Breaking News :

ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಶಿಪ್ ನಲ್ಲಿ ಇತಿಹಾಸ ಬರೆದ ಕೊಡಗಿನ ಗಗನ್

ಐತಿಹಾಸಿಕ ಸಾಧನೆ ಗೈದ “ಗಗನ್ – ಡೀನ್ ” ಜೋಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತ 


ಜನವಾಹಿನಿ News ಮಡಿಕೇರಿ : ಹಾಕಿ, ಕ್ರಿಕೆಟ್, ಟೆನಿಸ್ ಹೀಗೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಕೊಡಗಿನವರ ಸಾಧನೆ ಅಪಾರ. ಇದೀಗ ಈ ಪಟ್ಟಿಯಲ್ಲಿ ಮೋಟಾರ್ ಸ್ಪೋರ್ಟ್ಸ್ ಭಾರತೀಯ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಶಿಪ್ (INRC) ನಲ್ಲಿ ಓವರ್ ಆಲ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಕೊಡಗಿನ ಯುವನೋರ್ವ ಪ್ರಥಮ ಬಾರಿಗೆ ಇತಿಹಾಸ ಸೃಷ್ಟಿಸಿದ್ದಾರೆ.

ಅಮ್ಮತ್ತಿ-ಹೊಸೂರಿನ ಕೊಂಗಂಡ ಕುಟುಂಬಕ್ಕೆ ಸೇರಿದ ಗಗನ್ ಕರುಂಬಯ್ಯ ರವರೆ ಈ ಸಾಧನೆ ಮಾಡಿರೋ ಯುವ ರ್‍ಯಾಲಿಪಟು, 2013 ರಿಂದ ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಸಕ್ರಿಯರಾಗಿರುವ ಗಗನ್ ಪ್ರಸ್ತುತ, ಟೀಮ್ ಟಿಎಸ್‌ಐ ರೇಸಿಂಗ್ (ಸಿಡ್ವಿನ್) ನೊಂದಿಗೆ ಡೀನ್ ಮಸ್ಕಾರ್ನೆನ್ಸ್ (ಮಂಗಳೂರು) ಇವರೊಂದಿಗೆ ಸಹ-ಚಾಲಕರಾಗಿದ್ದಾರೆ.

ರಾಷ್ಟ್ರೀಯ ಮಟ್ಟದ ನಾಲ್ಕು ಚಕ್ರಗಳ ರ್‍ಯಾಲಿನಲ್ಲಿ ಇದೆ ಮೊದಲ ಬಾರಿಗೆ ಗಮನಾರ್ಹ ಮೈಲಿಗಲ್ಲು ಸಾಧಿಸಿದ ಕೊಡಗಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಗಗನ್ ಪಾತ್ರರಾಗಿದ್ದು, ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಆಫ್ ಇಂಡಿಯಾ, ಬ್ಲೂಬ್ಯಾಂಡ್ ಸ್ಪೋರ್ಟ್ಸ್. ಅಮ್ಮತ್ತಿ ರೋಬಸ್ಟಾ ಅಡ್ವೆಂಚರ್ ಮತ್ತು ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‌ಶಿಪ್ ನಲ್ಲಿ (ಐಎನ್ ಆರ್‌ಸಿ) ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ,ಮಂಗಳೂರಿನ ಡೀನ್ ಮಸ್ಕರೇನ್ಹಸ್-ಕೊಡಗಿನ ಕೊಂಗಂಡ ಗಗನ್ ಕರುಂಬಯ್ಯ ಜೋಡಿ ಇದೀಗ ಸಮಗ್ರ ಚಾಂಪಿಯನ್ ಶಿಪ್ ಪಟ್ಟವನ್ನು ತನ್ನದಾಗಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.


ಯುವ ರ್‍ಯಾಲಿ ಪಟುಗಳ ಈ ಸಾಧನೆ ನಿಜವಾಗಿಯೂ ಮೆಚ್ಚತಕ್ಕದ್ದು, ಇದು ಬಹಳ ಬಹಳ ಸಂತೋಷದ ವಿಚಾರ. ಈ ರೀತಿಯ ಸಾಧನೆ ಮಾಡುವುದು ಸುಲಭವಲ್ಲ, ಈ ಯಶಸ್ಸು ಕೊಡಗಿನ ಯುವ ಜನತೆಗೆ ಮತ್ತು ಎಲ್ಲಾ ಮೋಟಾರ್‌ಸ್ಪೋರ್ಟ್ಸ್ ಉತ್ಸಾಹಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ.

ಅಂತಿಮ ಹಂತದ ರ‍್ಯಾಲಿ (ಸುತ್ತು 6) ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆಯಲಿದ್ದರೂ, ಕೊನೆಯ ಹಂತ ಮುಗಿಯುವ ಮೊದಲೇ ಗಗನ್ ಡೀನ್ ಜೋಡಿ ಉತ್ತಮ ಅಂಕ (ಪಾಯಿಂಟ್‌) ಗಳನ್ನು ಪಡೆಯುವ ಮೂಲಕ ಚಾಂಪಿಯನ್‌ಶಿಪ್ ಅನ್ನು ಈಗಾಗಲೇ ವಶಪಡಿಸಿಕೊಂಡಿದೆ. ಈ ಅದ್ಭುತ ಮಟ್ಟವನ್ನು ತಲುಪಿದ್ದಕ್ಕಾಗಿ ಮತ್ತು ಭಾರತೀಯ ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸೃಷ್ಟಿಸಿದ್ದಕ್ಕಾಗಿ ಗಗನ್ ಕರುಂಬಯ್ಯ ಮತ್ತು ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ತಿಮ್ಮಣ್ಣ ಉದ್ದಪಂಡ ಸ್ಥಾಪಕರು, ರೋಬಸ್ಟಾ ಅಡ್ವೆಂಚರ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ


ಸ್ಪರ್ಧೆ ಹೆಚ್ಚು ಸವಾಲಿನ ವಿಚಾರವಾಗಿತ್ತು. ಕ್ರೀಡೆ ಯನ್ನು ನೈಜತೆಯೊಂದಿಗೆ ಆನಂದಿಸಿದ್ದೇವೆ.ರೊಬಸ್ಟಾ ರ್‍ಯಾಲಿ ಅಂತೆ ಇದು ಕೂಡ ಹೊಸ ಅನುಭವ ನೀಡಿದೆ. ಈ ಸಾಧನೆಯಿಂದ ಮತ್ತಷ್ಟು ಉತ್ಸಾಹ ಹೆಚ್ಚಾಗಿದೆ. ಮತ್ತಷ್ಟು ಸಾಧನೆ ಮಾಡುವ ಛಲ ಬಂದಿದೆ.

ಕೊಂಗಂಡ ಗಗನ್ ಕರುಂಬಯ್ಯ, ಚಾಂಪಿಯನ್ ರ್‍ಯಾಲಿಪಟು.

 

Share this article

ಟಾಪ್ ನ್ಯೂಸ್

More News