Breaking News :

ಮೆಗ್ಗಾರ್ ಯಂತ್ರದಿಂದ ಶಾಕ್ ಕೊಟ್ಟು ರೇಣುಕಾಸ್ವಾಮಿ ಕೊಲೆ; FSL ವರದಿಯಲ್ಲಿ ಸ್ಪೋಟಕ ಮಾಹಿತಿ ಬಯಲು

ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ & ಗ್ಯಾಂಗ್ ಈಗಾಗಲೇ ಜೈಲಿನಲ್ಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಪೋಟಕ‌ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಮೆಗ್ಗಾರ್ ಯಂತ್ರದಿಂದ ಶಾಕ್ ಕೊಟ್ಟು ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು‌ ಬಂದಿದೆ. ಈ ಕುರಿತು FSL ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ರೇಣುಕಾಸ್ವಾಮಿಗೆ ಮೆಗ್ಗಾರ್ ಯಂತ್ರದ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ನಂತರ ಮೆಗ್ಗಾರ್ ಯಂತ್ರದ ಶಾಕ್ ಕೊಟ್ಟು […]

ಸರಕಾರಿ ಬಸ್ ಹರಿದು ಬಾಲಕ ಮೃತ್ಯು

ಸರ್ಕಾರಿ ಬಸ್ ಹರಿದು ಬಾಲಕ ಮೃತಪಟ್ಟಿರುವ ದಾರುಣ ಘಟನೆ ಬೀದರ್‌ ಜಿಲ್ಲೆಯ ಹುಲಸೂರು ತಾಲೂಕಿನ ಮಿರಖಲ್ ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದ ನಿಲಂಗಾ ಗ್ರಾಮದ ನಿವಾಸಿ ಗಣೇಶ್ ಪೇಟಕಾರ್ (6) ಸಾವನಪ್ಪಿದ ದುರ್ದೈವಿ ಅಜ್ಜಿಯ ಮನೆಗೆಂದು ಮಿರಖಲ್ ಗ್ರಾಮಕ್ಕೆ ಬಂದಿದ್ದ ಬಾಲಕ ಬಸವಕಲ್ಯಾಣದಿಂದ ಮಿರಖಲ್ ಮಾರ್ಗವಾಗಿ ನಿಲಂಗಾಕ್ಕೆ ತೆರಳುವಾಗ ಸಾರಿಗೆ ಬಸ್ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಬಾಲಕ ಮೃತಪಟ್ಟಿದ್ದಾನೆ. ಬಾಲಕನನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ […]

ಮಂಗಳೂರು; ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ನಡುವೆ ಜಗಳ; ದೂರು, ಪ್ರತಿದೂರು

ಮಂಗಳೂರು:ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಮಧ್ಯೆ ಗುರುವಾರ ಹೊಡೆದಾಟ ನಡೆದಿದ್ದು, ಈ ಕುರಿತುಬಂದರು ಠಾಣೆಗೆ ದೂರು ನೀಡಲಾಗಿದೆ. ದ.ಕ.ಜಿಲ್ಲಾ ಬೀದಿ ವ್ಯಾಪಾರಿಗಳ ಶ್ರೇಯಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತಿತರರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ ಮತ್ತು ಉಪಾಧ್ಯಕ್ಷ ರಹ್ಮಾನ್ ಅಡ್ಯಾರ್ ಎಂಬವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಧ್ಯೆ ಸಂಘದ ಕೋಶಾಧಿಕಾರಿ ಆಸೀಫ್ ಬಾವ ಉರುಮಣೆ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ನವಾಝ್ ಕಣ್ಣೂರು, ಆನಂದ ಮತ್ತಿತರರ ವಿರುದ್ಧ […]

ಸಂಸದರಾದರೂ ಕಾಯಕ ಬಿಡದ ಡಾ.ಮಂಜುನಾಥ್; ಕಿಡ್ನಿ ವೈಫಲ್ಯ ಹೊಂದಿದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಮೂತ್ರಪಿಂಡ ವೈಫಲ್ಯ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ಕಾಂಪ್ಲೆಕ್ಸ್​ ಆಂಜಿಯೋಪ್ಲಾಸ್ಟಿ ಹಾಗೂ ಸ್ಟಂಟ್ ಅಳವಡಿಸುವ ಮೂಲಕ ಸಂಸದ ಹಾಗೂ ಡಾ.ಸಿಎನ್ ಮಂಜುನಾಥ್ ವ್ಯಾಪಕ ಪ್ರಶಂಸೆಗೆ ಕಾರಣರಾಗಿದ್ದಾರೆ. ತಮ್ಮ ವೈದ್ಯಕೀಯ ವೃತ್ತಿಯಿಂದ ನಿವೃತ್ತರಾಗಿ ರಾಜಕೀಯ ಪ್ರವೇಶ ಮಾಡಿರುವ ಮಂಜುನಾಥ್ ಮೂತ್ರಪಿಂಡ ವೈಫಲ್ಯವಾಗಿದ್ದ ವ್ಯಕ್ತಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 54 ವರ್ಷ ವಯಸ್ಸಿನ ಮೂತ್ರಪಿಂಡ ವೈಫಲ್ಯವಾಗಿದ್ದ ಹಾಗೂ ಶೇ.90ರಷ್ಟು ಬ್ಲಾಕೇಜ್​ ಆಗಿದ್ದ ರೋಗಿಗೆ ಕಾಂಪ್ಲೆಕ್ಸ್​ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟ್ ಅಳವಡಿಸುವ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಕುರಿತು ಕುದ್ಸು ಸಂಸದ ಮಂಜುನಾಥ್ […]

ಅಂತಿಮ ದರ್ಶನಕ್ಕೆ ಬಂದು ಜಗಳ; ಓರ್ವನ ಕೊಲೆಯಲ್ಲಿ ಅಂತ್ಯ

ಬೆಂಗಳೂರು:ಸಾವಿನ ಮನೆಗೆ ಬಂದು ವ್ಯಕ್ತಿಯೋರ್ವ ಸ್ನೇಹಿತನಿಂದಲೇ ಕೊಲೆಯಾದ ಹೃದಯ ವಿದ್ರಾಹಕ ಘಟನೆ ಬೆಂಗಳೂರಿನ ಕಾಟನ್ ​ಪೇಟೆಯ ಅಂಜನಪ್ಪ ಗಾರ್ಡನ್​ನಲ್ಲಿ ನಡೆದಿದೆ. ಸ್ನೇಹಿತ ಶರತ್​ಗೆ ಚಾಕು ಇರಿದು ಆಟೋ ಚಾಲಕ ಶರತ್ ಎಂಬಾತ ಕೊಲೆ ಮಾಡಿದ್ದಾನೆ. ಅಂಜನಪ್ಪ ಗಾರ್ಡನ್​​ನಲ್ಲಿ ಒಂದು ಸಾವಾಗಿರುತ್ತದೆ. ಹೀಗಾಗಿ ಅವರ ಅಂತಿಮ‌ ದರ್ಶನ ಪಡೆಯಲು ಈ ಇಬ್ಬರು ಆಗಮಿಸಿದ್ದರು. ಅಲ್ಲಿ ಶರತ್ ಓರ್ವ ಮಹಿಳೆಗೆ ಬೈದಿದ್ದನೆನ್ನಲಾಗಿದೆ.ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ವಾಪಸ್​ ಮನೆಗೆ ತೆರಳುವ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, […]

ಅಜ್ಮೀರ್ ಯಾತ್ರೆಗೆಂದು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆ

ಅಜ್ಮೀರ್ ಯಾತ್ರೆಗೆ ಹೋಗಿ ಬರುತ್ತೇವೆ ಎಂದು ಹೇಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾದ ಘಟನೆ ಬಳ್ಳಾರಿಯ ಜಯನಗರದಲ್ಲಿ ನಡೆದಿದೆ. ಕೌಲ್‍ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ ಶ್ರೀನಿವಾಸ್ ಅಪಾರ್ಟಮೆಂಟ್‍ನಲ್ಲಿದ್ದ ಎಂ.ಎಸ್.ನಜೀರ್ ಅಹಮದ್(50), ಪತ್ನಿ ಮುನಿಯಾರ್ ರೊಖಾಯಾ(47) ಮಕ್ಕಳಾದ ಎಂ.ಎಸ್.ಸಾನಿಯ ಕೌಸರ್(21), ಶಗುಪ್ತ ಅಂಜುಮ್(15)ನಾಪತ್ತೆಯಾಗಿದ್ದಾರೆ. ಈ ಕುಟುಂಬವು ಜುಲೈ 7 ರಂದು ಅಜ್ಮೀರ್‍ಗೆ ಹೋಗುವುದಾಗಿ ಹೇಳಿ, ಈವರೆಗೂ ಹಿಂದಿರುಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಹಿಳೆಯ ಅಪಹರಣ ಪ್ರಕರಣ; ಹೆಚ್ ಡಿ ರೇವಣ್ಣ, ಭವಾನಿ‌ ಸೇರಿ 9 ಆರೋಪಿಗಳಿಗೆ ಸಮನ್ಸ್

ಮೈಸೂರು ಜಿಲ್ಲೆಯ ಕೆಆರ್​ ನಗರದಲ್ಲಿ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್​ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿ 9 ಆರೋಪಿಗಳಿಗೆ ಸಮನ್ಸ್​ ಜಾರಿ ಮಾಡಲಾಗಿದೆ. ಆರೋಪಿಗಳಿಗೆ ಆಗಸ್ಟ್‌ 28ರಂದು ಖುದ್ದು ಹಾಜರಾಗುವಂತೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​ನಿಂದ ಸಮನ್ಸ್​ ಜಾರಿ ಮಾಡಲಾಗಿದೆ. ಸತೀಶ್ ಬಾಬು,ಮನುಗೌಡ,ಕೆ.ಎ.ರಾಜಗೋಪಾಲ್, ಹೆಚ್.ಕೆ.ಸುಜಯ್, ಹೆಚ್.ಎನ್.ಮಧು,ಎಸ್.ಟಿ.ಕೀರ್ತಿ ಮತ್ತು ಅಜಿತ್ ಕುಮಾರ್​​ಗೆ ಐಪಿಸಿ ಸೆಕ್ಷನ್​ 364 A ಕೈಬಿಟ್ಟು ಉಳಿದ ಆರೋಪಗಳಿಗೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದೆ. ಆರೋಪಿ ಭವಾನಿ ರೇವಣ್ಣಗೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು […]

ಯಡಿಯೂರಪ್ಪಗೆ ಬಿಗ್ ಶಾಕ್ ; ಪೋಕ್ಸೋ ಕೇಸ್ ನಲ್ಲಿ ಬಂಧನಕ್ಕೆ ತಡೆ ಆದೇಶ ತೆರವು ಕೋರಿ ಕೋರ್ಟ್ ಮೊರೆ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸದಂತೆ ತಡೆ ನೀಡಿರುವ ಆದೇಶಕ್ಕೆ ತೆರವು ಕೋರಿ ಸಿಐಡಿ ಎಸ್ ಪಿಪಿ ಅಶೋಕ್ ನಾಯ್ಕ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ವಿರುದ್ಧದ ಪೋಕ್ಸೋ ಪ್ರಕರಣ ಸಂಬಂಧ ಯಡಿಯೂರಪ್ಪರನ್ನು ಬಂಧಿಸಿದಂತೆ ನೀಡಿದ್ದ ಆದೇಶವನ್ನು ತೆರವು ಕೋರಿ ಸಿಐಡಿ ಎಸ್ ಪಿಪಿ ಅಶೋಕ್ ನಾಯ್ಕ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪೋಕ್ಸೋ ಪ್ರಕರಣವನ್ನು ರದ್ದು ಕೋರಿ ಬಿ.ಎಸ್. ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮಧ್ಯಂತರ ರಕ್ಷಣೆಗೆ ನೀಡಿತ್ತು. […]

ಭದ್ರಾವತಿ; ಶಾಸಕ ಸಂಗಮೇಶ್ ಪುತ್ರನ ಹತ್ಯೆಗೆ ಸಂಚು; ಪ್ರಕರಣ ದಾಖಲು

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಸವಣ್ಣ ಅವರ ಹತ್ಯೆಗೆ ಹಂತಕರು ಜೈಲಿನಿಂದಲೇ ಸಂಚು ರೂಪಿಸಿರುವುದು ಬಯಲಾಗಿದೆ. ಬಸವಣ್ಣ ಹತ್ಯೆಗೆ ಹಂತಕರು ಜೈಲಿನಿಂದಲೇ ಸಂಚು ರೂಪಿಸಿದ್ದರು ಎಂಬ ಬಗ್ಗೆ ಪೊಲೀಸರ ಎಫ್‌ಐಆರ್ ನಲ್ಲಿ ದಾಖಲಾಗಿದೆ. ಶಾಸಕರ ಆಪ್ತರೊಬ್ಬರು ನೀಡಿರುವ ದೂರಿನ ಮೇರೆಗೆ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಟ್ ಪಟ್ ನಗರದ ನಿವಾಸಿ ಮುಬಾರಕ್ ಮುಬ್ಬು ಎಂಬಾತ ಕಳೆದ 17ನೇ ತಾರಿಕಿನಂದು ವ್ಯಕ್ತಿಯೋರ್ವನ ಬಳಿ ಬಂದು ಬಸವಣ್ಣ ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಬಳಿಕ […]

ಸಿಎಂ ಬದಲಾವಣೆ ವಿಚಾರ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಮೂಡಾ ಹಗರಣಕ್ಕೆ ಸಂಬಂಧಿಸಿ ಸಿಎಂ‌ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ವಿಪಕ್ಷಗಳು ಆಗ್ರಹಿಸುತ್ತಿದೆ.ಈ ಮಧ್ಯೆ ಕಾಂಗ್ರೆಸ್ ಪಕ್ಷವು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದೆ. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ ಪರಮೇಶ್ವರ್, ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ.ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್ ನಿಲ್ಲಲಿದೆ. ಈಗಾಗಲೇ ಹೈಕಮಾಂಡ್ ನಾಯಕರು ಬೆಂಬಲ ನಿಲ್ಲುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ರಾಜ್ಯದಲ್ಲಿನ ಬೆಳವಣಿಗೆ ಕುರಿತು ಹೈಕಮಾಂಡ್ ಮಾಹಿತಿ ನೀಡಲಿದ್ದಾರೆ. ಅದನ್ನು ಹೊರತುಪಡಿಸಿದರೆ ಬೇರೆ […]