Breaking News :

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡೀಪಾರು ನೋಟೀಸ್..!

 


ಜನವಾಹಿನಿ News ಬೆಳ್ತಂಗಡಿ : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮೂರನೇ ಬಾರಿಗೆ ಹೊರ ಜಿಲ್ಲೆ ಗೆ ಗಡಿಪಾರು ಮಾಡಲಾಗಿದೆ. ಅವರನ್ನು ಮಾ.16 ರಿಂದ ಸೆ.19ರ ತನಕ 6 ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಿ ನೋಟೀಸ್ ಜಾರಿಗೊಳಿಸಲಾಗಿದೆ.

ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಗಡೀಪಾರು ಆದೇಶ ಜಾರಿಗೊಳಿಸಿದ್ದಾರೆ. ಕೆಲ ಸಮಯದ ಹಿಂದೆ ಎರಡನೇ ಬಾರಿ ದ.ಕ ಜಿಲ್ಲೆಯಿಂದ ತಿಮರೋಡಿ ಅವರನ್ಮು ಎಸಿ ಅವರು ಗಡೀಪಾರು ಮಾಡಿದ್ದರು.

ಆದರೆ ತಿಮರೋಡಿ ಇದರ ವಿರುದ್ದವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಮರುಪರಿಶೀಲನೆ ಮಾಡಿ ಆದೇಶ ಮಾಡುವಂತೆ ಪುತ್ತೂರು ಎಸಿಗೆ ಹೈಕೋರ್ಟ್ ಸೂಚನೆ ನೀಡಿತ್ತು ಹೈಕೋರ್ಟ್ ನಲ್ಲಿ ನಾಗ ಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ಮಾಡಿತ್ತು. ಈ ನಡುವೆ ತಿಮರೋಡಿ ಅವರು ಗಡಿಪಾರು ಆದೇಶ ರದ್ದು ಕೋರಿ ಎರಡನೇ ಬಾರಿಗೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ಹೈಕೋರ್ಟ್ ಪುತ್ತೂರು ಎಸಿಗೆ ಮತ್ತೆ ಮೂರು ವಾರಗಳ ಸಮಯವಕಾಶ ನೀಡಿತ್ತು ಇದೀಗ ಎಸಿ ಅವರು ಮೂರನೇ ಬಾರಿ ಗಡೀಪಾರು ಆದೇಶ ಮಾಡಿದ್ದಾರೆ.

Share this article

ಟಾಪ್ ನ್ಯೂಸ್

More News