Breaking News :

ಉಪ ಚುನಾವಣೆಯಲ್ಲಿ ಗೆಲುವು ಕೊಡಗು ಕಾಂಗ್ರೆಸ್ ನಿಂದ ವಿಜಯೋತ್ಸವ 

 

 


ಜನವಾಹಿನಿ News ಮಡಿಕೇರಿ : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಡಿಕೇರಿ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ನವರ ನೇತೃದಲ್ಲಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಧರ್ಮಜ ಉತ್ತಪ್ಪ ನವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಜನತೆ ಒಪ್ಪಿದ್ದು ಇದಕ್ಕೆ ಪೂರಕವಾಗಿ ಎರಡೂ ಕ್ಷೇತ್ರದಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದೆ.ನೆರೆಯ ಕೇರಳದಲ್ಲಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಿದ್ದು ಸಂತಸ ತಂದಿದೆ ಎಂದು ಹೇಳಿದರು.

ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ,ನಗರ ಸಭಾ ಸದಸ್ಯರುಗಳಾದ ಮಂಡಿರ ಸದಾ ಮುದ್ದಪ್ಪ,ಜಿ.ಸಿ.ಜಗದೀಶ್, ಯಾಕುಬ್, ಪ್ರಮುಖರಾದ ದಿನೇಶ್ ಶೆಟ್ಟಿ, ಲೀಲಾ ಶೇಷಮ್ಮ, ಕವನ್ ಕೊತ್ತೋಳಿ, ಕಾನೆ ಹಿತ್ಲು ಮೊಣ್ಣಪ್ಪ, ಖಲೀಲ್ ಬಾಷ, ವಿ.ಜಿ.ಮೋಹನ್, ಅರ್ಜುನ್ ಟಿ.ಆರ್, ಮುನೀರ್ ಮಾಚರ್,ಶ್ರೀಮತಿ ಶಶಿ,ಶರಣ್ ಕೆ,ಮೀನಾಜ್ ಪ್ರವೀಣ್, ಕೋಚನ ಚೇತನ,ಮಮ್ತಾಜ್ ಬೇಗಂ.ಪ್ರೇಮಾ ಲಿಂಗಪ್ಪ,ರಾಜು, ಕೌಸರ್, ರವಿಪಾಪು, ಹಬೀಬ್, ಸಂಪತ್, ಅನ್ಫಾಲ್, ಸೇರಿದಂತೆ ಪ್ರಮುಖರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.

Share this article

ಟಾಪ್ ನ್ಯೂಸ್