Breaking News :

ಬಾಗಲಕೋಟೆಯಲ್ಲಿ ಅಪರೂಪದ ಮಗು ಜನನ

ಬಾಗಲಕೋಟೆ; ನವಜಾತ ಶಿಶುವೊಂದು 12 ಕಾಲ್ಬೆರಳುಗಳು ಮತ್ತು 13 ಬೆರಳುಗಳೊಂದಿಗೆ ಜನಿಸಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಸನ್‌ಶೈನ್ ಮಲ್ಪಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಈ ನವಜಾತ ಶಿಶು ಜನಿಸಿದೆ. ಮಗುವಿನ ಬಲಗೈನಲ್ಲಿ 6, ಎಡಗೈನಲ್ಲಿ 7 ಮತ್ತು ಪ್ರತಿ ಕಾಲಿನಲ್ಲಿ 6 ಬೆರಳುಗಳು ಕಂಡು ಬಂದಿದೆ.ಅಪರೂಪದ ಸ್ಥಿತಿಯನ್ನು ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. ಭಾರತಿ ಮತ್ತು  ಗುರಪ್ಪ ಕೊಣ್ಣೂರ ದಂಪತಿಗೆ ಈ ಅಪರೂಪದ ಮಗು ಜನಿಸಿದ್ದು, ಇದರಿಂದ ಕುಟುಂಬವು ಸಂತೋಷವಾಗಿದೆ. ನನ್ನ ಪತ್ನಿ ಪ್ರತಿ ವಾರ ಕುಂದರಗಿಯ ಭುವನೇಶ್ವರಿ […]

ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ: ತಾಯಿ & ಇಬ್ಬರು ಮಕ್ಕಳು ಮೃತ್ಯು

ಹಾವೇರಿ: ಮಳೆಗೆ ಮನೆಯ ಮೇಲ್ಫಾವಣಿ ಕುಸಿದು  ಅವಳಿ ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ನಡೆದಿದೆ. ಮಾದಾಪುರ ಗ್ರಾಮದ ನಿವಾಸಿ ಚೆನ್ನಮ್ಮ (30) ಮತ್ತು ಅವಳಿ ಮಕ್ಕಳಾದ ಅನುಶ್ರೀ(1), ಅಮೂಲ್ಯ (1) ಮೃತ ದುರ್ದೈವಿಗಳು. ಘಟನೆಯಲ್ಲಿ  ಮೂವರು ಗಾಯಗೊಂಡಿದ್ದು, ಅವರನ್ನು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ಸುಮಾರು 3:30ಕ್ಕೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯಲ್ಲಿ ಎಲ್ಲರೂ ಮಲಗಿರುವಾಗ ಈ […]

ಮಂಗಳೂರು: ವಿದ್ಯುತ್ ತಗುಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತ್ಯು

ಮಂಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ಮಂಗಳೂರು ಹೊರವಲಯದ ಗುರುಪುರ ಕಲ್ಲಕಲೆಂಬಿ ಎಂಬಲ್ಲಿ ಘಟನೆ ನಡೆದಿದೆ. ಆಶ್ಮಿ ಶೆಟ್ಟಿ (19)ಮೃತ ವಿದ್ಯಾರ್ಥಿನಿ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸಿಎ ಕಲಿಯುತ್ತಿದ್ದ ಆಶ್ಮಿ ಶೆಟ್ಟಿ, ದನಗಳನ್ನು ಮೇಯಿಸಿಲು ಗದ್ದೆಗೆ ತೆರಳಿದ್ದಳು. ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಗಂಭೀರ ಗಾಯಗೊಂಡಿದ್ದ ಆಶ್ಮಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಆಶ್ಮಿ ಜತೆ ಬಂದಿದ್ದ ಎರಡು […]

ಗಂಗಾವತಿಯಲ್ಲಿ ಭಯಾನಕ ಘಟನೆ: ರೈಲ್ವೇ ಹಳಿಯಲ್ಲಿ ಮಲಗಿದ್ದ ಯುವಕರ ಮೇಲೆ ರೈಲು ಹರಿದು ಮೂವರು ಮೃತ್ಯು

ಗಂಗಾವತಿ: ಮದ್ಯ ಸೇವನೆ ಮಾಡಿ ರೆಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ಮೂವರು ಯುವಕರ ಮೇಲೆ ರೈಲು ಹರಿದ ದುರಂತ ಘಟನೆ ನಡೆದಿದ್ದು, ಘಟನೆಯಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ಕಿಲ್ಲಾ ಏರಿಯಾದ ಮೌನೇಶ ಶ್ರೀನಿವಾಸ ಬೈಲ್ ಪತ್ತಾರ (23), ಅಣ್ಣೂರು ಗೌರಮ್ಮ ಕ್ಯಾಂಪಿನ ಸುನಿಲ್ ತಿಮ್ಮಣ್ಣ (23) ಹಾಗೂ ಹಿರೇಜಂತಕಲ್​​ನ ವೆಂಕಟ ಭೀಮರಾಯ (20) ಮೃತ ಯುವಕರು. ಔತಣಕೂಟದ ಬಳಿಕ ತಮಾಷೆಗೆಂದು ಹಳಿ ಮೇಲೆ ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಮೃತಪಟ್ಟಿದ್ದಾರೆ. ರೈಲ್ವೆ ಹಳಿಯ ಪಕ್ಕದಲ್ಲಿ […]

ವೈದ್ಯಕೀಯ ವಿದ್ಯಾರ್ಥಿ ಡೆಂಘಿ ಜ್ವರಕ್ಕೆ ಬಲಿ

ವೈದ್ಯಕೀಯ ವಿದ್ಯಾರ್ಥಿಯೋರ್ವ ಡೆಂಘಿ ಜ್ವರಕ್ಕೆ ಬಲಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಕುಶಾಲ್‌ (22) ಮೃತ ವಿದ್ಯಾರ್ಥಿಯಾಗಿದ್ದು, ಈತ ಹೊಳೆನರಸೀಪುರ ಗೋಹಳ್ಳಿ ನಿವಾಸಿಯಾಗಿದ್ದಾನೆ. ಕುಶಾಲ್‌ ತಂದೆ ಶಿಕ್ಷಕ ವೃತ್ತಿಯಲ್ಲಿದ್ದರೆ ತಾಯಿ ರೇಖಾ ಟೈಲರ್‌ ಕೆಲಸ ಮಾಡುತ್ತಿದ್ದರು. ಕುಶಾಲ್‌ ಬಡತನವಿದ್ದರೂ ಹಾಸನದ ಹಿಮ್ಸ್‌ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ  ಕಲಿಯುತ್ತಿದ್ದ. ಕಳೆದ ವಾರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕುಶಾಲ್‌, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮಗನ ಸಾವಿನಿಂದ ನೊಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ದೇವಾಲಯದಲ್ಲಿ ಜಾರಿ ಬಿದ್ದ ಎಚ್ ಡಿ ರೇವಣ್ಣ

ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ದೇವಾಲಯದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಸದ್ಯ ಅವರು ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್.ಡಿ.ರೇವಣ್ಣ ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿ ದೇವಾಲಯದಲ್ಲಿ ಕಾಲು ಜಾರಿ ಬಿದ್ದರು. ಏಕಾದಶಿ ಪ್ರಯುಕ್ತ ಉಪವಾಸವಿದ್ದ ರೇವಣ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬರುವ ವೇಳೆ ಜಾರಿ ಬಿದ್ದಿದ್ದಾರೆ. ಎಚ್. ಡಿ. ರೇವಣ್ಣ ಹರದನಹಳ್ಳಿಯಿಂದ ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಹೊರಟಿದ್ದರು. ಈ ವೇಳೆ ಅವರು ಕಾಲು ಜಾರಿ ಬಿದ್ದಿದ್ದು, ಪಕ್ಕೆಲುಬಿಗೆ […]

ಹೃದಯವಿದ್ರಾಹಕ ಘಟನೆ: ಮಳೆಗೆ ಗುಡ್ಡೆ ಕುಸಿದು ಇಡೀ ಕುಟುಂಬವೇ ಬಲಿ

ಕಾರವಾರ;ಅಂಕೋಲಾದ ಶಿರೂರು ಬಳಿ ಮಂಗಳೂರು ಗೋವಾಗೆ ಸಂರ್ಪಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿದು ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಐವರಿದ್ದಾರೆ. 20 ಮಂದಿ ಕಣ್ಮರೆಯಾಗಿರುವ ಶಂಕೆ ಇದ್ದು, ಭಾರೀ ಮಳೆ ನಡುವೆ ಎನ್‌ಡಿಆರ್‌ಎಫ್ ಶೋಧ ಕಾರ್ಯ ನಡೆಸಿದೆ. ಈಗಾಗಲೇ 6 ಶವ ಹೊರತೆಗೆಯಲಾಗಿದೆ. ಇಡೀ ದಿನ ನಡೆದ ಕಾರ್ಯಚರಣೆಯಲ್ಲಿ 6 ಜನರ ಮೃತ ದೇಹ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ. ಜೀವನ ನಿರ್ವಹಣೆಗೆಂದು ಕಾರವಾರದಿಂದ […]

ವಿದ್ಯುತ್ ತಂತಿ ತಗುಲಿ ಯುವ ರೈತ ಮೃತ್ಯು

ಕಲಬುರಗಿ : ಜಮೀನಿನಲ್ಲಿ‌‌ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ರೈತ ಮೃತಪಟ್ಟಿರುವ ಘಟನೆ ಕಲಬುರಗಿಯ ಹಡಗಿಲ್ ಹಾರುತಿ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ಖಾಜಪ್ಪ ಭಜಂತ್ರಿ ಎಂದು ಗುರುತಿಸಲಾಗಿದೆ. ಪರಿಚಯಸ್ಥರ ಜಮೀನಿನಲ್ಲಿ ಕೆಲಸ ಮಾಡುವಾಗ ಈ ದುರ್ಘಟನೆ ಸಂಭವಿಸಿದ್ದು, ಘಟನೆಯ ಬಳಿಕ ಆಸ್ಪತ್ರೆ ಕರೆದೊಯ್ಯುವ ಮಾರ್ಗಮದ್ಯೆ ಖಾಜಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.