Breaking News :

ಟಿ20 ವಿಶ್ವಕಪ್ ಸೆಮಿ ಫೈನಲ್ಸ್: ಇಂಗ್ಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ

 

 


ಜನವಾಹಿನಿ News ಮುಂಬೈ : ಇಂಗ್ಲೆಂಡ್ ವಿರುದ್ಧ ನಡೆದಿದ್ದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 7 ರನ್ಗಳಿಂದ ರೋಚಕ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಬೃಹತ್ ಮೊತ್ತ ಸಿಡಿಸಿದರೂ ಭಾರತ ಪಂದ್ಯ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಂಡಿತ್ತು. ಇಂಗ್ಲೆಂಡ್ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಆದರೆ ಕೊನೆಯ ಓವರ್‌ನಲ್ಲಿ ಶತಕ ವೀರ ಬೆತೆಲ್ ವಿಕೆಟ್ ಪತನದ ಮೂಲಕ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಇಂಗ್ಲೆಂಡ್ ತಂಡವನ್ನು 246 ರನ್‌ಗೆ ಕಟ್ಟಿ ಹಾಕಿತು. ಈ ಮೂಲಕ 7 ರನ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.

ಮಾರ್ಚ್ 8 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ ಟ್ರೋಫಿಗಾಗಿ ಸೆಣಸಾಡಲಿದೆ.

ಆರಂಭದಲ್ಲಿ ಫಿಲಿಪ್ ಸಾಲ್ಟ್ ಕೇವಲ 5 ರನ್ ಸಿಡಿಸಿ ಔಟಾದರು. ಇತ್ತ ನಾಯತ ಹ್ಯಾರಿ ಬ್ರೂಕ್ ಕೇವಲ 7 ರನ್‌ ಸಿಡಿಸಿ ನಿರ್ಗಮಿಸಿದರು. ಜೋಸ್ ಬಟ್ಲರ್ ಹಾಗೂ ಜೇಕಬ್ ಬೆತೆಲ್ ಜೊತೆಯಾಟದಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು. ಬಟ್ಲರ್ 25 ರನ್ ಸಿಡಿಸಿ ಔಟಾದರು. ಆದರೆ ಬೆತೆಲ್ ಅಬ್ಬರ ಮುಂದುವರಿದಿತ್ತು.

ವಿಲ್ ಜ್ಯಾಕ್ಸ್ 20 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. ಆದರೆ ಬೆತೆಲ್ ಭಾರತಕ್ಕೆ ಸವಾಲಾಗಿ ಪರಿಣಿಸಿತ್ತು. ಬೆತೆಲ್ ಹಾಗೂ ಸ್ಯಾಮ್ ಕುರನ್ ಜೊತೆಯಾಟ ಕ್ಷಣಕ್ಷಣಕ್ಕೂ ಟೀಂ ಇಂಡಿಯಾ ಅಭಿಮಾನಿಗಳ ತಲೆನೋವು ಹೆಚ್ಚಿಸಿತ್ತು.

ಇತ್ತ ಬೆತೆಲ್ 46 ಎಸೆತದಲ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಅಲ್ಲಿಗೆ ಪಂದ್ಯ ಇಂಗ್ಲೆಂಡ್ ಕಡೆ ವಾಲಿತ್ತು. ಮರು ಎಸೆತದಲ್ಲೇ ಸ್ಯಾಮ್ ಕುರನ್ ವಿಕೆಟ್ ಪತನಗೊಂಡಿತು. ಅಷ್ಟರಲ್ಲೇ ಪಂದ್ಯದ ಗತಿ ಬದಲಾಗಿತ್ತು. ಅಂತಿಮ 6 ಎಸೆತದಲ್ಲಿ ಇಂಗ್ಲೆಂಡ್‌ 30 ರನ್ ಅವಶ್ಯಕತೆ ಇತ್ತು. ಶಿವಂ ದುಬೆ ಮೊದಲ ಎಸೆತದಲ್ಲಿ ಬೆತೆಲ್ ವಿಕೆಟ್ ಪತನಗೊಂಡಿತು.ಜೋಫಾ ಆರ್ಚರ್ 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಅಂತಿಮವಾಗಿ ಭಾರತ 7ರನ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತು.

Share this article

ಟಾಪ್ ನ್ಯೂಸ್

More News