Breaking News :

ಗುಂಡಿಕೆರೆಯಲ್ಲಿ ಜಿಲ್ಲಾಮಟ್ಟದ ಸಾಹಿತ್ಯೋತ್ಸವಕ್ಕೆ ವರ್ಣ ರಂಜಿತಾ ಚಾಲನೆ – ಸಾಹಿತ್ಯಕ್ಕೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಇದೆ :ಕೇಶವ ಕಾಮತ್

 


ಜನವಾಹಿನಿ NEWS ಮಡಿಕೇರಿ ; ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಶಾಖಾ ಮಟ್ಟದಿಂದ ಆರಂಭಗೊಂಡು ವಲಯಮಟ್ಟ, ಜಿಲ್ಲಾಮಟ್ಟ ಹಾಗೂ ರಾಜ್ಯ ಮಟ್ಟ, ರಾಷ್ಟ್ರಿಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವಕ್ಕೆ ಗುಂಡಿಕೆರೆಯಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ರಾಜ್ಯದ ನಾನಾ ಡಿವಿಷನ್ ನಿಂದ ಆಯ್ಕೆಯಾದ ವಿದ್ಯಾರ್ಥಿಗಳು 7 ಸುಪ್ರಸಿದ್ದ ವೇದಿಕೆಯಲ್ಲಿ 160 ಕ್ಕೂ ಅಧಿಕ ಸ್ವರ್ದೆಗಳಲ್ಲಿ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ಸಾಹಿತ್ಯೋತ್ಸವದಲ್ಲಿ 10 ತೀರ್ಪುಗಾರರು ಕಾರ್ಯನಿರ್ವಹಿಸುತ್ತಿದ್ದಾರೆ .

ಗುಂಡಿಕೆರೆಯಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್ 5ಮತ್ತು 6ರಂದು ವಿಜಯನಗರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗುಂಡಿಕೆರೆ ದರ್ಗಾ ಶರೀಫ್ ನಲ್ಲಿ ಝಿಯಾರತ್ ಗೆ ಮಹಲ್ ಖತೀಬ್ ಇಲ್ಯಾಸ್ ಅಮ್ಜದಿ ನೇತೃತ್ವ ವಹಿಸಿದರು.

ಎಸ್ ಎಸ್ ಎಫ್ 14ನೇ ಆವೃತ್ತಿಯ ಸಾಹಿತ್ಯೋತ್ಸವದ ಪ್ರಯುಕ್ತ ಗುಂಡಿಕೆರೆಯಲ್ಲಿ ನಿರ್ಮಿಸಿದ 14 ದ್ವಜ ಕಂಬದಲ್ಲಿ ಧ್ವಜಾರೋಹಣವನ್ನು ಜಮಾಅತ್ ನ ಅಧ್ಯಕ್ಷರು,ಹಿರಿಯರು,ಸಂಘ ಕುಟುಂಬ ಹಾಗೂ ಸಂಘಟನೆಯ ಹಿರಿಯ ನೇತಾರರು ನೆರವೇರಿಸಿದರು.

ಎಸ್ಎಸ್ಎಫ್ ಸಾಹಿತ್ಯೋತ್ಸವದ ಮುಖ್ಯ ಪ್ರವೇಶ ದ್ವಾರವನ್ನು ಹಿರಿಯರು ಹಾಗೂ ಎಸ್ಎಸ್ಎಫ್ ಜಿಲ್ಲಾ ನೇತಾರರು ಜಂಟಿಯಾಗಿ ಉದ್ಘಾಟಿಸಿದರು.

ಎಸ್ಎಸ್ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಮಾತನಾಡಿ ಇಂದು ಅಧಿಕೃತವಾಗಿ ನಾವು 14ನೇ ಆವೃತ್ತಿಯ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿದ್ದೇವೆ, ನಾಳೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಗಣ್ಯಾತಿ ಗಣ್ಯರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.

ನಂತರ ಸಾಹಿತ್ಯೋತ್ಸವದ ಚೇರ್ಮನ್ ಅಹ್ಮದ್ ಮದನಿ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಕೂರ್ಗ್ ಜಂಇಯತ್ತುಲ್ ಉಲಮಾ ಜಿಲ್ಲಾಧ್ಯಕ್ಷ ಸಯ್ಯಿದ್ ಶಿಯಾಬುದ್ದೀನ್ ತಂಙಳ್ ಕಿಲ್ಲೂರ್ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಸಾಹಿತ್ಯವು ಜಾತಿ,ಭಾಷೆ, ರಾಜಕೀಯ ರಹಿತವಾಗಿ ನಮ್ಮ ಸಂಸ್ಕೃತಿ ನಿಷ್ಕಳಂಶ ಮನಸ್ಸನ್ನು ತೋರಿಸುವ ವಸ್ತುವಾಗಿದೆ. ವಿವಿಧ ಭಾಷೆಗಳಲ್ಲಿರುವ ಸಾಹಿತ್ಯವು ಎಲ್ಲರನ್ನೂ ಸಮಾಜದಲ್ಲಿ ಒಂದುಗೂಡಿಸುತ್ತದೆ. ಅದರಂತೆ ಎಸ್ಎಸ್ಎಫ್ ಸಂಘಟನೆ ಹಲವಾರು ವರ್ಷಗಳಿಂದ ಸಾಹಿತ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಹೊರತರಲು ನಡೆಸುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಮತೊರ್ವ ಮುಖ್ಯ ಅತಿಥಿ ಹಿರಿಯ ಸಾಹಿತಿ ನಾ.ದಿವಾಕರ್ ಮೈಸೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಧಾರ್ಮಿಕವಾಗಿ ನಡೆಸುವ ಆಚರಣೆಗಳನ್ನು ನಾವು ಸಂಸ್ಕೃತಿಯೆಂದು ಅರ್ಥೈಸುವುದು ತಪ್ಪಾಗಿದೆ. ಧರ್ಮಗಳ ಸಂಸ್ಕೃತಿಯೇ ಬೇರೆ ಜನರು ರೂಡಿಸಿಕೊಳ್ಳುತ್ತಿರುವ ಸಂಸ್ಕೃತಿಯೇ ಬೇರೆಯಾಗಿದೆ. ಅದರಂತೆ ನಮ್ಮ ದೇಶದಲ್ಲಿ ಪ್ರತಿ 200 ಕಿಲೋ ಮೀಟರ್ ಸಂಚರಿಸಿದರು ಅಲ್ಲಿನ ಜನರ ಧಾರ್ಮಿಕ ಆಚರಣೆ ಹಾಗೂ ಸಂಸ್ಕೃತಿಗಳು ಬೇರೆಯಾಗಿ ಕಾಣಲು ಸಾಧ್ಯವಿದೆ. ಇದಕ್ಕೆ ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆಯ ದೇಶವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ,ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಖಮರುದ್ದಿನ್ ಅನ್ವಾರಿ ಸಖಾಫಿ,ಗುಂಡಿಕೆರೆ ಜುಮಾ ಮಸೀದಿಯ ಅಧ್ಯಕ್ಷ ಮೊಹಮ್ಮದ್ ಹಾಜಿ ಹಾಗೂ ಮಹಲ್ ಖತೀಬ್ ಇಲ್ಯಾಸ್ ಅಮ್ಜದಿ,ಜಮಾಅತ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಸಂದರ್ಭ ಅಖಿಲ ಭಾರತ ಪತ್ರಕರ್ತರ ಸಂಘದ ಹನೀಫ್,ಎಸ್ಎಸ್ಎಫ್ ಜಿಲ್ಲಾ ಕೋಶಾಧಿಕಾರಿ ನವಾಜ್ ಮದನಿ,ಸ್ವಾಗತ ಸಮಿತಿಯ ಕನ್ವಿನರ್ ಶಫೀಕ್,ಇಸ್ಮಾಯಿಲ್ ಎಂಎಂ,ಉಸ್ಮಾನ್ ಬಾಖವಿ, ಮೊಯ್ದು ಅಹ್ಸನಿ,ಆಲಿ ಮುಸ್ಲಿಯಾರ್,ನಿವೃತ ಸೈನಿಕ ಎಂಎಸ್ ಉಮ್ಮರ್,ಆಲಿ ಮುಸ್ಲಿಯಾರ್,ಸಲೀಂ ಸಿ.ಎಂ, ಮೊಹಮ್ಮದ್ ಹಾಜಿ ಸಿಯು, ನಿಝಾರ್ ಎಂಯು,ಪತ್ರಕರ್ತ ಅಶ್ರಫ್ ಚೆಯ್ಯಂಡಾಣೆ,ಅಬೂಬಕ್ಕರ್ ಸಿಎ, ಸಿಪಿ ಆಲಿ,ಎಸ್ ಎಸ್ ಎಫ್ ಜಿಲ್ಲಾ ಪದಾಧಿಕಾರಿಗಳು, ಎಸ್ ವೈ ಎಸ್, ಕೆಎಂಜೆ, ಸಂಘ ಕುಟುಂಬದ ನೇತಾರರು, ಮತ್ತಿತರರು ಉಪಸ್ಥಿತರಿದ್ದರು.

ಗುಂಡಿಕೆರೆ ಶಾಫಿ ಜುಮಾ ಮಸೀದಿಯ ಖತೀಬ್ ಇಲ್ಯಾಸ್ ಅಮ್ಜದಿ ಪ್ರಾರ್ಥಿಸಿ, ಸಾಹಿತ್ಯೋತ್ಸವ ಸಮಿತಿ ಜಿಲ್ಲಾ ಸಂಯೋಜಕರಾದ ಇಬ್ರಾಹಿಂ ಮಾಸ್ಟರ್ ಸ್ವಾಗತಿಸಿ, ಸ್ವಾಗತ ಸಮಿತಿಯ ಕನ್ವಿನರ್ ಶಫೀಕ್ ಗುಂಡಿಕೆರೆ ಸರ್ವರನ್ನು ವಂದಿಸಿದರು.

Share this article

ಟಾಪ್ ನ್ಯೂಸ್

More News