡ್ಸ್ ಕ್ರಿಕೆಟ್ ಲೀಗ್ : ಗುಹ್ಯ ಟೈಟನ್ಸ್ ಚಾಂಪಿಯನ್ – ಸ್ಟಾರ್ ಸ್ಟ್ರೈಕರ್ ರನ್ನರ್ಸ್  


ಜನವಾಹಿನಿ News ಸಿದ್ದಾಪುರ : ಅಲ್ ಅಮೀನ್ ಸಂಘದ ವತಿಯಿಂದ ಸಿದ್ದಾಪುರ ಗ್ರಾಮದ ಗುಹ್ಯ ಕೂಡುಗದ್ದೆಯ, ರಾಮಣ್ಣರವರ ಗೆದ್ದೆಯಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯ ಚಾಂಪಿಯನ್ಸ್ ಪಟ್ಟವನ್ನು ಗುಹ್ಯ ಟೈಟನ್ಸ್ ತಂಡ ತನ್ನದಾಗಿಸಿಕೊಂಡರೆ. ಸ್ಟಾರ್ ಸ್ಟ್ರೈಕರ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯು ಬಿಡ್ಡಿಂಗ್ ಮಾದರಿಯಲ್ಲಿ ಆಯೋಜಿಸಲಾಗಿದ್ದು , ಸುಮಾರು ಆರು ತಂಡಗಳು ಭಾಗವಹಿಸಿದ್ದವು.

ಆರು ತಂಡಗಳ ಪೈಕಿ ಗುಹ್ಯ ಟೈಟಾನ್ಸ್ ಹಾಗೂ ಸ್ಟಾರ್ ಸ್ಟ್ರೈಕರ್ ತಂಡಗಳು ಫೈನಲ್ ಪ್ರವೇಶಿಸಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಿದವು.

ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಪಿಯನ್ನು ನೀಡಲಾಯಿತು. ಇದಲ್ಲದೆ ಫೈನಲ್ ಪಂದ್ಯದ ಪದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗುಹ್ಯ ಟೈಟಾನ್ಸ್ ತಂಡದ ಯಾಕುಬ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸ್ಟಾರ್ ಸ್ಟ್ರೈಕರ್ ತಂಡದ ಶರವಣ ಪಡೆದುಕೊಂಡರು.

ಅಲ್ ಅಮೀನ್ ಸಂಘದ ಕಾರ್ಯದರ್ಶಿ ರಸೀದ್ ಮಾತನಾಡಿ, ಸಂಘದ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯು ಸೌಹಾರ್ದಯುತವಾಗಿ ನಡೆದಿದ್ದು, ಎಲ್ಲರೂ ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಮುಂದಿನ ವರ್ಷ ಕೂಡ ಸಂಘದಿಂದ ಮತ್ತಷ್ಟು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಲಿದ್ದು ಎಲ್ಲರ ಸಹಕಾರ ಬೆಂಬಲ ಅಗತ್ಯ ಎಂದರು. ಅಲ್ಲದೆ ವಿಜೇತ ತಂಡಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಕೀಲ ಹಾಗೂ ಅಗಸ್ತೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್ ವೆಂಕಟೇಶ್ , ಉದ್ಯಮಿ ವಿಜು, ಕಾರ್ಮಿಕ ಮುಖಂಡ ರಮೇಶ್, ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯೆ ದೇವಿಯಾಣಿ, ಮಾಜಿ ಪಂಚಾಯತಿ ಸದಸ್ಯ ಹಾಗೂ ಅಲ್ ಅಮೀನ್ ಸಂಘದ ಅಧ್ಯಕ್ಷ ಕಾವು, ದೊರೆ, ಜಪ್ಪು, ಸೂರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News