ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಿಯತಮೆಯನ್ನು ಆಸ್ಪತ್ರೆಗೆ ಸೇರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ

ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದು ಪ್ರಿಯಕರ ಕೂಡಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಮಂಡಕಳ್ಳಿ ಗ್ರಾಮದ ಮೋನಿಕಾ(20) ಮೈಸೂರಿನ ಜ್ಯೋತಿನಗರದ ಮನು(22) ಆತ್ಮಹತ್ಯೆ ಮಾಡಿಕೊಂಡವರು. ಸಂಬಂಧಿಗಳಾದ್ದ ಇವರಿಬ್ಬರೂ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರು ಇಬ್ಬರಿಗೂ ಮದುವೆ ಮಾಡಲು ತೀರ್ಮಾನಿಸಿದ್ದರು. ಆದರೆ ಇತ್ತೀಚೆಗೆ ಇವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆ ನಡೆದಿದೆ. ಇದರಿಂದ ಮೋನಿಕಾ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಿಯತಮೆ ಆತ್ಮಹತ್ಯೆ ವಿಷಯ ತಿಳಿದ ಮನು ಸ್ಥಳಕ್ಕೆ ಧಾವಿಸಿ ಮೋನಿಕಾಳನ್ನು […]
ಯುವಕನೋರ್ವನ ಮೃತದೇಹ ಸಂಶಯಾಸ್ಪದವಾಗಿ ಪತ್ತೆ

-ನಿಝಾಮುದ್ದೀನ್ ಶರೀಫ್ ಮೃತ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ಚಿತ್ತಾಪುರ ಪಟ್ಟಣದ ಹೊರ ವಲಯದ ದಿಗ್ಗಾಂವ ಸಂಪರ್ಕಿಸುವ ರಸ್ತೆ ಬಳಿ ನಡೆದಿದೆ. ಪಟ್ಟಣದ ನಾಸರಜಂಗ್ ಬಡಾವಣೆಯ ನಿಝಾಮುದ್ದಿನ್ ಶರೀಫ್ (22) ಕೊಲೆಯಾದ ಯುವಕ. ಶರೀಫ್ ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಜು. 25ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೋದವನು ರಾತ್ರಿ 9 ಗಂಟೆಯಾದರೂ ಮರಳಿ ಬಾರದಿದ್ದಾಗ ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೆ ರಾತ್ರಿ 11 ಗಂಟೆಗೆ ಕೆಸಿಎಲ್ ಕಂಪನಿ ಬಳಿಯ ಕಾಲೊನಿಯೊಂದರ […]
ಕುರಿ ಮಾಂಸ ಸಾಗಾಟದ ವೇಳೆ ತಡೆದು ನಾಯಿ ಮಾಂಸ ಎಂದ ಪುನೀತ್ ಕೆರೆಹಳ್ಳಿ; ರೈಲ್ವೇ ನಿಲ್ದಾಣದಲ್ಲಿ ರಾದ್ದಾಂತ ಸೃಷ್ಟಿ, ಬಂಧನ

ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆ ಎಂದು ಇದ್ರೀಶ್ ಪಾಷಾ ಕೊಲೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ತನ್ನ ಗ್ಯಾಂಗ್ ಜೊತೆ ಬಂದು ರಾದ್ದಾಂತ ಸೃಷ್ಟಿಸಿರುವ ಘಟನೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಅಬ್ದುಲ್ ರಜಾಕ್ ಎಂಬುವರು ಕಳೆದ 12 ವರ್ಷಗಳಿಂದ ರಾಜಸ್ಥಾನದಿಂದ ಬೆಂಗಳೂರಿಗೆ ಕುರಿ ಮಾಂಸ ತರಿಸಿ ವ್ಯಾಪಾರ ಮಾಡುತ್ತಿದ್ದರು. ಎರಡು ದಿನಕ್ಕೊಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ನಿನ್ನೆ ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಪುನೀತ್ ಕೆರೆಹಳ್ಳಿ ಟೀಂ ಆರೋಪದ […]
ವೈದ್ಯರ ನಿರ್ಲಕ್ಷ್ಯಕ್ಷೆ ಯುವಕ ಬಲಿ; ಕುಟುಂಬಸ್ಥರ ಆರೋಪ

ವೈದ್ಯರ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ. ಯುವಕನ ಸಾವಿನ ಬೆನ್ನಲ್ಲಿ ಗುಲಬರ್ಗಾ ಹಾರ್ಟ್ ಫೌಂಡೇಷನ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ 24 ವರ್ಷದ ಶರಣಬಸಪ್ಪ ಮೃತ ಯುವಕ. ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದ ಶರಣಬಸಪ್ಪ, ಹೊಟ್ಟೆ ನೋವು, ವಾಂತಿ ಹಿನ್ನೆಲೆಯಲ್ಲಿ ಜುಲೈ 22ರಂದು ಹಾರ್ಟ್ ಫೌಂಡೇಷನ್ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಎರಡು ದಿನಗಳಿಂದ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೀಗ ಯುವಕ ಚಿಕಿತ್ಸೆ ಫಲಕಾರಿಯಾಗದೆ […]
ಕೋರಮಂಗಲ ಪಿಜಿಯಲ್ಲಿ ಯುವತಿಯ ಕೊಲೆ ವಿಡಿಯೋ ವೈರಲ್: ಸಂತ್ರಸ್ತೆ ಯಾಚಿಸಿದರೂ ಸಹಾಯಕ್ಕೆ ಮುಂದಾಗದ ಯುವತಿಯರು!

ಬೆಂಗಳೂರು: ಕೋರಮಂಗಲದ ಪಿಜಿಯೊಂದರಲ್ಲಿ ನಡೆದ ಕೃತಿ ಕುಮಾರಿ ಎಂಬ ಯುವತಿಯ ಮರ್ಡರ್ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಕೊಲೆಯ ವೇಳೆ ಯುವತಿ ರಕ್ತದ ಮಡುವಿನಲ್ಲಿ ಬಿದ್ದು ಸಹಾಯಕ್ಕಾಗಿ ಯಾಚಿಸುತ್ತಿದ್ದರೂ, ಅಲ್ಲಿದ್ದ ಇತರ ಯುವತಿಯರು ಆಕೆಯ ಸಹಾಯಕ್ಕೆ ಬರದೆ ತಮ್ಮಷ್ಟಕ್ಕೇ ಹೋಗಿದ್ದು ವಿಡಿಯೋದಲ್ಲಿ ದಾಖಲಾಗಿದ್ದು, ಟೀಕೆಗೆ ಕಾರಣವಾಗಿದೆ. ಜು.23ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ಕತ್ತು, ಎದೆ, ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದು ಆಕೆಯನ್ನು ಕೊಲೆ ಮಾಡಲಾಗಿದೆ. ಆಕೆಯ […]
ದರ್ಶನ್ ಗೆ ಕ್ಷಮೆ ನೀಡುತ್ತಾ ರೇಣುಕಾಸ್ವಾಮಿ ಕುಟುಂಬ? ರೇಣುಕಾಸ್ವಾಮಿ ತಂದೆ ಹೇಳಿದ್ದೇನು?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದು, ಅವರ ವಿರುದ್ಧ ಬಲವಾದ ಸಾಕ್ಷ್ಯಾಗಳು ಪೊಲೀಸರಿಗೆ ಸಿಕ್ಕಿದೆ. ರೇಣುಕಾಸ್ವಾಮಿ ಕುಟುಂಬ ಬಯಸದೆ ದರ್ಶನ್ ರಕ್ಷಣೆ ಸಾಧ್ಯವಿಲ್ಲ ಎನ್ನಲಾಗಿದೆ. ದರ್ಶನ್ ಕುಟುಂಬ ರೇಣುಕಾಸ್ವಾಮಿ ಕುಟುಂಬದ ಜೊತೆ ಮಾತುಕತೆಗೆ ಪ್ರಯತ್ನಿಸುತ್ತದೆ ಎನ್ನಲಾಗಿತ್ತು. ದರ್ಶನ್ ಜೊತೆ ಕಾಂಪ್ರಮೈಸ್ ಗೆ ತಯಾರಿದ್ದಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ, ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಗೆ ನಾವು ಒಪ್ಪಲ್ಲ. ನನ್ನ ಮಗನಿಗೆ ನ್ಯಾಯ ದೊರಕಿಸಿಕೊಡಬೇಕು ಅಷ್ಟೇ ನಮಗಿರುವ ಗುರಿ ಎಂದಿದ್ದಾರೆ. ದರ್ಶನ್ ಇರಲಿ ಯಾರೇ […]
BREAKING ನೀಟ್ ಪರೀಕ್ಷೆ ರದ್ದು, ಒಂದು ದೇಶ, ಒಂದು ಚುನಾವಣೆ ವಿರುದ್ಧ ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ನೀಟ್ ಪರೀಕ್ಷೆ ರದ್ದು ಹಾಗೂ ಕೇಂದ್ರ ಸರ್ಕಾರದ ಒಂದು ದೇಶ, ಒಂದು ಚುನಾವಣೆ ವಿರೋಧಿಸಿ ಕರ್ನಾಟಕ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ವಿಧಾನಸಭೆ ಅದನ್ನು ಅಂಗೀಕರಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜುಲೈ 22ರಂದು ನಡೆದ ನಡೆದ ಸಂಪುಟ ಸಭೆಯಲ್ಲಿ ನೀಟ್ ಪರೀಕ್ಷೆ ಮತ್ತು ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ ವಿರೋಧಿಸಲು ನಿರ್ಧರಿಸಲಾಗಿತ್ತು. ಈ ಕುರಿತು ನಿರ್ಣಯ ಮಂಡಿಸಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಕೇಂದ್ರ ಸರ್ಕಾರದ ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆ ಮತ್ತು […]
ಯುವಕನ ಕೈಕಡಿದ ಪ್ರಕರಣ: ಆರೋಪಿಗಳ ಬಂಧನ

ಕನಕಪುರದ ಮಳಗಾಳು ಗ್ರಾಮದ ಎನ್.ಕೆ. ಕಾಲೊನಿಯಲ್ಲಿ ದಲಿತ ಯುವಕನ ಕೈ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕನಕಪುರ ಟೌನ್ ಪೊಲೀಸರು ಮಂಗಳವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಶಾಂಕ್, ದರ್ಶನ್, ಪ್ರತೀಕ್ ಹಾಗೂ ಶಿವಶಂಕರ್ ಬಂಧಿತ ಆರೋಪಿಗಳು. ಘಟನೆಯ ಪ್ರಮುಖ ಆರೋಪಿ ಹರ್ಷ ಸೇರಿದಂತೆ ಉಳಿದ ಮೂವರು ತಲೆ ಮರೆಸಿಕೊಂಡಿದ್ದಾರೆ. ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಅವರು ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರೊಂದಿಗೆ ಕಾಲೊನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಐಜಿಪಿ […]
ಪುರಸಭಾ ಸದಸ್ಯನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ; ಧರ್ಮಸ್ಥಳಕ್ಕೆ ಬಂದು ನಿನ್ನೆಯಷ್ಠೇ ವಾಪಾಸ್ಸಾಗಿದ್ದವನನ್ನು ಹೊಂಚು ಹಾಕಿ ಹತ್ಯೆ

ಪುರಸಭೆ ಸದಸ್ಯನನ್ನು ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾದನಪುರದಲ್ಲಿ ನಡೆದಿದೆ. ಬಾದನಪುರ ಕಾರ್ಪೊರೇಟರ್ ರವಿ ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ. ಬೆಂಗಳೂರು ಆನೇಕಲ್ ತಾಲೂಕಿನ ಪುರಸಭೆಯ ಸದಸ್ಯ ರವಿ ನಿನ್ನೆಯಷ್ಟೇ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳಿ ಮನೆಗೆ ವಾಪಸ್ ಆಗಿದ್ದರು. ಬಳಿಕ ರಾತ್ರಿ 8:45ಕ್ಕೆ ಮನೆ ಹೊರಗೆ ಹೋಗಿದ್ದ ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಬಾದನಪುರ ಮೂಲದ ಹರೀಶ್ ಹಾಗೂ ವಿನಯ್ ಮತ್ತು ಕರ್ಪೂರ ಗ್ರಾಮದ ಜೆಕೆ ಈ […]
ಸೌದಿಯಿಂದ ಬಂದು ಸ್ವಂತ ಅಣ್ಣನ ಮಗನನ್ನೇ ಕೊಲೆ ಮಾಡಿದ ಚಿಕ್ಕಪ್ಪ

ಚಿಕ್ಕಬಳ್ಳಾಪುರ: ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊಲೆ ಮಾಡಲೆಂದು ಊರಿಗೆ ಬಂದು ತನ್ನ ಸ್ವಂತ ಅಣ್ಣನ ಮಗನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುಡಿಬಂಡೆ ತಾಲ್ಲೂಕು ಹಂಪಸಂದ್ರದಲ್ಲಿ ನಡೆದಿದೆ. ನಜೀರ್ ಅಹ್ಮದ್ ಕೊಲೆಯಾಗಿರುವ ವ್ಯಕ್ತಿಯಾಗಿದ್ದಾರೆ. ಈತನನ್ನು ಚಿಕ್ಕಪ್ಪ ಬಶೀರ್ ಅಹ್ಮದ್(66) ಕೊಲೆ ಮಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಬಶೀರ್ ಅಹ್ಮದ್ ಇತ್ತೀಚೆಗೆ ಊರಿಗೆ ಬಂದಿದ್ದ. ಯಾವುದೋ ಕಾರಣಕ್ಕೆ ಜಗಳವಾಗಿದ್ದು, ಪಿಸ್ತೂಲ್ ತೆಗೆದು ಸ್ವಂತ ಅಣ್ಣನ ಮಗ ನಜೀರ್ ಅಹ್ಮದ್‌ನನ್ನು ಕೊಲೆ ಮಾಡಿದ್ದಾರೆ. ಇತ್ತ, ಗಲಾಟೆ […]