Breaking News :

ಅಂಕೋಲಾ ಗುಡ್ಡೆ ಕುಸಿತ ಸ್ಥಳದಲ್ಲಿ ಪೊಕಲೇನ್ ಯಂತ್ರದ ಮೂಲಕ ಕಾರ್ಯಾಚರಣೆ; ಏನಿದು ಯಂತ್ರ?

ಉತ್ತರ ಕನ್ನಡ,: ಅಂಕೋಲಾ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ನಾಪತ್ತೆಯಾದವರ ಮೃತದೇಹ ಪತ್ತೆಗೆ ಹುಡುಕಾಟ ಮುಂದುವರಿದಿದೆ. ಗಂಗಾವಳಿ ನದಿಯಲ್ಲಿ ಪೊಕಲೇನ್ (poclain) ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ ಈ ಪೊಕಲೇನ್ ವೆಹಿಕಲ್, ನದಿಯ ಆಳದಲ್ಲಿರುವ ಮಣ್ಣನ್ನು ತೆರವು ಮಾಡುವ ಯಾಂತ್ರವಾಗಿದೆ. ನದಿಯಲ್ಲಿ ಇನ್ನುಳಿದ ಮೃತ ದೇಹಗಳು ಇರುವ ಶಂಕೆ ವ್ಯಕ್ತವಾಗಿದ್ದು, ಕರ್ನಾಟಕದ ಇಬ್ಬರು ಮತ್ತು ಕೇರಳದ ಓರ್ವರ‌ ಮೃತದೇಹ ಪತ್ತೆ ಮಾಡಬೇಕಿದೆ. 60 ಅಡಿ ಉದ್ದವಾದ […]

ಬಜೆಟ್ ನಲ್ಲಿ ನಿರ್ಲಕ್ಷ್ಯ; ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕರ್ನಾಟಕ‌ ಸೇರಿ ನಾಲ್ಕು ರಾಜ್ಯಗಳ ಸಿಎಂಗಳು

ಕೇಂದ್ರ ಬಜೆಟ್‌ನಲ್ಲಿ ತಮ್ಮ ರಾಜ್ಯಗಳನ್ನು ಕಡೆಗಣಿಸಿರುವುದನ್ನು ವಿರೋಧಿಸಿ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದಾಗಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ  ನೀತಿ ಆಯೋಗದ ಸಭೆ ನಡೆಯಲಿದೆ. ಸಭೆಯನ್ನು ಕರ್ನಾಟಕದ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ನೀತಿ ಆಯೋಗದ ಸಭೆಗೆ ಹಾಜರಾಗುವುದು ಅರ್ಥಹೀನ, ಕನ್ನಡಿಗರ ಕಾಳಜಿಯನ್ನು ಮರೆಯಲಾಗಿದೆ. ಕರ್ನಾಟಕದ […]

ಶಿವಮೊಗ್ಗ; ಪ್ರಿಯತಮೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಯುವಕ

ಶಿವಮೊಗ್ಗ: ಯುವಕನೋರ್ವ ತನ್ನ ಪ್ರಿಯತಮೆಯನ್ನೇ ಕತ್ತುಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಕೊಲೆಯಾದವಳು. ಪ್ರಕರಣಕ್ಕೆ ಸಂಬಂದಿಸಿದಂತೆ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸೃಜನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಸೌಮ್ಯ ಮದುವೆಯಾಗುವಂತೆ ಸೃಜನ್​ನನ್ನು ಕೇಳಿಕೊಂಡಿದ್ದಳು. ಇದರಿಂದ ಸೃಜನ್ ಪ್ರಿಯತಮೆಯನ್ನೇ ಕೊಲೆ ಮಾಡಿ ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದ. ಮಗಳು ನಾಪತ್ತೆ ಹಿನ್ನೆಲೆ ಯುವತಿಯ ಪೋಷಕರು ನಾಪತ್ತೆ ಪ್ರಕರಣ […]

ಜೈಲಿನಿಂದ ಬಿಡುಗಡೆ ಬಳಿಕ ಸೂರಜ್ ರೇವಣ್ಣ ಹೇಳಿದ್ದೇನು?

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತ ಜೆಡಿಎಸ್‌ ಎಂಎಲ್‌ಸಿ ಸೂರಜ್‌ ರೇವಣ್ಣ ಅವರು ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ನೀಡಿದ ಬಳಿಕ ಜೈಲಿನಿಂದ ಹೊರ ಬಂದಿದ್ದಾರೆ. ಬಳಿಕ ಸೂರಜ್‌ ರೇವಣ್ಣ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡಿದ್ದಾರೆ. ತೇಜೋವಧೆ ಮಾಡುವ ದುರುದ್ದೇಶದಿಂದ ಕೇಸ್ ದಾಖಲಿಸಿದ್ದಾರೆ. ನಾವು ಯಾವುದಕ್ಕೂ ಹೆದರಿಕೊಂಡು ಎಲ್ಲಿಗೂ ಓಡಿ ಹೋಗಲ್ಲ.ಎರಡು ಮೂರು ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟನೆ ಕೊಡುತ್ತೇನೆ. ತನಿಖಾಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು […]

ಶಿವಮೊಗ್ಗ: ಯುವಕನ ಮೇಲೆ ಹಲ್ಲೆ ನಡೆಸಿದ ತಂಡ; ಯುವಕ ಆಸ್ಪತ್ರೆಗೆ ದಾಖಲು

-ತಬ್ರೀಜ್ ಅಹ್ಮದ್ ಹಲ್ಲೆಗೊಳಗಾದ ಯುವಕ ಶಿವಮೊಗ್ಗ; ಯುವಕನೋರ್ವನಿಗೆ ಮೂವರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಟೌನ್ ಶಿಶುಹಾರ ರಸ್ತೆಯಲ್ಲಿ ನಡೆದಿದೆ. ತಬ್ರೀಜ್ ಅಹಮ್ಮದ್ ಹಲ್ಲೆಗೊಳಗಾದ ಯುವಕ. ಇವರ ಮೇಲೆ ಪ್ರಕಾಶ್, ಮಾರುತಿ, ಮನು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಶಿಶುವಿಹಾರ ರಸ್ತೆಯಲ್ಲಿರುವ ಪಂಚಮಿ ಹೊಟೇಲ್ ಗೆ ಬಂದು ಮತ್ತೆ ವಾಪಾಸ್ಸಾಗಲು ಬೈಕ್ ಸ್ಟಾರ್ಟ್ ಮಾಡುವಾಗ ಬಂದ ಪ್ರಕಾಶ್, ಮಾರುತಿ, ಮನು, ತಬ್ರೀಜ್ ಗೆ 500 ರೂ. ಹಣ ಕೊಡುವಂತೆ ಕೇಳಿದ್ದಾರೆ. ಈ […]

ಹಿಟ್ ಆಂಡ್ ರನ್ ಗೆ 21 ವರ್ಷದ ಯುವಕ ಬಲಿ

ಹಿಟ್ ಆಂಡ್ ರನ್​ಗೆ ಯುವಕನೋರ್ವ ಬಲಿಯಾಗಿರುವ ಘಟನೆ ಬೆಂಗಳೂರು ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಡೆದಿದೆ. ಆಯುಷ್ ಅಪ್ಪಯ್ಯ (21) ಮೃತ ಯುವಕ. ಕಲ್ಪನಾ ಜಂಕ್ಷನ್ ಕಡೆಯಿಂದ ಚಂದ್ರಿಕಾ ಜಂಕ್ಷನ್ ಕಡೆಗೆ ಡಿಯೋ ಬೈಕ್​ನಲ್ಲಿ ಯುವಕ ಹೋಗುತ್ತಿದ್ದನು. ಈ ವೇಳೆ ಕನ್ನಿಂಗ್ ಹ್ಯಾಮ್ ರಸ್ತೆಯ ವಕ್ಫ್ ಬೋರ್ಡ್ ಬಳಿ ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಯುವಕನ ತಲೆಗೆ ಗಂಭೀರವಾದ ಗಾಯವಾಗಿದೆ. ಬಳಿಕ ಕೆಲವರು  ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ವೇಳೆ ಆತ […]

ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೊಡೆದಾಡಿಕೊಂಡ ಉಪನ್ಯಾಸಕರು

ಇಬ್ಬರು ಉಪನ್ಯಾಸಕರ ನಡುವೆ ಜಗಳವಾಗಿ ಹೊಡೆದಾಡಿಕೊಂಡಿರುವ ಘಟನೆ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಕೋಲಾರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಹಾಲಿ ರಾಜ್ಯಶಾಸ್ತ್ರ ಉಪನ್ಯಾಸಕ ನಾಗಾನಂದ ಕೆಂಪರಾಜು ಮತ್ತು ಕನ್ನಡ ಉನ್ಯಾಸಕ ಜೆ.ಜಿ ನಾಗರಾಜ್ ನಡುವೆ ಜಗಳ ನಡೆದಿದೆ. ಗಲಾಟೆಯಲ್ಲಿ ನಾಗರಾಜ್ ಅವರ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ನೇಹಿತರಾಗಿದ್ದ ನಾಗನಂದ ಕೆಂಪರಾಜು ಹಾಗೂ ಜೆ.ಜಿ.ನಾಗರಾಜ ಮಧ್ಯೆ  ಕಳೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ವಿಷಯವಾಗಿ ಮನಸ್ಥಾಪಗಳು […]

ಬೆಂಗಳೂರು: ಕೋರ್ಟ್ ಆವರಣದಲ್ಲಿ ವಕೀಲೆಗೆ ಚೂರಿ ಇರಿತ

ಬೆಂಗಳೂರು:  ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಲ್‌ನಲ್ಲಿ ಇಂದು ಬೆಳಗ್ಗೆ ವಕೀಲೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆರೋಪಿ ಜಯರಾಮನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಕೀಲೆ ವಿಮಾಲ ಮತ್ತು ಜಯರಾಮ ಇಬ್ಬರು ಸ್ನೇಹಿರು. ಇಬ್ಬರು ಇದ್ದ ಖಾಸಗಿ ಕ್ಷಣಗಳನ್ನು ಜಯರಾಮ್‌ ಮೊಬೈಲ್ನಲ್ಲಿ ಶೂಟ್‌ ಮಾಡಿಕೊಂಡು ಬ್ಲಾಕ್‌ ಮೇಲೆ ಮಾಡಿ  ಕೋಟಿಗಟ್ಟಲೆ ಹಣ ಪೀಕಿದ್ದಾನೆ. ನಂತರ ಜಮೀನು ವಿಷಯವಾಗಿ ಇಬ್ಬರಿಗೆ ಜಗಳವಾಗಿ ವಕೀಲೆ ವಿಮಲಾ ಶೇಷಾದ್ರಿಪುರಂ ಠಾಣೆಯಲ್ಲಿ ಜಯರಾಮ ವಿರುದ್ಧ ದೌರ್ಜನ್ಯ ಮತ್ತು […]

ವಾಲ್ಮಿಕಿ ನಿಗಮದ ಹಗರಣದಲ್ಲಿ ಸಿಎಂ, ಮಾಜಿ ಸಚಿವರ ಹೆಸರು ಹೇಳುವಂತೆ ಈಡಿ ಅಧಿಕಾರಿಗಳಿಂದ ಒತ್ತಡದ ಆರೋಪ; ದೂರು ದಾಖಲು

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಮಹತ್ತರವಾದ ಬೆಳವಣಿಗೆ ನಡೆದಿದ್ದು, ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ , ಮಾಜಿ ಸಚಿವ ನಾಗೇಂದ್ರ ಹಾಗೂ ಹಣಕಾಸು ಇಲಾಖೆಯನ್ನು ಸಿಲುಕಿಸುವಂತೆ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರಿಗೆ ಇಡಿ ಅಧಿಕಾರಿಗಳು ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಪ್ರಕರಣ ಕೂಡ ದಾಖಲಾಗಿದೆ. ಜುಲೈ 16 ರಂದು ನಡೆದ ವಿಚಾರಣೆ ವೇಳೆ ಕಣ್ಣನ್ 17 ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ […]

ಅಂಕೋಲಾ ಗುಡ್ಡೆ ಕುಸಿತ ಸ್ಥಳದಲ್ಲಿ 8ನೇ ಮೃತದೇಹ ಪತ್ತೆ

ಉತ್ತರ ಕನ್ನಡ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ದುರಂತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಇದೀಗ ಸ್ಥಳದಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಮತ್ತೊಂದು ಶವ ಪತ್ತೆಯಾಗಿದ್ದು, ಮೃತರನ್ನು ಉಳುವರೆ ಗ್ರಾಮದ ಸಣ್ಣಿ ಹನುಮತಗೌಡ (61) ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿರುವ ಸಿಬ್ಬಂದಿಗಳು ಉಳಿದ ಮೂವರ ಮೃತದೇಹದ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಈವರೆಗೆ ದುರ್ಘಟನೆಯಲ್ಲಿ 8 ಮಂದಿಯ ಮೃತದೇಹ ಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.