ಕಾರ್ಕಳ; ಬೈಕ್ ಗೆ ಟಿಪ್ಪರ್ ಢಿಕ್ಕಿ; ಯುವಕ ಮೃತ್ಯು

ಕಾರ್ಕಳ: ಟಿಪ್ಪರ್ ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಕಾರ್ಕಳ ಪುಕ್ಕೇರಿ ಬಳಿಯ ಫುಡ್ ಬಾಸ್ಕೆಟ್ ಮುಂಭಾಗದಲ್ಲಿ ನಡೆದಿದೆ. ಮೃತ ಯುವಕನನ್ನು ಬೈಪಾಸ್ ನಿವಾಸಿ, ಕಾರ್ ಮೆಕ್ಯಾನಿಕ್ ನಿಝಾಂ (21) ಎಂದು ಗುರುತಿಸಲಾಗಿದೆ. ಕಾರ್ಕಳದಿಂದ ಬೈಪಾಸ್ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಬೈಪಾಸ್ ನಿಂದ ಕಾರ್ಕಳದತ್ತ ಬರುತ್ತಿದ್ದ ಬೈಕ್ ಮುಖಾಮುಖಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸವಾರ ಕಾರ್ ಮೆಕ್ಯಾನಿಕ್ ನಿಝಾಂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಕಾರ್ಕಳ ಸರ್ಕಾರಿ ಮೃತದೇಹ ಆಸ್ಪತ್ರೆಯಲ್ಲಿ […]
ಏಳನೇ ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಮಹಿಳೆ: ಜಡ್ಜ್ ಶಾಕ್

ಬೆಂಗಳೂರಿನಲ್ಲಿ 6 ವಿವಾಹವಾಗಿ ಪತಿಯಿಂದ ಡೈವೋರ್ಸ್ ಪಡೆದುಕೊಂಡಿದ್ದ ಮಹಿಳೆ 7ನೇ ವಿವಾಹದ ಡೈವೋರ್ಸ್ ಕೇಸ್ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಧೀಶರೇ ಅಚ್ಚರಿಗೊಂಡಿದ್ದಾರೆ. ಡಿವೋರ್ಸ್ ಪ್ರಕರಣದಲ್ಲಿ ಮಹಿಳೆ ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಇದೀಗ 7ನೇ ಪತಿ ವಿರುದ್ಧವೂ ಪ್ರಕರಣ ದಾಖಲಿಸಿದ್ದಾಳೆ. ಮಹಿಳೆ ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ. ಮದುವೆಯಾದ ಬಳಿಕ 6 ತಿಂಗಳು ಸಂಸಾರ ನಡೆಸಿ ಬಳಿಕ 6 ತಿಂಗಳಲ್ಲಿ ಪತಿ ವಿರುದ್ಧ ದೈಹಿಕ ಹಾಗೂ ಹಿಂಸೆ, ಕ್ರೌರ್ಯ ಸೇರಿದಂತೆ ಸಕ್ಷನ್ 498ಎ ಅಡಿ ಪ್ರಕರಣ ದಾಖಲಿಸಿ […]
8 ತಿಂಗಳಿನಿಂದ ಕೋಮಾದಲ್ಲಿರುವ ನಿಫಾ ಸೋಂಕಿತರ ಆರೈಕೆ ಮಾಡಿದ್ದ ಕಡಬದ ಯುವಕ

ಕೇರಳದಲ್ಲಿ ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ಯುವ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾದಲ್ಲಿ ದಿನ ದೂಡುತ್ತಿರುವ ಬಗ್ಗೆ ವರದಿಯಾಗಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್(24) ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿರುವ ಯುವಕ. ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆಯಂಡ್ ರಿಸರ್ಚ್ ಸೆಂಟರ್ […]
ಕುಂದಾಪುರ: ಪೊಲೀಸರ ಸೋಗಿನಲ್ಲಿ ಉದ್ಯಮಿಯ ಮನೆಗೆ ಬಂದ ಅಪರಿಚಿತರ ತಂಡ

ಕುಂದಾಪುರ: ಬೆಳ್ಳಂಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸ್ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಅಪರಿಚಿತರ ತಂಡವೊಂದು ಬಂಧಿರುವ ಬಗ್ಗೆ ವರದಿಯಾಗಿದೆ. ಮನೆ ಮಾಲಕಿ ಮಣೂರು ಗ್ರಾಮದ ಕವಿತಾ (34) ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜು.25ರಂದು ಬೆಳಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ಆಗ ನಿರ್ಲಕ್ಷಿಸಿದ್ದು, 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ […]
ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ

ಮುಡಾ ಹಗರಣದ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೋರಾಟದ ರೂಪುರೇಷೆ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮೂಗಿನಿಂದ ಏಕಾಏಕಿ ರಕ್ತ ಸುರಿದಿದೆ. ಮೊದಲು ತಮ್ಮ ಬಳಿ ಇರುವ ಟವೆಲ್‌ನಿಂದ ಹೆಚ್‌ಡಿಕೆ ರಕ್ತ ಒರೆಸಿಕೊಂಡಿದ್ದಾರೆ. ಆದರೆ ಮತ್ತೆ ಜಾಸ್ತಿ ರಕ್ತ ಬಂದು ಅವರ ಬಿಳಿ ಶರ್ಟ್‌ಗೂ ತಗುಲಿದೆ. ಈ ವೇಳೆ ಹೆಚ್‌ಡಿ ಕುಮಾರಸ್ವಾಮಿ ಕೊಂಚ ಗಾಬರಿಗೊಂಡಿದ್ದಾರೆ. ಈ ವೇಳೆ ಅವರ ಬಳಿಯೇ ಇದ್ದ ಮಾಜಿ ಸಿಎಂ […]
ಮಾಂಸ ವಿವಾದ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿರುವುದು ನಾಯಿ ಮಾಂಸವಲ್ಲ, ಅದು ಮೇಕೆ ಮಾಂಸ. ಪ್ರಯೋಗಾಲಯದ ವರದಿಯಲ್ಲಿ ಮೇಕೆ ಮಾಂಸ ಎಂದು ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರು ನಾಯಿ ಮಾಂಸ ಪ್ರಕರಣ ವಿಚಾರ ನಗರದಲ್ಲಿ ಪ್ರತಿಕ್ರಿಯಿಸಿ, ಲ್ಯಾಬ್ ಪರೀಕ್ಷೆಯಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ದುರುದ್ದೇಶದಿಂದ ಈ ಬಗ್ಗೆ ದೂರು ದಾಖಲಾಗಿತ್ತು ಎಂದು ಗೃಹ ಸಚಿವರು ಹೇಳಿದ್ದಾರೆ. ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ, ವಾರಕ್ಕೊಮ್ಮೆ, 15 ದಿವಸಕ್ಕೊಮ್ಮೆ ಮಾಂಸ […]
ಕೆಎಸ್ ಆರ್ ಟಿಸಿ ಬಸ್ ಗೆ ಕಾರು ಢಿಕ್ಕಿ: ಇಬ್ಬರು ಯುವಕರು ಮೃತ್ಯು

ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಯಚೂರಿನ ಲಿಂಗಸಗರೂ ತಾಲೂಕಿನ ಅಡವಿಬಾವಿ ಕ್ರಾಸ್ ಬಳಿ ತಡರಾತ್ರಿ ನಡೆದಿದೆ. ಲಿಂಗಸಗೂರು ಹೊರವಲಯದ ಕರಡಕಲ್ ಗ್ರಾಮದ ನಿವಾಸಿಗಳಾದ ವಿರೇಶ್ (25), ಚನ್ನಬಸವ (24) ಮೃತ ದುರ್ದೈವಿಗಳು. ಇವರು ನಾರಾಯಣಪುರ ಜಲಾಶಯದತ್ತ ಹೊರಟ್ಟಿದ್ದು, ಇದೇ ವೇಳೆ ಮುದ್ದೇಬಿಹಾಳ ಕಡೆಯಿಂದ ಲಿಂಗಸಗೂರಿನತ್ತ ಬಸ್ ಬರುತ್ತಿತ್ತು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ವಿರೇಶ್ ಹಾಗೂ ಚನ್ನಬಸವ ಗಂಭೀರ ಗಾಯಗೊಂಡು […]
ನನ್ನ ತಂದೆಯ ಮೂಳೆಯನ್ನಾದರೂ ಹುಡುಕಿ ಕೊಡಿ: ಅಂಕೋಲಾ ಗುಡ್ಡೆ ಕುಸಿತದ ವೇಳೆ ನಾಪತ್ತೆಯಾದ ಜಗನ್ನಾಥ್ ಪುತ್ರಿಯ ಅಳಲು

ಅಂಕೋಲಾ ಗುಡ್ಡೆ ಕುಸಿತ ಸ್ಥಳದಲ್ಲಿ ಕೇರಳದ ಅರ್ಜುನ್ ಗೆ ಮಾತ್ರವಲ್ಲದೆ ಜಗನ್ನಾಥ್ ಹಾಗೂ ಲೋಕೇಶ್ ಎಂಬುವವರಿಗೆ ಕೂಡ ಹುಡುಕಾಟ ನಡೆಯುತ್ತಿದೆ. ಜುಲೈ 16ರಂದು ನಡೆದ ಗುಡ್ಡ ಕುಸಿತದಲ್ಲಿ ಜಗನ್ನಾಥ್ ಎಂಬುವವರು ಕಾಣೆಯಾಗಿದ್ದು, ಇಲ್ಲಿಯವರೆಗೂ ಅವರ ಸುಳಿವು ಕೂಡ ಸಿಕ್ಕಿಲ್ಲ. ಇದೀಗ ಅವರ ಮಗಳು ಪಲ್ಲವಿ ತಂದೆಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ತಂದೆ ಸಿಗದ ಹಿನ್ನೆಲೆ ಕಣ್ಣೀರಾಕಿರುವ ಪಲ್ಲವಿ, ನಮ್ಮ ತಂದೆ ಕಾಣೆಯಾಗಿ 12 ದಿನ ಆಯ್ತು. ಏನು ಸುದ್ದಿ ಇಲ್ಲ. ಅವರನ್ನು ಹುಡುಕಿಕೊಡಿ. ಅವರನ್ನು ನಾವೂ ನೋಡಬೇಕು. […]
ಕುರಿ ಮಾಂಸವನ್ನು ನಾಯಿ ಮಾಂಸ ಎಂದು ರಾದ್ದಾಂತ: ಪುನೀತ್ ಕೆರೆಹಳ್ಳಿ ವಿರುದ್ಧ ಮೂರು ಎಫ್ಐಆರ್

ಕುರಿ ಮಾಂಸದ ಸಾಗಾಟದ ವೇಳೆ ನಾಯಿ ಮಾಂಸ ಸಾಗಾಟ ಎಂದು ಆರೋಪಿಸಿ ರಾದ್ದಾಂತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಹಾಗೂ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ, ಇದೀಗ ಪ್ರಕರಣಕ್ಕೆ ಸಂಬಂದಿಸಿ ಮೂರನೇ ಎಫ್ ಐ ಆರ್ ದಾಖಲಾಗಿದೆ. ಅಕ್ರಮವಾಗಿ ಮಾಂಸ ಮಾರಾಟದ ಬಗ್ಗೆ ಮೆಜೆಸ್ಟಿಕ್ ರೈಲು ನಿಲ್ದಾಣ ಬಳಿ ಪ್ರತಿಭಟನೆ ನಡೆಸಿ ಗಲಾಟೆ ಮಾಡುತ್ತಿದ್ದ ಆರೋಪದಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ಸಹಚರರನ್ನು ಬಂಧಿಸಲಾಗಿತ್ತು. ಗುಂಪುಗೂಡಿ ಗಲಾಟೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಸೇರಿ ಪುನೀತ್ […]
ಅಂಕೋಲಾ ಭೂಕುಸಿತಕ್ಕೆ ಕಾರಣಗಳೇನು? ಸಮೀಕ್ಷೆ ಏನು ಹೇಳುತ್ತಿದೆ?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಭೂ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ ಐ) ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಕಾಮಗಾರಿಗಳ ವಿಧಾನಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದಲ್ಲದೆ ಹೆಚ್ಚಿನ ಹಾನಿ ತಡೆಗಟ್ಟಲು ತಕ್ಷಣದ ಹಾಗೂ ದೀರ್ಘಕಾಲೀನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕಾಮಗಾರಿಯಿಂದಾಗಿ ನೈಸರ್ಗಿಕ ಒಳಚರಂಡಿ ಹರಿವಿಗೆ ತೊಂದರೆಯಾಗಿದೆ […]