ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ ಮೇಲೆ ಮಣ್ಣು ಸುರಿದ ಜೆಸಿಬಿ ಚಾಲಕ; ಮಹಿಳೆ ಉಸಿರುಗಟ್ಟಿ ಸಾವು

ಬಯಲು ಶೌಚಕ್ಕೆ ಹೋದ ಮಹಿಳೆ ಮೇಲೆ ಜೆಸಿಬಿ ಚಾಲಕ ತಿಳಿಯದೆ ಮಣ್ಣಿನ ರಾಶಿ ಹಾಕಿದ್ದು, ಉಸಿರಾಡಲು ಆಗದೆ ಮಹಿಳೆ ಮೃತಪಟ್ಟ ಘಟನೆ ರಾಯಚೂರು ನಗರದ ಆಶಾಪುರ ರಸ್ತೆಯ ಜನತಾ ಕಾಲೋನಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ತಾಯಮ್ಮ (32) ಎಂದು ಗುರುತಿಸಲಾಗಿದೆ. ನಿವೇಶನ ಸ್ವಚ್ಚ ಮಾಡುತ್ತಿದ್ದ ಜೆಸಿಬಿ ಚಾಲಕ ಆಕಸ್ಮಾತ್ ಆಗಿ ಮಣ್ಣು ಹಾಕಿದ್ದಾನೆ. ಆ ಸ್ಥಳದಲ್ಲಿದ್ದ ಮಹಿಳೆ ತಾಯಮ್ಮ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಚಾಲಕನನ್ನು ವಶಕ್ಕೆ […]
ಬಂಟ್ವಾಳ; ಡ್ರಾಪ್ ಕೊಡುವ ನೆಪದಲ್ಲಿ ನಗ, ನಗದು ದೋಚಿ ಪರಾರಿಯಾದ ಗ್ಯಾಂಗ್

ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಕುಳ್ಳಿರಿಸಿ ತಂಡವೊಂದು ನಗದು ದೋಚಿ ಕಾರಿನಿಂದ ತಳ್ಳಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಕೊಡಗಿನ ವಿರಾಜಪೇಟೆ ನಿವಾಸಿಯಾಗಿರುವ ಎಂ. ಗಂಗಾಧರ ಅವರು ನಗ ನಗದು ಕಳೆದು ಕೊಂಡ ವ್ಯಕ್ತಿಯಾಗಿದ್ದು, ಇವರು ಕಳೆದ ಶುಕ್ರವಾರ ವಿರಾಜಪೇಟೆಯಿಂದ ಬಿಸಿ ರೋಡ್ ಗೆ ರಾತ್ರಿ ಸುಮಾರು ಒಂಬತ್ತು ಗಂಟೆಯ ವೇಳೆಗೆ ಬಂದಿದ್ದರು. ಬಂಟ್ವಾಳದ ನರಿಕೊಂಬಿನಲ್ಲಿರುವ ಅಣ್ಣನ ಮನೆಗೆ ತೆರಳಲು ಬಿ.ಸಿ.ರೋಡ್ ನಲ್ಲಿ ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಅಪರಿಚಿತ ಕಾರೊಂದು […]
ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಿಯಕರ ಆತ್ಮಹತ್ಯೆ; ಸುದ್ದಿ ತಿಳಿದು ಚಾಕುವಿನಿಂದ ಇರಿದುಕೊಂಡ ಪ್ರಿಯತಮೆ, ಸ್ಥಿತಿ ಗಂಭೀರ

ಪ್ರೀತಿಸಿದ ಯುವತಿಯನ್ನು ಮದುವೆಗೆ ಕುಟುಂಬದವರು ಒಪ್ಪಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಷಯ ತಿಳಿದು ಪ್ರಿಯತಮೆ ಕೂಡಾ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕಾಯಿಸೊಪ್ಪಿನ ಬೀದಿಯಲ್ಲಿ ನಡೆದಿದೆ. 24 ವರ್ಷದ ಯಶ್ವಂತ್ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾರೆ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಇವರ ಮದುವೆಗೆ ಯಶ್ವಂತ್ ಮನೆಯವರು ಒಪ್ಪಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತನ ಪ್ರಿಯತಮೆ ಕೂಡಾ ಚುಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ […]
ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೌಮ್ಯಾ ರೆಡ್ಡಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕಿ!

ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಯವರನ್ನು ನೇಮಕ ಮಾಡಿರುವುದಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕವಿತಾ ರೆಡ್ಡಿ, ಪಕ್ಷಕ್ಕಾಗಿ ದುಡಿಯುತ್ತಿರುವ, ಅಧ್ಯಕ್ಷರಾಗಲು ಅರ್ಹತೆಯಿರುವ ಮತ್ತು ಕಳೆದ 2 ವರ್ಷಗಳಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನೇಕ ಮಹಿಳಾ ನಾಯಕರಿಗೆ ಇದರಿಂದ ತೀವ್ರ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ. ಅಂಬೇಡ್ಕರ್ ವಾದಿಯಾಗಿ ನಾನು ಕಂಡಂತೆ ಸ್ವತಂತ್ರ ಮಹಿಳಾ ನಾಯಕರನ್ನು ಪಕ್ಷದಲ್ಲಿ ತಮ್ಮ ಸ್ವಂತ […]
ವಿವಾದಿತ ಈದ್ಗಾ ಮೈದಾನದಲ್ಲಿ ಯಾವುದೇ ಸಂಘಟನೆಗಳಿಗೆ ಧ್ವಜಾರೋಹಣಕ್ಕೆ ಅವಕಾಶವಿಲ್ಲ; ಜಿಲ್ಲಾಡಳಿತ ಸ್ಪಷ್ಟನೆ

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ದ್ವಜಾರೋಹಣಕ್ಕೆ ಸಿದ್ದತೆ ನಡೆಯುತ್ತಿದೆ, ಆದರೆ ಯಾವುದೇ ಸಂಘಟನೆಗಳಿಗೆ ಧ್ವಜಾರೋಹಣಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ನಾಳೆ ಬೆಳಗ್ಗೆ 8 ಘಂಟೆಗೆ ನಡೆಯುವ ಧ್ವಜಾರೋಹಣಕ್ಕೆ ಜಿಲ್ಲಾಡಳಿತ ವತಿಯಿಂದ ಬೆಂ.ಉತ್ತರ ವಲಯ ಉಪವಿಭಾಗಾಧಿಕಾರಿ ಪ್ರಮೋದ್ ಪಾಟೀಲ್ ಧ್ವಜಾರೋಹಣ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಕೆ.ಎ ಯಾವುದೇ ಸಂಘಟನೆಗಳಿಗೆ ಧ್ವಜಾರೋಹಣಕ್ಕೆ ಅವಕಾಶವಿಲ್ಲ. ಕೇವಲ ಸರ್ಕಾರ ನಿಗಧಿ ಪಡಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಧ್ವಜಾರೋಹಣಕ್ಕೆ ಸಂಘಟನೆಯವರು […]
ಮಂಗಳೂರು; ಆಟೋ ಚಲಾಯಿಸುತ್ತಿದ್ದಾಗ ಹೃದಯಾಘಾತವಾಗಿ ರಿಕ್ಷದಿಂದ ಬಿದ್ದು ಮೃತಪಟ್ಟ ಚಾಲಕ

ಮಂಗಳೂರು; ರಿಕ್ಷಾ ಚಲಾಯಿಸುತ್ತಿದ್ದಾಗ ಚಾಲಕ ಹೃದಯಾಘಾತದಿಂದ ರಸ್ತೆಗೆ ಬಿದ್ದಿದ್ದು, ಚಾಲಕ ಮೃತಪಟ್ಟು ಮಹಿಳೆಯೋರ್ವರು ಪವಾಡ ಸದೃಶ್ಯವಾಗಿ ಬದುಕುಳಿದ ಘಟನೆ ಕೋಟೆಕಾರಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಉಳ್ಳಾಲ ಧರ್ಮನಗರದ ನಿವಾಸಿ ಅಬ್ದುಲ್ ಮಜೀದ್ (44)ಹೃದಯಾಘಾತದಿಂದ ಮೃತಪಟ್ಟ ರಿಕ್ಷಾ ಚಾಲಕ. ಮಜೀದ್ ಮಂಗಳವಾರ ಮಧ್ಯಾಹ್ನ 12 ಗಂಟೆಯ ವೇಳೆ ಧರ್ಮನಗರದಿಂದ ಸಂಬಂಧಿಕರಾದ ಮಹಿಳೆಯರಿಬ್ಬರನ್ನು ತನ್ನ ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಸೋಮೇಶ್ವರ ಮಾರ್ಗವಾಗಿ ಕೋಟೆಕಾರು ಬೀರಿಗೆ ತೆರಳುತ್ತಿದ್ದ ವೇಳೆ ಕೋಟೆಕಾರು ಹೆದ್ದಾರಿ ಬಳಿ ಹೃದಯಾಘಾತವಾಗಿ ರಸ್ತೆಗೆ ಬಿದ್ದಿದ್ದಾರೆ. ಚಾಲಕನಿಲ್ಲದೆ ಮುಂದೆ ಚಲಿಸಿದ […]
ದೇವಸ್ಥಾನಕ್ಕೆಂದು ಕರೆದೊಯ್ದು ಪತ್ನಿಯನ್ನು ಕೊಲೆಗೈದ ಪತಿ

ಡಿವೋರ್ಸ್ ಕೇಳಿದ ಹೆಂಡತಿಯನ್ನು ದೇವಸ್ಥಾನಕ್ಕೆಂದು ಕರೆದೊಯ್ದು ಹತ್ಯೆ ಮಾಡಿರುವ ದುರಂತ ಘಟನೆ ರಾಮನಗರದ ಹೂಜಗಲ್ಲು ಬೆಟ್ಟದಲ್ಲಿ ನಿನ್ನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ದಿವ್ಯಾ (32) ಎಂದು ಗುರುತಿಸಲಾಗಿದೆ. ಕೊಲೆಯನ್ನು ಆಕೆಯ ಪತಿ ಉಮೇಶ್ ಮಾಡಿದ್ದಾನೆ. ಮದುವೆಯಾಗಿ ಕೆಲವು ವರ್ಷಗಳು ಜೀವನ ನಡೆಸಿದ ಇಬ್ಬರ ನಡುವೆ ಇತ್ತೀಚೆಗೆ ಮನಸ್ತಾಪ ಉಂಟಾಗಿದೆ. ಇದರಿಂದ ನನಗೆ ಡಿವೋರ್ಸ್ ಕೊಟ್ಟುಬಿಡಿ ನಾನು ಬೇರೆ ಜೀವನ ಕಟ್ಟಿಕೊಳ್ಳುತ್ತೇನೆ ಎಂದು ದಿವ್ಯಾ ಕೇಳಿದ್ದಾಳೆ. ಆಗ ಉಮೇಶ್ ತನ್ನ ಹೆಂಡತಿಯನ್ನು ಸಮಾಧಾನಪಡಿಸಿ ಬುದ್ಧಿಯನ್ನೂ ಹೇಳಿದ್ದಾನೆ. ಆದರೆ ಇದ್ಯಾವುದನ್ನೂ […]
ಕಲ್ಲಾಪು: ಸಮೀರ್ ಕೊಲೆ ಪ್ರಕರಣ; ನಾಲ್ವರು ಆರೋಪಿಗಳು ವಶಕ್ಕೆ

ಉಳ್ಳಾಲದಲ್ಲಿ ಕಡಪ್ಪರ ಸಮೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಮೊಹಮ್ಮದ್ ನೌಷದ್ ಈ ಕೊಲೆಯ ಪ್ರಮುಖ ರೂವಾರಿಯಾಗಿದ್ದು, ಆತನ ತಂಡ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಈ ಕೊಲೆಯಲ್ಲಿ ನೌಷದ್‌ನೊಂದಿಗೆ ನಾಟೇಕಲ್‌ನ ನಿಯಾಝ್, ಬಜಾಲ್‌ನ ತನ್ವೀರ್, ಪಡುಬಿದ್ರೆಯ ಇಕ್ಬಾಲ್ ಸಹಕರಿಸಿರುವ ಬಗ್ಗೆ ಮಾಹಿತಿಯಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕವಾಗಿ ಇಲ್ಯಾಸ್ ಕೊಲೆಗೆ ಪ್ರತಿಕಾರವಾಗಿ ಕೊಲೆ ನಡೆದಿರುವುದು ದೃಡಪಟ್ಟಿದೆ. ಈ ಕುರಿತು ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. […]
ಚಿಕ್ಕಮಗಳೂರು; ಬುರ್ಖಾ ಧರಿಸಿ ತಿರುಗಾಡುತ್ತಿದ್ದ ಯುವಕನ ಬಂಧನ

ಚಿಕ್ಕಮಗಳೂರು; ಬುರ್ಖಾ ಧರಿಸಿ ಬಿಕ್ಷೆ ಬೇಡಲು ನಗರಕ್ಕೆ ಬಂದ ಯುವಕನಿಗೆ ಸ್ಥಳೀಯರು ಸಖತ್ ಗೂಸಾ ಕೊಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಬೆರಳಿಗೆ ನೈಲ್ ಪಾಲಿಶ್ ಹಚ್ಚಿಕೊಂಡು ಶೃಂಗಾರ ಮಾಡಿಕೊಂಡು ಚಾಕು ಇಟ್ಟುಕೊಂಡು ತೆರಳುತ್ತಿದ್ದ ಹರೀಶ್ ಎಂಬಾತ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬುರ್ಖಾ ತೊಟ್ಟು ನಗರದ ಮಲ್ಲಂದೂರು ರಸ್ತೆಯಲ್ಲಿ ಹರೀಶ್ ಓಡಾಟ ನಡೆಸುವಾಗ ಅನುಮಾನಗೊಂಡು ಜನರು ಹಿಡಿದಿದ್ದಾರೆ. ಬಾಳೆಹೊನ್ನೂರು ಮೂಲದ ಹರೀಶ್ ಎಂಬಾತನನ್ನು ಸ್ಥಳೀಯರು ಥಳಿಸಿದ್ದಾರೆ. ಭಿಕ್ಷೆ ಬೇಡಲು ಬುರ್ಖಾ ಧರಿಸಿ ಬಂದಿದ್ದಾಗಿ ಯುವಕ ಹೇಳಿಕೆ ನೀಡಿದ್ದಾನೆ. ಆದರೆ […]
ಮೂಡಬಿದ್ರೆ; ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಲ್ಲಿ ಇರಿತ ಪ್ರಕರಣ; ಆರೋಪಿ ಅರೆಸ್ಟ್, ತನಿಖೆಯ ವೇಳೆ ಮಹತ್ವದ ಅಂಶಗಳು ಬಯಲು

ಪ್ರೇಮ ಪೈಫಲ್ಯದಿಂದ ವಿದ್ಯಾರ್ಥಿನಿಗೆ ಕತ್ತರಿಯಿಂದ ಯುವಕ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ನಡೆದಿದೆ. ನಿನ್ನೆ ಮುಂಜಾನೆ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ತುಮಕೂರು ಮೂಲದ ಮಂಜುನಾಥ್‌ನನ್ನು ಮೂಡಬಿದಿರೆ ಪೋಲೀಸರು ಬಂಧಿಸಿದ್ದಾರೆ. ಆಳ್ವಾಸ್‌ನಲ್ಲಿ ಪಿಯುಸಿ ಓದುತ್ತಿರುವ ತುಮಕೂರು ಮೂಲದ ವಿದ್ಯಾರ್ಥಿನಿಗೆ ಕತ್ತರಿಯಿಂದ ಮಂಜುನಾಥ್ ಇರಿದಿದ್ದಾನೆ. ಮಂಜುನಾಥ್ ಹಾಗು ಯುವತಿ ಪಿಯುಸಿ ತನಕ ಜೊತೆಯಲ್ಲೇ ವಿದ್ಯಾಭ್ಯಾಸ ನಡೆಸಿದ್ದರು. ವಿದ್ಯಾರ್ಥಿನಿ ಮೆಸೇಜ್‌ಗೆ ಉತ್ತರಿಸುತ್ತಿಲ್ಲ ಎಂದು ಕುಪಿತಗೊಂಡಿದ್ದ ಯುವಕ ಮಂಜುನಾಥ್, ತುಮಕೂರಿನಿಂದ ಮೂಡಬಿದರೆಗೆ ಬಂದಿದ್ದ. ಜೊತೆಗೆ ಯುವತಿಯ ಭೇಟಿಗೆ […]