Breaking News :

ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

  ಮಡಿಕೇರಿ : ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೇಜರ್. ಡಾ. ಕುಶ್ವಂತ್ ಕೋಳಿಬೈಲು ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಎಂ.ಬಿ.ಕಾವೇರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಎಸ್.ಎಸ್.ಮಾದಯ್ಯ, ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಸುಂಟಿಕೊಪ್ಪ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

  ಸುಂಟಿಕೊಪ್ಪ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ಸುಂಟಿಕೊಪ್ಪ : ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಆಟೋ ನಿಲ್ದಾಣದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಎ.ಎಂ. ಶರೀಫ್, ವಾಹನ ಚಾಲಕರ ಸಂಘದ ಅಧ್ಯಕ್ಷರಾದ ಕಿಟ್ಟಣ್ಣ ರೈ ಹಾಗೂ ಇತರರು ಭಾಗವಹಿಸಿದ್ದರು. ಮಳೆಯ ನಡುವೆಯೂ ಆಟೋಚಾಲಕರು ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಿದರು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ  ಸ್ವಾತಂತ್ರ್ಯ ದಿನಾಚರಣೆ

  ಕುಶಾಲನಗರ : ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ  ಶಾಲೆಯ ಎನ್.ಎಸ್.ಎಸ್, ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ವಿದ್ಯಾರ್ಥಿ ಸಂಘ ಹಾಗೂ ಎಸ್ ಡಿ ಎಂ ಸಿ ಸಹಯೋಗದಲ್ಲಿ 79 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.

ಸಿದ್ದಾಪುರ ಟೂರಿಸ್ಟ್ ಟ್ಯಾಕ್ಸಿ ಚಾಲಕರಿಂದ ಸ್ವಾತಂತ್ರೋತ್ಸವ ಆಚರಣೆ 

  ಸಿದ್ದಾಪುರ ಟೂರಿಸ್ಟ್ ಟ್ಯಾಕ್ಸಿ ಚಾಲಕರಿಂದ ಸ್ವಾತಂತ್ರೋತ್ಸವ ಆಚರಣೆ   ಸಿದ್ದಾಪುರ : ಮಡಿಕೇರಿ ರಸ್ತೆಯಲ್ಲಿ ಸಿದ್ದಾಪುರ ಟೂರಿಸ್ಟ್ ಟ್ಯಾಕ್ಸಿ ಚಾಲಕರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮಾಜಿ ಯೋಧ ಶಬೀರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಪಡೆಯಲು ಹಿರಿಯರು ಅನುಭವಿಸಿದ ನೋವು ಅವರ ತ್ಯಾಗ ಬಲಿದಾವನ್ನು ಸ್ಮರಿಸಿದರು ಇದೇ ಸಂದರ್ಭ ಮಾಜಿ ಸೈನಿಕ ಶಬೀರ್ ಹಾಗೂ ಸಿದ್ದಾಪುರ ಪಂಚಾಯ್ತಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಟೂರಿಸ್ಟ್ ಟ್ಯಾಕ್ಸಿ ಚಾಲಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

  ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೊನ್ನಂಪೇಟೆ : ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣ ಪಂಚಾಯಿತಿ ಆವರಣದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಆಲೀರ ರಶೀದ್ ಧ್ವಜಾರೋಹಣ ನೆರವೇರಿಸಿದರು. ನಂತರ ಧ್ವಜವಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮೂಕಳೇರ ಸುಮಿತ, ಕೋಳೇರ ಭಾರತಿ, ಕರ್ತಮಾಡ ರಶಿಕ, ಮೂಕಳೇರ ಮಧುಕುಮಾರ್, ರಾಮಕೃಷ್ಣ ವಿಜಯಕುಮಾರ್, ಎ. ಎ. ಅಜೀಜ್, ಮಚ್ಚಮಾಡ ವಿಲ್ಮ, ಆರತಿ ಸುರೇಶ್, ಮುಖ್ಯಾಧಿಕಾರಿ ಗೋಪಿ, ಪೊನ್ನಂಪೇಟೆ […]

ನಾವು ಅನುಭವಿಸುತ್ತಿರುವ ಸ್ವಾಂತಂತ್ರ್ಯ ನಮ್ಮ ಪೂರ್ವಿಕರ ಕೊಡುಗೆ : ಚಂಗಪ್ಪ

ನಾವು ಅನುಭವಿಸುತ್ತಿರುವ ಸ್ವಾಂತಂತ್ರ್ಯ ನಮ್ಮ ಪೂರ್ವಿಕರ ಕೊಡುಗೆ : ಚಂಗಪ್ಪ ಸಿದ್ದಾಪುರ : ನಮ್ಮ ಪೂರ್ವಿಕರು ಹೋರಾಟ ಪ್ರಾಣ ತ್ಯಾಗ ಮಾಡಿ ನಮಗೆ ಕೊಡುಗೆಯಾಗಿ ನೀಡಿರುವ ಸ್ವಾತಂತ್ರ್ಯವನ್ನು ನಾವು ಇಂದು ಅನುಭವಿಸುತ್ತಿದ್ದೇವೆ ಎಂಬುವುದನ್ನು ಯಾರೂ ಮರೆಯುವಂತಿಲ್ಲ ಎಂದು ಆನಂದಪುರ ಎಸ್ಟೇಟಿನ ಡೆಪ್ಯೂಟಿ ಮೆನೇಜರ್ ಚಂಗಪ್ಪ ಅಭಿಪ್ರಾಯಪಟ್ಟಿದ್ದಾರೆ. ಟಾಟಾ ಕಾಫಿ ಸಂಸ್ಥೆಗೆ ಸೇರಿದ ಆನಂದಪುರ ಎಸ್ಟೇಟಿನ ಪಳ್ಳಕೆರೆ ವಿಭಾಗದಲ್ಲಿ ಏರ್ಪಡಿಸಿದ್ದ 79ನೇಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಫೀಲ್ಡ್ ಆಫೀಸರ್ ಪ್ರದೀಪ್, ತೋಟದ […]

ಅವರೇಗುಂದದಲ್ಲಿ ಬೃಹತ್ ಹೆಬ್ಬಾವು ರಕ್ಷಣೆ

ಅವರೇಗುಂದದಲ್ಲಿ ಬೃಹತ್ ಹೆಬ್ಬಾವು ರಕ್ಷಣೆ ಸಿದ್ದಾಪುರ : ಮಾಲ್ದಾರೆ ವ್ಯಾಪ್ತಿಯ ಅವರೇಗುಂದ ಗ್ರಾಮದಲ್ಲಿ ಕಾಣಿಸಿಕೊಂಡ ಬೃಹತ್ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಉರಗ ರಕ್ಷಕ ಸುರೇಶ್ ಪೂಜಾರಿ ಹಾಗೂ ಆರ್ ಆರ್ ಟಿ ಸಿಬ್ಬಂದಿ ಶಶಿ ಯಶಸ್ವಿಯಾಗಿದ್ದಾರೆ. ಗ್ರಾಮದ ಸಮುದಾಯ ಭವನ ಪಕ್ಕದ ಅಂಗನವಾಡಿ ಬಳಿ ಬೃಹತ್ ಗಾತ್ರದ ಹೆಬ್ಬಾವುವೊಂದು ಕಾಣಿಸಿಕೊಂಡಿದೆ. ಹೆಬ್ಬಾವನ್ನು ಪ್ರತಕ್ಷವಾಗಿ ಕಂಡ ಗ್ರಾಮಸ್ಥ ಸಂಪತ್ ಕುಮಾರ್ ತಕ್ಷಣವೇ ಪಂಚಾಯಿತಿ ಸದಸ್ಯ ಮಹೇಶ್ ಕುಮಾರ್ ರವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. […]

ಸ್ವಾತಂತ್ರ್ಯ ದಿನಾಚರಣೆ : ಮಹಿಳಾ ಸಂಘದಿಂದ ಸರಕಾರಿ ಶಾಲೆಗೆ ಸಿಸಿ ಕ್ಯಾಮೆರಾ ಕೊಡುಗೆ

  ಸ್ವಾತಂತ್ರ್ಯ ದಿನಾಚರಣೆ : ಮಹಿಳಾ ಸಂಘದಿಂದ ಸರಕಾರಿ ಶಾಲೆಗೆ ಸಿಸಿ ಕ್ಯಾಮೆರಾ ಕೊಡುಗೆ ಮಡಿಕೇರಿ : ಸೋಮವಾರಪೇಟೆ ತಾಲೂಕಿನ ತಣ್ಣೀರುಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 79ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್ ಮೈಕ್ರೋ ಫೈನಾನ್ಸ್ ಹಾಗೂ ಗ್ರಾಮೀಣ ಕೂಟ ಸಂಘದ ಮಹಿಳಾ ಸದಸ್ಯರು ಶಾಲೆಗೆ ಸೋಲಾರ್ ಸಿಸಿ ಕ್ಯಾಮರಾ ವನ್ನು ಮುಖ್ಯ ಶಿಕ್ಷಕಿ ಶಾಂತಮ್ಮ ಅವರಿಗೆ ಹಸ್ತಾಂತರಿಸುವ ಮೂಲಕ […]

ಸ್ವಾತಂತ್ರ್ಯಕ್ಕಾಗಿ ಹೋರಾಡುವಲ್ಲಿ ತೋರಿದ ಸ್ಫೂರ್ತಿಯನ್ನೇ ಸಂವಿಧಾನವನ್ನು ಎತ್ತಿಹಿಡಿಯುವ ವಿಚಾರದಲ್ಲಿಯೂ ನಾವೆಲ್ಲರೂ ತೋರಬೇಕು : ಸಿಎಂ ಸಿದ್ದರಾಮಯ್ಯ

    ಸ್ವಾತಂತ್ರ್ಯಕ್ಕಾಗಿ ಹೋರಾಡುವಲ್ಲಿ ತೋರಿದ ಸ್ಫೂರ್ತಿಯನ್ನೇ ಸಂವಿಧಾನವನ್ನು ಎತ್ತಿಹಿಡಿಯುವ ವಿಚಾರದಲ್ಲಿಯೂ ನಾವೆಲ್ಲರೂ ತೋರಬೇಕು : ಸಿಎಂ ಸಿದ್ದರಾಮಯ್ಯ ಬೆಂಗಳೂರು : ಬ್ರಿಟಿಷರ ದಾಸ್ಯದಿಂದ ಸ್ವಾತಂತ್ರ್ಯ ಪಡೆಯಲು ದೇಶವು ಒಗ್ಗೂಡಿ ಹೋರಾಡುವಲ್ಲಿ ತೋರಿದ ಸ್ಫೂರ್ತಿಯನ್ನೇ ಸಂವಿಧಾನವನ್ನು ಎತ್ತಿಹಿಡಿಯುವ ವಿಚಾರದಲ್ಲಿಯೂ ನಾವೆಲ್ಲರೂ ತೋರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ೭೯ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಚಳವಳಿಯು ನಮ್ಮನ್ನು ಹೇಗೆ […]

ಭಗವತಿ ಯುವಕ ಸಂಘದಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ  : ರಾಷ್ಟ್ರ ರಕ್ಷಣೆ ಮಾತ್ರ ದೇಶ ಸೇವೆಯಲ್ಲ – ರಾಷ್ಟ್ರೀಯ ಹಬ್ಬಗಳ ಆಚರಣೆ ಮೂಲಕ ದೇಶಪ್ರೇಮವನ್ನು ಹಿಮ್ಮಡಿಗೊಳಿಸುವುದು ಕೂಡ ದೇಶ ಸೇವೆಯೇ : ಪ್ರಕಾಶ್

ಭಗವತಿ ಯುವಕ ಸಂಘದಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ   ರಾಷ್ಟ್ರ ರಕ್ಷಣೆ ಮಾತ್ರ ದೇಶ ಸೇವೆಯಲ್ಲ – ರಾಷ್ಟ್ರೀಯ ಹಬ್ಬಗಳ ಆಚರಣೆ ಮೂಲಕ ದೇಶಪ್ರೇಮವನ್ನು ಹಿಮ್ಮಡಿಗೊಳಿಸುವುದು ಕೂಡ ದೇಶ ಸೇವೆಯೇ : ಪ್ರಕಾಶ್ ಸಿದ್ದಾಪುರ : ಸಮೀಪದ ಇಂಜಿಲಗೆರೆ ಭಗವತಿ ಯುವಕ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯ ಬೆಳೆಗಾರ ವೆಂಕಪ್ಪ ರೈ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ದೊರೆತು 79 ವರ್ಷ ಕಳೆದಿದ್ದರೂ ಇಂದಿಗೂ ನಾವು ಅದನ್ನು ಆಚರಣೆ ಮಾಡುತ್ತೇವೆ ಎಂದರೆ ಇದು ನಮಗೆ […]