Breaking News :

ಅನ್ಯಕೋಮಿನ ಜೋಡಿ ಬೈಕ್ ನಲ್ಲಿ ತೆರಳುವಾಗ ತಡೆದು ಪ್ರಶ್ನಿಸಿದ ಗುಂಪು

ಅನ್ಯಕೋಮಿನ ಜೋಡಿ ಬೈಕ್ ನಲ್ಲಿ ಹೋಗುವಾಗ ಅಡ್ಡಗಟ್ಟಿ ಜನರು ಪ್ರಶ್ನಿಸಿರುವ ಘಟನೆ ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿ ನಿನ್ನೆ ಘಟನೆ ನಡೆದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ಹಾಗೂ ಆಕೆಯ ಮಗುವನ್ನು ಬೈಕ್‌ನಲ್ಲಿ ಕೆರದುಕೊಂಡು ಹೋಗುತ್ತಿದ್ದ ಯುವಕನ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಯುವಕನಿಂದ ಬೆದರಿಕೆ ಹಾಕಿರುವ ಕುರಿತು ದೂರು ಪಡೆದಿದ್ದಾರೆ. ಜಿಲ್ಲೆಯ ಮಾಲೂರು ತಾಲ್ಲೂಕು ಶಿವಾರಪಟ್ಟಣದ ವಿಷ್ಣು ಎಂಬ ಯುವಕ ಅದೇ ಗ್ರಾಮದ ಸಮೀನಾ ತಾಜ್ ಎಂಬ ಮಹಿಳೆಯನ್ನು […]

ಉದ್ಘಾಟನೆ ಭಾಗ್ಯವಿಲ್ಲದೆ ಭೂತ ಬಂಗಲೆಯಂತಾದ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಿಸಿದ ಸಮುದಾಯ ಭವನ

ಬಡವರು,ಮಧ್ಯಮವರ್ಗದ ಜನರ ಕಾರ್ಯಕ್ರಮಗಳಿಗೆ ಅಂತಾ ಕೋಟಿ ಕೋಟಿ ರೂ.ವೆಚ್ಚದಲ್ಲಿ ಜಯನಗರದಲ್ಲಿ ನಿರ್ಮಿಸಿರುವ ಬಿಬಿಎಂಪಿಯ (BBMP) ಸಮುದಾಯಭವನ ಉದ್ಘಾಟನೆ ಭಾಗ್ಯ ಸಿಗದೇ ಗಬ್ಬೆದ್ದುನಾರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ‌. ಭೂತಬಂಗಲೆಯಂತಾದ ಬಿಬಿಎಂಪಿಯ ಸಮುದಾಯ ಭವನ ಜಯನಗರದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಈ ಕಟ್ಟಡ 2020ರಲ್ಲೇ ಉದ್ಘಾಟನೆಯಾಗಬೇಕಿತ್ತು, ಆದರೆ ಮಾಜಿ ಶಾಸಕಿ ಸೌಮ್ಯರೆಡ್ಡಿ ಹಾಗೂ ಹಾಲಿ ಶಾಸಕ ಸಿ.ಕೆ.ರಾಮಮೂರ್ತಿ ಜಿದ್ದಾಜಿದ್ದಿನಿಂದ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಗದೆ ಭೂತಬಂಗಲೆಯಂತಾಗಿದೆ ಎಂದು ವರದಿಯಾಗಿದೆ. ಜಯನಗರ ಸುತ್ತಮುತ್ತಲಿನ ಜನರಿಗೆ ಕಾರ್ಯಕ್ರಮಗಳು, ಸಮಾರಂಭ ನಡೆಸೋಕೆ […]

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸುದ್ದಿ; ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

ಬೆಂಗಳೂರಿನ ಸೆಂಟ್ರಲ್ ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳಿಗೆ ಪಂಚತಾರ ಹೋಟೆಲ್‌ನ ವ್ಯವಸ್ಥೆ ಇದೆ. ದುಡ್ಡು ಕೊಟ್ಟರೆ ಏನು ಬೇಕಾದರೂ ಕೊಂಡುಕೊಳ್ಳಬಹುದು ಎಂಬುದು ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಸೋಮವಾರ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜೈಲಿನಲ್ಲಿನ ಅವ್ಯವಸ್ಥೆ ಹೊಸದಾಗಿ ಆಗಿಲ್ಲ, ಹಿಂದಿನಿಂದಲೂ ನಡೆಯುತ್ತಾ ಇದೆ. ಹಿಂದೆ ಡಿಜಿ ಮತ್ತು ಡಿಸಿಪಿ ನಡುವೆ ದೊಡ್ಡ ಗಲಾಟೆ ಆಗಿತ್ತು. ತನಿಖೆ ನಡೆಯಬೇಕು ಎಂದು ಗಲಾಟೆ ಆಗಿತ್ತು. ಪರಪ್ಪನ ಅಗ್ರಹಾರದಲ್ಲಿರುವ […]

ದರ್ಶನ್ & ಗ್ಯಾಂಗ್ ನ್ನು ಬೇರೆ ಜೈಲಿಗೆ ಶಿಪ್ಟ್ ಮಾಡುವಂತೆ ಸಿಎಂ ಸೂಚನೆ

ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ವಿಚಾರವಾಗಿ, ಇಂದು ಟಿಜಿ & ಐಜಿಪಿ ಅಲೋಕ್ ಮೋಹನ್ ಅವರು ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈಲಿನ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಿ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇದೆ ವೇಳೆ ದರ್ಶನ್ ಮತ್ತು ಇತರರನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಕ್ಕೆ […]

ಯುವಕನಿಗೆ ಮಾರಣಾಂತಿಕವಾಗಿ ಥಳಿಸಿದ ಗುಂಪು

ಗುಂಪೊಂದು ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನ ಗೆರಟಿಗನಬೆಲೆ ಗ್ರಾಮ ಇಟ್ಟಿಗೆ ಫ್ಯಾಕ್ಟರಿಯಲ್ಲಿ ನಡೆದಿದೆ. ತಾಲ್ಲೂಕಿನ ಗೆರಟಿಗನಬೆಲೆ ಗ್ರಾಮದಲ್ಲಿ ಹತ್ತಾರು ಮಂದಿ ಸೇರಿ ಓರ್ವ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಯುವಕನನ್ನ ಮಹಿಳೆ ಬಿಡಿಸಲು ಮುಂದಾದರೂ ಗುಂಪೊಂದು ಬಿಡದೆ ಹಲ್ಲೆ ನಡೆಸಿದೆ. ಹಣಕಾಸಿನ ವಿಚಾರಕ್ಕೆ ನಡೆದಿರುವ ಗಲಾಟೆ ಇದಾಗಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ಅವರದ್ದು ಎನ್ನಲಾದ ಆಡಿಯೋ ವೈರಲ್

ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಅಭ್ಯರ್ಥಿಯಾಗಿ ಅರುಣ್ ಪುತ್ತಿಲ ಭಾರಿ ಸದ್ದು ಮಾಡಿದ್ದರು. ಆದರೆ, ಈಗ ಬಿಜೆಪಿ ನಾಯಕಿಯೊಬ್ಬರ ಬಳಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ. ನೀವು ಬಿಜೆಪಿಗೆ ಸೇರಿದ್ದು ನಾಚಿಕೆ ಆಗಲಿಲ್ವ ಎಂದು ಮಹಿಳೆ ಕೇಳಿದ್ದಾಳೆ. ಆದರೆ, ಇದಕ್ಕೆ ಉತ್ತರಿಸಿದ ಅರುಣ್ ಪುತ್ತಿಲ ಅವರದ್ದೆನ್ನಲಾದ ಧ್ವನಿ […]

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಆತ್ಮಹತ್ಯೆ; ಪತಿಯ ಮನೆಯ ಬಾಗಿಲಲ್ಲೇ ಅಂತ್ಯಸಂಸ್ಕಾರ ಮಾಡಲು ಮುಂದಾದ ಕುಟುಂಬ

ವರದಕ್ಷಿಣೆ ಕಿರುಕುಳದಿಂದಾಗಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಮನೆಯ ಮುಂದೆ ಶವವನ್ನು ಅಂತ್ಯಸಂಸ್ಕಾರ ಮಾಡಲು ಮಹಿಳೆಯ ಪೋಷಕರು ಯತ್ನಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಕೋಲಾರದಲ್ಲಿ ನವವಿವಾಹಿತೆ ಮಾನಸ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೋಲಾರ ತಾಲೂಕಿನ ತೂರಾಂಡಹಳ್ಳಿ ಗ್ರಾಮದಲ್ಲಿರುವ ಪತಿ ಉಲ್ಲಾಸ್ ಗೌಡ ಮನೆಯ ಎದುರು ಪತ್ನಿ ಮಾನಸ ಗೌಡ ಅವರ ಶವವನ್ನಿಟ್ಟು ಪ್ರತಿಭಟನೆ ಮಾಡಿದ್ದಾರೆ. 24 ವರ್ಷದ ಮಾನಸ ಗೌಡ ಹಾಗೂ ತೂರಾಂಡಹಳ್ಳಿ ಗ್ರಾಮದ ಉಲ್ಲಾಸ್ ಗೌಡ ನಡುವೆ ಕಳೆದ ವರ್ಷ […]

ನದಿಯಲ್ಲಿ ಈಜಲು ತೆರಳಿದ ಯುವಕ ನೀರುಪಾಲು

ನದಿಗೆ ಈಜಲು ಹೋಗಿದ್ದ ಯುವಕನೋರ್ವ ನೀರು ಪಾಲಾಗಿರುವ ಘಟನೆ ವಿಜಯಪುರದ ಶ್ರೀ ಛಾಯಾ ಭಗವತಿಯ ತೀರದಲ್ಲಿ ನಡೆದಿದೆ. ಮಹ್ಮದ್ ಆದಿಲ್(27)ನೀರು ಪಾಲಾದ ಯುವಕನಾಗಿದ್ದು, ವಿಜಯಪುರ ಜಿಲ್ಲೆಯ ತಾಳಿಕೋಟಿಯಿಂದ ಸ್ನೇಹಿತರೊಂದಿಗೆ ಶುಕ್ರವಾರ ಛಾಯಾ ಭಗವತಿ ವೀಕ್ಷಣೆಗೆ ತೆರೀದ್ದ. ಈಜಲು ನದಿಗೆ ಇಳಿದಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ವಿಷಯ ತಿಳಿದು ಸ್ಥಳಕ್ಕೆ ಸ್ಥಳೀಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದಿಲ್ ದೆಹಲಿ ಮೂಲದವರಾಗಿದ್ದು, ತಾಳಿಕೋಟಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಟಿಂಗ್ […]

ಮಾಜಿ ಸಿಎಂ ಓರ್ವರ ಸಿಡಿ ರಿಲೀಸ್ ಮಾಡುವುದಾಗಿ ಹೇಳಿದ ಮಾಜಿ ಶಾಸಕ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ‌ ಮೂಡಿಸಿದ ಹೇಳಿಕೆ

ರಾಜ್ಯದ ಮಾಜಿ ಸಿಎಂ ಓರ್ವರಿಗೆ ಸಂಬಂಧಿಸಿದ ಅಶ್ಲೀಲ ಸಿಡಿ ಶೀಘ್ರವೇ ರಿಲೀಸ್ ಆಗಲಿದೆ ಎಂದು ಕಾಂಗ್ರೆಸ್​​​ನ ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿಕೆಯನ್ನು ನೀಡಿದ್ದು, ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯದ ಅದರಲ್ಲೂ ಬಿಜೆಪಿಯ ಮಾಜಿ ಸಿಎಂ ಓರ್ವರ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಇದೀಗ ಭಾರೀ ಕುತೂಹಲ ಮೂಡಿಸಿದ್ದಾರೆ. ಅಲ್ಲದೇ ಆ CDಯು ಭಾರತೀಯ ಜನತಾ ಪಕ್ಷದ ನಾಯಕನದ್ದೇ ಎಂದು ಅವರು ಒತ್ತಿ-ಒತ್ತಿ ಹೇಳಿದ್ದಾರೆ. ಅದು ಯಾರಿಗೆ ಸಂಬಂಧಿಸಿದ […]

ಅನಾಥ ಯುವತಿಗೆ ಮುಂದೆ ನಿಂತು ವಿವಾಹ ಮಾಡಿಸಿಕೊಟ್ಟ ಉಡುಪಿ ಡಿಸಿ

ಅನಾಥೆಯಾಗಿದ್ದ ವಧುವನ್ನು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮುಂದೆ ನಿಂತು ಶಾಸ್ತ್ರೋಕ್ತವಾಗಿ ಕನ್ಯಾದಾನ ಮಾಡಿದ್ದಾರೆ. 15 ವರ್ಷಗಳಿಂದ ಅನಾಥೆಯಾಗಿ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದುಕೊಂಡಿದ್ದ ಖುಷ್ಬು ಸುಮೇರಾ (21) ಅವರನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅಂಬುತೀರ್ಥದ ದಿನೇಶ್ ಎ.ಪಿ.ಅವರ ಪುತ್ರ ಕೃಷಿಕ ಹಾಗೂ ಕೇಟರಿಂಗ್ ಉದ್ಯಮ ನಡೆಸುವ ಮಧುರಾಜ್ ಎ.ಡಿ.(29) ಅವರು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಉಡುಪಿ ಸಮೀಪದ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ಶುಭಮುಹೂರ್ತದಲ್ಲಿ ಮುಂದೆ […]