Breaking News :

ಸೇತುವೆ ಕುಸಿದು ನದಿಗೆ ಬಿದ್ದ ಲಾರಿ; ಶಿರೂರು ದುರ್ಘಟನೆ ಬೆನ್ನಲ್ಲಿ ಉತ್ತರಕನ್ನಡದಲ್ಲಿ ಮತ್ತೊಂದು ದುರಂತ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿ ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಿರ್ಮಿಸಿದ್ದ ಸೇತುವೆ ಕುಸಿದಿದೆ. ಸೇತುವೆ ಮೇಲೆ ತಮಿಳುನಾಡು ಮೂಲದ ಲಾರಿ ಚಲಿಸುವಾಗ ಘಟನೆ ಸಂಭವಿಸಿದ್ದು ಲಾರಿ ಸಮೇತ ಚಾಲಕ ಕಾಳಿ ನದಿಗೆ ಬಿದ್ದಿದ್ದಾನೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ 41 ವರ್ಷಗಳ ಹಳೆ ಸೇತುವೆ ಕುಸಿದು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣದ ವೇಳೆ ಒಂದೇ ಒಂದು ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇನ್ನೊಂದು ಮಾರ್ಗಕ್ಕೆ […]

ಮಂಗಳೂರು; ಜೋಕಟ್ಟೆಯಲ್ಲಿ ಬಾಲಕಿಯ ಕೊಲೆ ಪ್ರಕರಣ; ಇಬ್ಬರು ವಶಕ್ಕೆ!

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು  ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯಲ್ಲಿ ನಡೆದಿದೆ. ಪಣಂಬೂರಿನ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು ಅವರ ಮನೆಯಲ್ಲಿ ಕಳೆದ 4 ದಿನಗಳ ಹಿಂದೆ ತಮ್ಮನ ಮಗಳಾದ 13 ವರ್ಷದ ಬಾಲಕಿಯು ಕೈ ನೋವಿನ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದು ಉಳಿದುಕೊಂಡಿದ್ದಳು . ಮನೆಯಲ್ಲಿರುವವರೆಲ್ಲಾ ಕೆಲಸಕ್ಕೆ ಹೋದ ನಂತರ ಬೆಳ್ಳಿಗ್ಗೆ ಸರಿ ಸುಮಾರು 10.30 ಗಂಟೆಗೆ ಅಪ್ರಾಪ್ತ ಮೃತ ಬಾಲಕಿಯ ತಾಯಿಯು ಪಕ್ಕದ ಮನೆಯವರಿಗೆ ಕರೆ […]

ಹಾವು ಕಡಿದು 15 ವರ್ಷದ ಬಾಲಕಿ‌ ಮೃತ್ಯು

ಹಾವು ಕಡಿದು ವಿದ್ಯಾರ್ಥಿನಿ ಸಾವಿಗೀಡಾದ ಘಟನೆ  ಹೂವಿನಹಡಗಲಿ ತಾಲ್ಲೂಕಿನ ಹೊನ್ನನಾಯಕನಹಳ್ಳಿಯಲ್ಲಿ ನಡೆದಿದೆ. ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಜಹಿರಾಬೀ ಹಾರೋಗೇರಿ (15) ಮೃತ ವಿದ್ಯಾರ್ಥಿನಿ. ಬಾಲಕಿ ತನ್ನ ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದ ವೇಳೆ ಹಾವು ಕಡಿದಿದೆ. ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಾಲಕಿಯನ್ನು ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಈ ಕುರಿತು ಪಟ್ಟಣ ಠಾಣೆಯಲ್ಲಿ […]

ಇನ್‌ಸ್ಪೆಕ್ಟರ್​ ತಿಮ್ಮೇಗೌಡ ಆತ್ಮಹತ್ಯೆಯಲ್ಲ, ಕೊಲೆ; ಕುಟುಂಬಸ್ಥರ ಆರೋಪ

ಪೊಲೀಸ್ ಇನ್‌ಸ್ಪೆಕ್ಟರ್​ ತಿಮ್ಮೇಗೌಡ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದ್ದು, ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಸೋಮವಾರ ಇನ್ಸ್ ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಿಮ್ಮೇಗೌಡ ಅವರು ಈ ಹಿಂದೆ ಕುಂಬಳಗೋಡಿನ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆಗೊಂಡಿದ್ದರು. ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ತಮ್ಮ ತೋಟದ ಜಾಗದಲ್ಲಿ ಮರಕ್ಕೆ […]

ಮಂಗಳೂರು ಹೋಂಸ್ಟೇ ದಾಳಿ ಪ್ರಕರಣ; ಭಾರೀ ಸದ್ದು ಮಾಡಿದ್ದ ಪ್ರಕರಣದ ಅಂತಿಮ ತೀರ್ಪು ಪ್ರಕಟ

ಮಂಗಳೂರು: ದೇಶದ ಎಲ್ಲೆಡೆ ಭಾರೀ ಸುದ್ದಿಯಾಗಿದ್ದ 2012ರ ಜು. 28ರಂದು ನಡೆದಿದ್ದ ಮಂಗಳೂರಿನ ಹೋಂಸ್ಟೇ ದಾಳಿ ಪ್ರಕರಣ ಎಲ್ಲಾ ಆರೋಪಿಗಳು ಖುಲಾಸೆಗೊಳಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪುನೀಡಿದೆ. ನ್ಯಾಯಾಧೀಶ ಕಾಂತರಾಜು ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದು, ಓರ್ವ ಪತ್ರಕರ್ತ ನವೀನ್ ಸೂರಿಂಜೆ ಮೇಲಿದ್ದ ಪ್ರಕರಣ ನ್ಯಾಯಾಲಯ ಕೈಬಿಟ್ಟಿತ್ತು. ಇಂದು ಉಳಿದ 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿ […]

ಭಾರೀ ಮಳೆಗೆ ಆಸ್ಪತ್ರೆಯೊಳಗೆ ನುಗ್ಗಿದ ನೀರು; ರೋಗಿಗಳ ಪರದಾಟ

ಭಾರೀ ಮಳೆಯಿಂದ ಸಾರ್ವಜನಿಕ ಆಸ್ಪತ್ರೆಯೊಳಗೆ ನೀರು ನುಗ್ಗಿ ರೋಗಿಗಳು ಪರದಾಡಿದ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಭಾರೀ ಮಳೆಯ ಪರಿಣಾಮ ಚರಂಡಿಯಲ್ಲಿ ಹರಿಯಬೇಕಿದ್ದ ನೀರು ಆಸ್ಪತ್ರೆಯ ವಾರ್ಡ್ ಗಳಲ್ಲಿ ಬಂದು ನಿಂತಿದ್ದು, ಸುಮಾರು ಎರಡೂ ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ರೋಗಿಗಳು ರಾತ್ರಿ ನಿದ್ದೆ ಮಾಡದೆ ಪರದಾಡುವಂತಾಗಿದೆ. ಈ ಅವ್ಯವಸ್ಥೆಗೆ  ಸರ್ಕಾರಿ ಆಸ್ಪತ್ರೆಯ ಆಡಳಿತದ ವೈಫಲ್ಯವೇ ಇದಕ್ಕೆಲ್ಲ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಶಾಲಾ ಬಸ್ ಹರಿದು ಅಂಗನವಾಡಿಗೆ ತೆರಳುತ್ತಿದ್ದ 5 ವರ್ಷದ ಬಾಲಕ ಮೃತ್ಯು

ಶಾಲಾ ಬಸ್ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ‌. ಬಸವರಾಜ್(5) ಮೃತ ಬಾಲಕ. ವಿಜಯಪುರ ಜಿಲ್ಲೆಯ ನೀಡಗುಂಡಿ ತಾಲೂಕಿನ ಅರಳದಿನ್ನಿ ಗ್ರಾಮದಲ್ಲಿ ಘಟನೆ ನಡೆದಿದೆ‌. ಬಾಲಕ ಮನೆಯಿಂದ ಅಂಗನವಾಡಿಗೆ ಹೋಗುತ್ತಿದ್ದ ವೇಳೆ ಶಾಲಾ ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದ ಬಳಿಕ ಶಾಲಾ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಚಾಲನೆಗೆ ಬ್ರೇಕ್: ವಾಹನ ಚಾಲಕರಿಗೆ ಬಹುಮುಖ್ಯ ಮಾಹಿತಿ

ಮಂಗಳೂರು: ಮಳೆ ಹಿನ್ನಲೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ವೇಗಕ್ಕೆ ಮಿತಿ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಆಡಳಿತವು ಜಿಲ್ಲೆಯ ಎನ್‌ಎಚ್-66ನಲ್ಲಿ ಸುರತ್ಕಲ್‌ನಿಂದ ತೊಕ್ಕೊಟ್ಟು ಜಂಕ್ಷನ್‌ವರೆಗೆ ಮತ್ತು ಬಿ.ಸಿ ರೋಡ್ ನಿಂದ ನಂತೂರು ಜಂಕ್ಷನ್ ವರೆಗೆ ಎನ್‌ಎಟಚ್-73 ರಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ಘನ ವಾಹನಗಳನ್ನು ಗಂಟೆಗೆ 40 ಕಿ.ಮೀ.ಗೆ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗೆ 60 ಕಿಮೀ ವೇಗದ ಮಿತಿಯಲ್ಲಿ ಚಾಲನೆ ಮಾಡಲು ಸಲಹೆ ನೀಡಲಾಗಿದೆ ಎಂದು ಭಾರತೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ಅನುಷ್ಟಾನ ಘಟಕದ ಯೋಜನಾ […]

ಎಪಿ ಅಬೂಬಕ್ಕರ್ ಮುಸ್ಲಿಯಾರ್ ಗೆ ಸರಕಾರಿ ಗೌರವ; ತಗಾದೆ ತೆಗೆದ ಬಸವನಗೌಡ ಪಾಟೀಲ್ ಯತ್ನಾಳ್

ಆಗಸ್ಟ್‌ 2 ರಂದು ಬೆಂಗಳೂರಿನ ಸಿಎಂ ಕಾನ್ವೆನ್ಶನ್‌ನಲ್ಲಿ ಬೆಂಗಳೂರಿನ ಖಾಝಿ ಸ್ವೀಕಾರ ಸಮಾರಂಭ ಮತ್ತು ಕೂರತ್ ತಂಙಳ್ ಅವರ ಅನುಸ್ಮರಣೆ ನಡೆದಿತ್ತು. ಕಾರ್ಯಕ್ರಮಕ್ಕೆ ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅತಿಥಿಯಾಗಿ ಆಗಮಿಸಿದ್ದರು. ಬೆಂಗಳೂರಿಗೆ ಆಗಮಿಸಿದ್ದ ಉಸ್ತಾದರಿಗೆ ಸರಕಾರಿ ವಾಹನದಲ್ಲಿ ತೆರಳಲು ಅವಕಾಶವನ್ನು ಮಾಡಿಕೊಡಲಾಗಿತ್ತು. ಇದಕ್ಕೆ ಇದೀಗ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಗಾದೆ ತೆಗೆದಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ ಮಾಡಿರುವ ಬಸವನಗೌಡ ಪಾಟೀಲ್ ಯತ್ನಾಳ್, ಸರ್ಕಾರಕ್ಕೆ ಸಂಬಂಧವೇ ಇಲ್ಲದ […]

ಉಡುಪಿ ಬಸ್ ನಲ್ಲಿ ಯುವತಿ ಅಸ್ವಸ್ಥ; ಬಸ್ ನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದ ಸಿಬ್ಬಂದಿಗಳು

ಉಡುಪಿ: ಬಸ್ ನಲ್ಲಿ ತೆರಳುತ್ತಿರುವಾಗ ಯುವತಿಯೋರ್ವಳು ಅಸ್ವಸ್ಥಗೊಂಡಿದ್ದು, ಬಸ್ ಚಾಲಕ ಮತ್ತು ನಿರ್ವಾಹಕ ಬಸ್ ನ್ನು ಆಸ್ಪತ್ರೆಗೆ ಕೊಂಡೊಯ್ದ ಘಟನೆ ಉಡುಪಿ ನಗರದಲ್ಲಿ  ನಡೆದಿದೆ. ಶಿರ್ವದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್‌ನಲ್ಲಿ  ಯುವತಿ ಅಸ್ವಸ್ಥಳಾಗಿದ್ದು, ಬಸ್ ನಲ್ಲೇ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತಕ್ಷಣ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂ ಎಚ್ಚೆತ್ತು ಬಸ್ ನ್ನು ನೇರ ಆಸ್ಪತ್ರೆಗೆ ಸಾಗಿಸಿದ್ದಾರೆ. ಯುವತಿಗೆ ತಕ್ಷಣವೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಯುವತಿಯ ಮನೆಯವರಿಗೆ ಮಾಹಿತಿ […]