Breaking News :

ಅಕ್ರಮ ಗಾಂಜಾ ಸಾಗಾಟ ಇಬ್ಬರ ಬಂಧನ : 7ಕೆಜಿಗೂ ಅಧಿಕ ಗಾಂಜಾ ವಶ

ಅಕ್ರಮ ಗಾಂಜಾ ಸಾಗಾಟ ಇಬ್ಬರ ಬಂಧನ : 7ಕೆಜಿಗೂ ಅಧಿಕ ಗಾಂಜಾ ವಶ ಮಡಿಕೇರಿ :  ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ವಿರಾಜಪೇಟೆ ನಗರ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ವಿರಾಜಪೇಟೆ ಠಾಣಾ ವ್ಯಾಪ್ತಿಗೆ ಒಳಪಡುವ ಆರ್ಜಿ ಗ್ರಾಮದಲ್ಲಿ ಗಾಂಜಾ ವಸ್ತುಗಳನ್ನು ಕೇರಳಕ್ಕೆ ಮಾರಾಟ ಮಾಡಲು ಯತ್ನಿಸಿದ ಹುಣಸೂರಿನ ವಿಜಯನಗರದ ಅನೀಸ್ ಅಹಮದ್( 45 )ಮತ್ತು ಹುಣಸೂರು ಪಟ್ಟಣದ ಸ್ಕೋರ್ ಬೀದಿ ನಿವಾಸಿ ಚೇತನ್ (40) ಬಂಧಿತಾರಾಗಿದ್ದು, ಬಂಧಿತರಿಂದ […]

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ಮಡಿಕೇರಿ : ಜಿಲ್ಲೆಯ ನಿವೇಶನ ರಹಿತ ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಿ ಮನೆ ನಿರ್ಮಾಣ ಮತ್ತು ಮೂಲಕಭೂತ ಸೌಲಭ್ಯಕ್ಕೆ ಆಗ್ರಹಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಸಿಐಟಿಯು(ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್) ಅಧ್ಯಕ್ಷ ಪಿ.ಆರ್.ಭರತ್, ಜಿಲ್ಲೆಯಲ್ಲಿ ಸಾವಿರಾರು ಆದಿವಾಸಿ ಕುಟುಂಬಗಳಿವೆ. ಇವರು ಜಿಲ್ಲೆಯಲ್ಲಿ ಮೂಲ ನಿವಾಸಿಗಳಾಗಿದ್ದು, ಸ್ವಂತ ವಾಸಕ್ಕೆ […]

ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರಿಂದ ಅಜಿ೯ ಅಹ್ವಾನ

ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರಿಂದ ಅಜಿ೯ ಅಹ್ವಾನ ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿಯಿಂದ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 2ರ ವರೆಗೆ ನಗರದಲ್ಲಿ ಆಯೋಜಿತ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದ ಎಂದು ಸಮಿತಿಯ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ. ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.23 ರಿಂದ ಅ2 ರವರೆಗೆ ದಸರಾ ಸಾಂಸ್ಕೖತಿಕ ಸಮಿತಿಯಿಂದ ವೈವಿಧ್ಯಮಯ ಕಾಯ೯ಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಸಾಂಸ್ಕೖತಿಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ […]

ಕೊಡಗು ಪತ್ರಿಕಾಭವನ ಟ್ರಸ್ಟ್ ನಿಂದ 47 ವಿದ್ಯಾಥಿ೯ಗಳಿಗೆ ವಿದ್ಯಾನಿಧಿ ನೀಡಿಕೆ : ಅಂಕಗಳಿಕೆಗಿಂತ ಮಾನವೀಯ ಮೌಲ್ಯಗಳ ಕಲಿಕೆ ಮುಖ್ಯವಾಗಬೇಕು – ಎಂ.ಎ.ನಿರಂಜನ್

ಕೊಡಗು ಪತ್ರಿಕಾಭವನ ಟ್ರಸ್ಟ್ ನಿಂದ 47 ವಿದ್ಯಾಥಿ೯ಗಳಿಗೆ ವಿದ್ಯಾನಿಧಿ ನೀಡಿಕೆ : ಅಂಕಗಳಿಕೆಗಿಂತ ಮಾನವೀಯ ಮೌಲ್ಯಗಳ ಕಲಿಕೆ ಮುಖ್ಯವಾಗಬೇಕು – ಎಂ.ಎ.ನಿರಂಜನ್ ಮಡಿಕೇರಿ : ಪಠ್ಯದಲ್ಲಿನ ಅಂಕಗಳಿಕೆಯೇ ವಿದ್ಯಾಥಿ೯ಗಳ ಸಾಧನೆಗೆ ಪ್ರಮುಖ ಮಾನದಂಡವಾಗದೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳುವುದೂ ವಿದ್ಯಾಥಿ೯ಗಳ ಜೀವನದಲ್ಲಿ ಪ್ರಮುಖವಾಗಿರಲಿ ಎಂದು ಹಿರಿಯ ವಕೀಲ, ಮಡಿಕೇರಿ ವಕೀಲರ ಸಂಘದ ನಿಕಟಪೂವ೯ ಅಧ್ಯಕ್ಷ ಎಂ.ಎ.ನಿರಂಜನ್ ಕರೆ ನೀಡಿದ್ದಾರೆ. ನಗರದ ಕೊಡಗು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಜಿಲ್ಲೆಯ ಪತ್ರಕತ೯ರ 47 ವಿದ್ಯಾಥಿ೯ಗಳಿಗೆ 2.19ಲಕ್ಷ ರು. ವೆಚ್ಚದಲ್ಲಿ ವಿದ್ಯಾನಿಧಿ […]

ಕೊಡಗು ಜಿಲ್ಲಾ ಎನ್ ಎಸ್ ಎಸ್ ಅಧಿಕಾರಯಾಗಿ ನೇಮಕ

ಕೊಡಗು ಜಿಲ್ಲಾ ಎನ್ ಎಸ್ ಎಸ್ ಅಧಿಕಾರಯಾಗಿ ನೇಮಕ ಮಡಿಕೇರಿ : ಕೊಡಗು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಜಿಲ್ಲಾ ನೋಡಲ್ ಅಧಿಕಾರಿಯಾಗಿ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ ದಯಾನಂದ.ಕೆ.ಸಿ ಯವರನ್ನು ನೇಮಿಸಲಾಗಿದೆ.

ಕರಿಕೆ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ

ಕರಿಕೆ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ  ಮಡಿಕೇರಿ : ಕರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮ ಒಂದನೇ ತರಗತಿ ಆರಂಭಕ್ಕೆ ಚಾಲನೆ ನೀಡಲಾಯಿತು. ಇತ್ತೀಚೆಗೆ ನಡೆದ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಮತ್ತು ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಆಂಗ್ಲಭಾಷಾ ಜ್ಞಾನ ಬೆಳೆಸುವ […]

ಕಾಡಾನೆ ಹಾವಳಿಯಿಂದ ಕಂಗೆಟ್ಟ ಕರಿಕೆ ಗ್ರಾಮಸ್ಥರು : ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯ 

ಕಾಡಾನೆ ಹಾವಳಿಯಿಂದ ಕಂಗೆಟ್ಟ ಕರಿಕೆ ಗ್ರಾಮಸ್ಥರು : ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯ  ಮಡಿಕೇರಿ : ಗಡಿಗ್ರಾಮ ಕರಿಕೆ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡು ರೈತರು ಬೆಳೆದಿದ್ದ ಕೃಷಿ ಫಸಲನ್ನು ನಾಶಪಡಿಸಿವೆ. ಇದರಿಂದ ಬೇಸತ್ತಿರುವ ಇಲ್ಲಿನ ಕೃಷಿಕರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಸಿದ್ದಾರೆ. ಗ್ರಾಮದ ಪಚ್ಚೆ ಪಿಲಾವು ಎಚ್.ಎಂ.ನಂಜುಂಡ ರವರ ತೋಟ ಸೇರಿದಂತೆ ಸುತ್ತಮುತ್ತಲ ರೈತರ ಕೃಷಿ ಫಸಲನ್ನು ನಾಶ ಇದರಿಂದಮಾಡಿದೆ. ಸಮೀಪದ ಹೊಳೆಯನ್ನು ದಾಟಿ ಬಂದಿರುವ ಕಾಡಾನೆಗಳು ಅಡಿಕೆ ಮರ ಮತ್ತು ಬಾಳೆ […]

ಶಾಲಾ ಆವರಣ ಸ್ವಚ್ಛಗೊಳಿಸಿ ರಸ್ತೆ ಗುಂಡಿ ಮುಚ್ಚಿದ ನೇತಾಜಿ ಯುವಕ ಸಂಘ : ಹಲವರಿಂದ ಪ್ರಶಂಸೆ 

ಶಾಲಾ ಆವರಣ ಸ್ವಚ್ಛಗೊಳಿಸಿ ರಸ್ತೆ ಗುಂಡಿ ಮುಚ್ಚಿದ ನೇತಾಜಿ ಯುವಕ ಸಂಘ : ಹಲವರಿಂದ ಪ್ರಶಂಸೆ ಸಿದ್ದಾಪುರ : ನೇತಾಜಿ ಯುವಕ ಸಂಘ ವತಿಯಿಂದ ಗುಹ್ಯ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಶ್ರಮದಾನದ ಮೂಲಕ ಶಾಲೆಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದ ಸಂಘದ ಸದಸ್ಯರು ಇದೇ ಸಂದರ್ಭ ಸಮೀಪದ ರಸ್ತೆಯಲ್ಲಿದ್ದ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿದ್ದಾರೆ. ಸಂಘದ ಕಾರ್ಯಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದು, ಸಾಮಾಜಿಕ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹಾರೈಸಿದ್ದಾರೆ.

ಸಮಾಜದ ಅಭಿವೃದ್ಧಿಗೆ ಬಿಲ್ಲವ ಸಮಾಜದವರ ಕೊಡುಗೆ ವಿಶಿಷ್ಟ : ಎ. ಎಸ್.ಪೊನ್ನಣ್ಣ

ಸಮಾಜದ ಅಭಿವೃದ್ಧಿಗೆ ಬಿಲ್ಲವ ಸಮಾಜದವರ ಕೊಡುಗೆ ವಿಶಿಷ್ಟ : ಎ. ಎಸ್.ಪೊನ್ನಣ್ಣ ನಾಪೋಕ್ಲು : ಬಿಲ್ಲವ ಸಮಾಜದವರು ಅವರದೇ ಆದ ವಿಶಿಷ್ಟ ರೀತಿಯಲ್ಲಿ ಸಮಾಜದ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ತಿಳಿಸಿದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ನಾಪೋಕ್ಲು ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವಾರ್ಷಿಕೋತ್ಸವ ಅಂಗವಾಗಿ ಆಯೋಜನೆಗೊಂಡಿದ್ದ ಬೃಹತ್ ರಕ್ತದಾನ ಶಿಬಿರ, ಸಮಾಜದ ಮಹಾಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಆಟಿಡೊಂಜಿ […]

ಬೆಂಗಳೂರಿನಲ್ಲಿ ಮೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ ಮೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಬೆಂಗಳೂರಿನಿಂದ ಬೆಳಗಾವಿ, ಅಮೃತಸರದಿಂದ ಮಾತಾ ವೈಷ್ಣೋದೇವಿ ಕತ್ರಾ ಮತ್ತು ನಾಗ್ಪುರ (ಅಜ್ನಿ) ದಿಂದ ಪುಣೆ ಹೋಗುವ ಮೂರು ವಂದೇ ಭಾರತ್ಗೆ ಹಸಿರು ನಿಶಾನೆ ತೋರಿದರು. ಈ ಹೈಸ್ಪೀಡ್ ರೈಲುಗಳು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲಿದೆ. ಬಹುನಿರೀಕ್ಷಿತ ಬೆಂಗಳೂರು-ಬೆಳಗಾವಿ ವಂದೇ ಭಾರತ್ […]