Breaking News :

ಹೃದಯವಿದ್ರಾಹಕ ಘಟನೆ: ಮಳೆಗೆ ಗುಡ್ಡೆ ಕುಸಿದು ಇಡೀ ಕುಟುಂಬವೇ ಬಲಿ

ಕಾರವಾರ;ಅಂಕೋಲಾದ ಶಿರೂರು ಬಳಿ ಮಂಗಳೂರು ಗೋವಾಗೆ ಸಂರ್ಪಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿದು ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ.

ಮೃತರಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಐವರಿದ್ದಾರೆ. 20 ಮಂದಿ ಕಣ್ಮರೆಯಾಗಿರುವ ಶಂಕೆ ಇದ್ದು, ಭಾರೀ ಮಳೆ ನಡುವೆ ಎನ್‌ಡಿಆರ್‌ಎಫ್ ಶೋಧ ಕಾರ್ಯ ನಡೆಸಿದೆ. ಈಗಾಗಲೇ 6 ಶವ ಹೊರತೆಗೆಯಲಾಗಿದೆ. ಇಡೀ ದಿನ ನಡೆದ ಕಾರ್ಯಚರಣೆಯಲ್ಲಿ 6 ಜನರ ಮೃತ ದೇಹ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ.

ಜೀವನ ನಿರ್ವಹಣೆಗೆಂದು ಕಾರವಾರದಿಂದ ಬಂದು ಗಂಗಾವಳಿ ನದಿ ಹತ್ತಿರ ಶಿರೂರಿನಲ್ಲಿ ಟೀ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಿಸುತ್ತಿದ್ದರು. ಲಕ್ಷ್ಮಣ ನಾಯ್ಕ್ ಎಂಬುವವರ ಕುಟುಂಬವೇ ಅದು. ಆದರೆ, ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಇಡೀ ಕುಟುಂಬವೇ ಬಲಿಯಾಗಿದೆ.

ಮೃತರನ್ನು ಲಕ್ಷ್ಮಣ ನಾಯ್ಕ್, ಶಾಂತಿ ನಾಯ್ಕ್, ರೋಶನ್, ಅವಂತಿಕಾ, ಜಗನ್ನಾಥ ಎಂದು ಗುರುತಿಸಲಾಗಿದೆ. ಆದರೆ, ಈ ಕುಟುಂಬದಲ್ಲಿ ಅಂತ್ಯಕ್ರಿಯೆ ಮಾಡಲೂ ಯಾರು ಉಳಿದಿಲ್ಲ. ಸಂಬಂಧಿಕರು ಲಕ್ಷ್ಮಣ ನಾಯ್ಕ್ ಕುಟುಂಬದ ಸದಸ್ಯರ ಸಾಮೂಹಿಕ ಅಂತ್ಯಕ್ರಿಯೆ ಮಾಡುವುದಾಗಿ ಹೇಳಿದ್ದಾರೆ.

Share this article

ಟಾಪ್ ನ್ಯೂಸ್

More News