ಬಸ್ & ಆಟೋ ನಡುವೆ ಅಪಘಾತ; ತಾಯಿ & ಇಬ್ಬರು ಮಕ್ಕಳು ದುರ್ಮರಣ

ಬಸ್ ಮತ್ತು ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ನ ಅತಿವಾಳ ಕ್ರಾಸ್ ಬಳಿ ನಡೆದಿದೆ. ಬೀದರ್‌ನ ಹೊನ್ನಕೇರಿ ತಾಂಡಾ ನಿವಾಸಿಗಳಾದ ಅನಿತಾ ಬಾಯಿ(45) ಮತ್ತು ಅವರ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿತರ ಮೂವರು ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುನೀತ್ ಕೆರೆಹಳ್ಳಿ ಗ್ಯಾಂಗ್ ಸೃಷ್ಟಿಸಿದ್ದ ನಾಯಿ ಮಾಂಸ ವಿವಾದಕ್ಕೆ ಪುಲ್ ಸ್ಟಾಪ್; ಹೈದ್ರಾಬಾದ್ ಲ್ಯಾಬ್ ಅಂತಿಮ ವರದಿ ಬಹಿರಂಗ

ಇದ್ರೀಶ್ ಪಾಷಾ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ಗ್ಯಾಂಗ್ ಸೃಷ್ಟಿಸಿದ್ದ ನಾಯಿ ಮಾಂಸ ವಿವಾದಕ್ಕೆ ಕೊನೆಗೆ ಪುಲ್ ಸ್ಟಾಪ್ ಬಿದ್ದಿದೆ. ಮಾಂಸದ ಮಾದರಿಯನ್ನು ಪರಿಶೀಲಿಸಿ ಹೈದರಾಬಾದ್ ಲ್ಯಾಬ್ ಅಂತಿಮ ವರದಿಯನ್ನು ನೀಡಿದ್ದು, ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸವಲ್ಲ ಎಂದು ಹೇಳಿದೆ. ಕೆಲ ದಿನಗಳ ಹಿಂದೆ ರಾಜಸ್ಥಾನದಿಂದ ಉದ್ಯಮಿ ಅಬ್ದುಲ್ ರಜಾಕ್ ತರಿಸುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವೂ ಮಿಶ್ರಣವಾಗಿರುತ್ತದೆ ಎಂದು ಪುನೀತ್ ಕೆರೆಹಳ್ಳಿ ಗ್ಯಾಂಗ್ ರಾದ್ದಾಂತ ಮಾಡಿ ಪೊಲೀಸರ […]
ನನ್ನ ಬಗ್ಗೆ ಬೀದಿ ಬೀದಿಯಲ್ಲಿ ಸುಳ್ಳು ಹಬ್ಬಿಸುತ್ತಿದ್ದಾರೆ, ಇನ್ಮುಂದೆ ಪ್ರತಿಪಕ್ಷಗಳ ಯಾವ ನಾಯಕರ ಮೇಲೂ ಕರುಣೆ ತೋರುವುದಿಲ್ಲ; ಸಿಎಂ ಸಿದ್ದರಾಮಯ್ಯ

ನಾನು ಈಗ ಮೊದಲಿನ ಸಿದ್ದರಾಮಯ್ಯ ಅಲ್ಲ, ನಾನು ಬದಲಾಗುತ್ತೇನೆ. ಇನ್ಮುಂದೆ ಪ್ರತಿ ಪಕ್ಷಗಳ ಯಾವ ನಾಯಕರ ಮೇಲೂ ಕರುಣೆ ತೋರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರ ಬಗ್ಗೆ ಹೋಗ್ಲಿ ಬಿಡು, ಹೋಗ್ಲಿ ಬಿಡು ಅಂತ ನಾನು ಹೇಳುತ್ತಿದ್ದೆ. ಅದೇ ನನಗೆ ಈಗ ಮುಳ್ಳಾಗುತ್ತಿದೆ. ಪ್ರತಿ ಪಕ್ಷಗಳ ಎಲ್ಲಾ ನಾಯಕರ ಹಳೇ ಪ್ರಕರಣ ತೆರೆಯುತ್ತೇನೆ. ದ್ವೇಷದ ರಾಜಕಾರಣ ಅಂದರೂ ಪರವಾಗಿಲ್ಲ. ನಾನು ಇನ್ಮುಂದೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತಪ್ಪೇ ಮಾಡದ […]
ಉಡುಪಿ; ಬಸ್ ಟೈಮಿಂಗ್ಸ್ ವಿಚಾರದಲ್ಲಿ ಗಲಾಟೆ; ಪ್ರಕರಣ ದಾಖಲು

ಬಸ್ ಟೈಮಿಂಗ್ ವಿಚಾರದಲ್ಲಿ ಗಲಭೆ ಸೃಷ್ಟಿಸಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡ ಘಟನೆ ಉಡುಪಿಯ ಹಿರಿಯಡಕ ಜಂಕ್ಷನ್ ಬಳಿ ನಡೆದಿದೆ. ಘಟನೆ ಬಗ್ಗೆ ನಾಲ್ವರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೈಮಿಂಗ್ ವಿಚಾರದಲ್ಲಿ ಬಸ್ ಅನ್ನು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ ಗಲಭೆ ಸೃಷ್ಟಿಸಿದ ಶಶಿಕಾಂತ್ (25) ರಾಜೇಶ್ (35) ಉಮೇಶ್ (54) ಮತ್ತು ಪ್ರಶಾಂತ್ (40) ವಿರುದ್ಧ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಖಾಸಗಿ ಬಸ್ ಗೆ ಲಾರಿ ಢಿಕ್ಕಿ; ವಿದ್ಯಾರ್ಥಿಗಳಿಗೆ ಗಾಯ

ಕುಂದಾಪುರ; ಖಾಸಗಿ ಬಸ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಘಟನೆ ತಲ್ಲೂರು ಪ್ರವಾಸಿ ಬಳಿ ನಡೆದಿದ್ದು, ಓರ್ವ ವಿದ್ಯಾರ್ಥಿ ಗಾಯಗೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ. ಅಪಘಾತದ ಪರಿಣಾಮ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಸಾದ್ ಎಂಬಾತ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನು ಅದೇ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಪೂಜಾರಿ, ದೀಪಶ್ರೀ, ತನುಷ್, ಪ್ರೀತಮ್, ಕೋಟ ಆಶ್ರಿತಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಅಶ್ಮಿತಾ ಹಾಗೂ ಅಶ್ವಿನಿ, ಇತರ ಪ್ರಯಾಣಿಕರಾದ ಶಿವರಾಂ, ವಿದ್ಯಾ, ಸತೀಶ್, ದೀಪ […]
ಹೆಬ್ರಿ; ಕೆರೆಯಲ್ಲಿ ಮುಳುಗಿ ಬಾಲಕ ಮೃತ್ಯು

ಹೆಬ್ರಿ: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಶಿವಪುರದ ಹಾಳ್‌ಬೆಟ್ಟು ಎಂಬಲ್ಲಿ ನಡೆದಿದೆ. ಹಾಳ್‌ಬೆಟ್ಟು ನಿವಾಸಿ ಸಿದ್ವಿಕ್ ಶೆಟ್ಟಿ (16) ಮೃತ ವಿದ್ಯಾರ್ಥಿ. ಸಿದ್ವಿಕ್ ಶೆಟ್ಟಿ ನಿನ್ನೆ ಸ್ನಾನಕ್ಕೆಂದು ಕೆರೆಗೆ ಹೋಗಿದ್ದಾಗ ಅಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗನವಾಡಿ ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಇಟ್ಟು ಪೋಟೋ ಕ್ಲಿಕ್ಕಿಸಿ ಮತ್ತೆ ಕಸಿದುಕೊಳ್ಳುವ ವಿಡಿಯೋ ವೈರಲ್; ಇಬ್ಬರು ಸಿಬ್ಬಂದಿಗಳು ಅಮಾನತು

ಕೊಪ್ಪಳ: ಅಂಗನವಾಡಿ ಮಕ್ಕಳ ತಟ್ಟೆಯಲ್ಲಿ ಮೊಟ್ಟೆಯಿಟ್ಟು ಪ್ರಾರ್ಥನೆ ಬಳಿಕ ಕಸಿದುಕೊಳ್ಳುವ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲಿ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾಬೇಗಂ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ, ಸಿಬ್ಬಂದಿಯನ್ನು ಅಮಾನತು ಮಾಡಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ ನಂತರ ಮೊಟ್ಟೆ ಕಸಿದುಕೊಳ್ಳುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ವ್ಯಾಪಕವಾಗಿ ಟೀಕೆ […]
ಮನೆ ಕುಸಿದು ಬಿದ್ದು ಬಾಲಕಿ ಮೃತ್ಯು; ಹೃದಯವಿದ್ರಾಹಕ ಘಟನೆ ವರದಿ

ಮನೆಯೊಂದು ಕುಸಿದ ಪರಿಣಾಮ ಆಟವಾಡಲು ತೆರಳಿದ್ದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯಕುಂದಗೋಳ ಪಟ್ಟಣದ ಸಾದಗೇರಿ ಓಣಿಯಲ್ಲಿನ ಮನೆಯೊಂದರಲ್ಲಿ ನಡೆದಿದೆ. ಅಮೃತಾ ಗದಿಗೆಪ್ಪ ಮೆಣಸಗೊಂಡ (5) ಮೃತಪಟ್ಟ ಬಾಲಕಿಯಾಗಿದ್ದಾಳೆ. ನಾಗರ ಪಂಚಮಿಯಂದು ಆಟವಾಡುವ ಸಲುವಾಗಿ ಬಾಲಕಿಯು ಪಕ್ಕದ ರಾಮಣ್ಣ ಕಾಳಪ್ಪ ಅರ್ಕಸಾಲಿ ಅವರ ಮನೆಗೆ ತೆರಳಿದ್ದಳು. ಇದೇ ಸಮಯ ಮಣ್ಣಿನ ಮೇಲ್ಚಾವಣಿ ಕುಸಿದ ಪರಿಣಾಮ ಬಾಲಕಿ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾಳೆ. ಮೃತ ಬಾಲಕಿಯ ಜೊತೆ ಆಟವಾಡುತ್ತಿದ್ದ ಇನ್ನೋರ್ವ ಬಾಲಕಿ ನಿಹಾರಿಕಾ ಕಮ್ಮಾರ (2) ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನಾ […]
ನನಗೆ ಸ್ವಂತ ಮನೆಯಿಲ್ಲ, ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು; ಮೂಡ ಹಗರಣದ ಆರೋಪದ ಬಗ್ಗೆ ಸಿದ್ದರಾಮಯ್ಯ ಭಾವುಕ ಟ್ವೀಟ್

ಮೂಡ ಹಗರಣದ ಆರೋಪದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಭಾವುಕ ಟ್ವೀಟ್ ಮಾಡಿದ್ದಾರೆ. ನಾನು 15 ಬಜೆಟ್ ಮಂಡಿಸಿದ್ದೇನೆ. ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ, ಈಗ ಕಟ್ಟಿಸುತ್ತಿದ್ದೇನೆ. ಹಿಂದಿದ್ದ ಮನೆ ಸಾಲ ತಗೊಂಡು ಕಟ್ಟಿಸಿದ್ದೆ ಎಂದು ಹೇಳಿದ್ದಾರೆ. ಈಗ ಸಾಲ ತೀರಿಸಲಾಗದೆ ಆ ಮನೆ ಮಾರಿಬಿಟ್ಟೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆ ಮಾಡಿದೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಲ್ಲಿ ಒಂದೇ […]
ಮಹಿಳೆಯರನ್ನು ಕೊಲೆ ಮಾಡಿ ಲಿಪ್ ಸ್ಟಿಕ್, ರವಿಕೆ ಕೊಂಡೊಯ್ಯುತ್ತಿದ್ದ ಸೀರಿಯಲ್ ಕಿಲ್ಲರ್ ಅರೆಸ್ಟ್; ಈತ ಎಷ್ಟು ಮಂದಿಯನ್ನು ಕೊಲೆ ಮಾಡಿದ್ದಾನೆ ಗೊತ್ತಾ?

14 ತಿಂಗಳೊಳಗೆ 9 ಮಂದಿ ಮಹಿಳೆಯರನ್ನು ಸೀರೆಯಿಂದಲೇ ಕೊಲೆಗೈದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರಪ್ರದೇಶದ ಬರೇಲಿ ಪೊಲೀಸರು ಬಂಧಿಸಿದ್ದಾರೆ. ಬರೇಲಿಯ ಬಕರ್‌ಗಂಜ್ ನಿವಾಸಿ, ಸೀರಿಯಲ್ ಕಿಲ್ಲರ್ ಆರೋಪಿಯನ್ನು ಕುಲದೀಪ್ ಎಂದು ಗುರುತಿಸಲಾಗಿದೆ. ಈತ ಗ್ರಾಮದಲ್ಲಿ ಒಂಟಿಯಾಗಿ ತಿರುಗಾಡುತ್ತಿದ್ದ ಈತ ಎಲ್ಲಿಯಾದರೂ ಒಂಟಿ ಮಹಿಳೆ ಕಂಡರೆ ಮೊದಲು ಆಕೆಯನ್ನು ಹಿಂಬಾಲಿಸುತ್ತಿದ್ದ. ನಂತರ ತನ್ನ ಮಾತಿನಲ್ಲಿಯೇ ಆಕೆಯನ್ನು ತನ್ನ ಬಲೆಗೆ ಬೀಳಿಸುತ್ತಿದ್ದ. ಇದಾದ ಬಳಿಕ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಅಲ್ಲದೇ ಸೀರೆ ಅಥವಾ ದುಪ್ಪಟ್ಟಾದಿಂದ ಕತ್ತಿಗೆ ಬಿಗಿದು ಸಾಯಿಸುತ್ತಿದ್ದ ಎನ್ನುವುದು […]