ಜನವಾಹಿನಿ News ಮಡಿಕೇರಿ : ಇದೇ ಮಾರ್ಚ್ 3 ರಂದು ಮಂಗಳವಾರ ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಾಲಯ, ಶ್ರೀ ಆಂಜನೇಯ ದೇವಾಲಯ ಹಾಗೂ ಶ್ರೀ ಕೋಟೆ ಗಣಪತಿ ದೇವಾಲಯದಲ್ಲಿ ದೇವರ ದರ್ಶನ ಹಾಗೂ ವಿವಿಧ ಸೇವೆಗಳಲ್ಲಿ ವ್ಯತ್ಯಯವಾಗಲಿದ್ದು, ಗ್ರಹಣದ ಹಿನ್ನಲೆ ದೇವಾಲಯದಲ್ಲಿ ಧಾರ್ಮಿಕ ಕ್ರಮ ಹಾಗೂ ವಿಧಿ ವಿಧಾನವನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ಭಕ್ತಾದಿಗಳು ಸಹಕರಿಸಬೇಕಾಗಿ ಶ್ರೀ ಓಂಕಾರೇಶ್ವರ ದೆವಾಲಯದ ವ್ಯವಸ್ಥಾಪನಾ ಸಮಿತಿ ಕೋರಿದೆ.
ಮಾ.3 ರಂದು ಬೆಳಗ್ಗೆ 7.30 ರಿಂದ ಬೆಳಗ್ಗೆ 9 ಗಂಟೆಯ ವರೆಗೆ ಮಾತ್ರ ದೇವಾಲಯ ಭಕ್ತರ ದರ್ಶನಕ್ಕೆ ತೆರೆದಿರಲಿದೆ. ಬೆಳಗ್ಗೆ 9 ಗಂಟೆಗೆ ಮಹಾ ಪೂಜೆ ನಡೆಯಲಿದ್ದು, ನಂತರ ದೇವಾಲಯವನ್ನು ಗ್ರಹಣ ಪ್ರಯುಕ್ತ ತೆರೆದಿರುವುದಿಲ್ಲ. ಸಂಜೆ 6.48ರ ಗ್ರಹಣ ಮೋಕ್ಷ ಕಳೆದ ನಂತರ ದೇವಾಲಯವನ್ನು ತೆರೆಯಲಾಗುವುದು. ಆದರೆ ಭಕ್ತರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ರಾತ್ರಿ 8 ಗಂಟೆಗೆ ನಡೆಯುವ ಮಹಾ ಪೂಜೆಗೆ ಪಾಲ್ಗೊಳ್ಳಲು ಭಕ್ತಾದಿಗಳಿಗೆ ಅವಕಾಶವಿದೆ.
ವಿಶೇಷ ಸೂಚನೆ: ಗ್ರಹಣ (ಗ್ರಹ) ದೋಷ ಪರಿಹಾರಕ್ಕಾಗಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಾ.4 ರಂದು ಬುಧವಾರ ಬೆಳಿಗ್ಗೆ 7.30 ಗಂಟೆಯಿಂದ ನಿತ್ಯ ಸೇವೆಗಳು ಹಾಗೂ ವಿಶೇಷವಾಗಿ ಗ್ರಹದೋಷ(ಶಾಂತಿ) ಪರಿಹಾರ ಪೂಜೆ ಸೇವೆಯನ್ನು ನೆರವೇರಿಸಲಾಗುವುದು. ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಶ್ರೀ ಓಂಕಾರೇಶ್ವರ ದೆವಾಲಯದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.







