ಜನವಾಹಿನಿ News ಪಾಲಿಬೆಟ್ಟ : ಯಂಗ್ ಇಂಡಿಯಾ ಯೂತ್ ಕ್ಲಬ್ ನ ಸುವರ್ಣ ಮಹೋತ್ಸವದ ಅಂಗವಾಗಿ ರಾಷ್ಟ ಮಟ್ಟದ ಸೂಪರ್ ಫೈ ಕಾಲ್ಚೆಂಡು ಕ್ರೀಡಾ ಹಬ್ಬಕ್ಕೆ ವರಣರಂಜಿತ ತೆರೆಕಂಡಿದೆ.
ಪಾಲಿಬೆಟ್ಟ ಸಾರ್ವಜನಿಕ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯ ಅಂತಿಮ ಫೈನಲ್ ಪಂದ್ಯಾಟದಲ್ಲಿ ಕ್ಲಾಸಿಕ್ ಸ್ಪೋರ್ಟ್ ಕ್ಲಬ್ ಮತ್ತು ರೆಡ್ ಯುನೈಟೆಡ್ ಊಟಿ ತಂಡದ ನಡುವೆ ನಡೆದ ರೋಮಾಂಚನಕಾರಿ ಪಂದ್ಯಾವಳಿಯಲ್ಲಿ 3-0 ಗೋಲುಗಳಿಂದ ರೆಡ್ ಯುನೈಟೆಡ್ ಊಟಿ ತಂಡ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟವನ್ನ ತನ್ನದಾಗಿಸಿಕೊಂಡರೆ. ಅಂತಿಮ ಪಂದ್ಯಾವಳಿಯಲ್ಲಿ ಗೋಣಿಕೊಪ್ಪ ಕ್ಲಾಸಿಕ್ ಸ್ಪೋರ್ಟ್ ಕ್ಲಬ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.
ಸೆಮಿಫೈನಲ್ ನಲ್ಲಿ ಮಂಗಳೂರು ಯುನೈಟೆಡ್ ಮುತ್ತು ಸುಲ್ತಾನ್ ಬ್ರದರ್ಸ್ ಕಂಡಕ್ಕರೆ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಸುಲ್ತಾನ್ ಬ್ರದರ್ಸ್ ಕಂಡಕ್ಕರೆ ತಂಡ ತೃತೀಯ ಸ್ಥಾನವನ್ನು ಪಡೆದರೆ ಮಂಗಳೂರು ಯುನೈಟೆಡ್ ನಾಲ್ಕನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮೂರು ದಿನಗಳ ಕಲ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಂದ 30ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದರು.
ಮಂಜು ಮುಸುಕಿನ ವಾತಾವರಣದೊಂದಿಗೆ ಚುಮುಚುಮು ಚಳಿಯನ್ನು ಲೆಕ್ಕಿಸದೆ ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಫುಟ್ಬಾಲ್ ಪಂದ್ಯಾವಳಿಯನ್ನು ವೀಕ್ಷಿಸುವುದರೊಂದಿಗೆ ವಿವಿಧ ರಾಜ್ಯಗಳಿಂದ ಆಗಮಿಸಿದ ಕ್ರೀಡಾಪಟುಗಳಿಗೆ ಸಿಳ್ಳೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ದೀಪಾ ಅಲಂಕಾರದಿಂದ ಕಂಗೊಳಿಸುತ್ತಿದ್ದ ಮೈದಾನದಲ್ಲಿ ಫುಟ್ಬಾಲ್ ಹಬ್ಬದ ವಾತಾವರಣ ಕಂಡು ಬಂದಿತ್ತು.
ಸಮರೂಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೂನ್ನಣ್ಣ ಸಮಾರಂಭ ಉದ್ದೇಶಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಇಂತಹ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿ ವಿವಿಧ ರಾಜ್ಯದ ಆಟಗಾರರನ್ನು ಜಿಲ್ಲೆಗೆ ಪರಿಚಯಿಸುವ ಮೂಲಕ ಸ್ಥಳೀಯ ಆಟಗಾರರಿಗೆ ಉತ್ತೇಜನ ನೀಡುವುದರೊಂದಿಗೆ ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇತ್ತೀಚಿನ ದಿನಗಳಲ್ಲಿ ಫುಟ್ಬಾಲ್ ಪಂದ್ಯಾಟ ವ್ಯಾಪಕ ಮನ್ನಣೆ ಪಡೆಯುತ್ತಿದ್ದು, ಗ್ರಾಮೀಣ ಭಾಗದ ಕ್ರೀಡಾಪಟುಗಳು ಕ್ರೀಡಾ ಚಟುವಟಿಗಳ ಮೂಲಕ ಸಾಧಿಸುವ ಛಲದೊಂದಿಗೆ ಕ್ರೀಡಾಭಿಮಾನದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದ ಅವರು 55 ವರ್ಷ ಪೂರೈಸಿರುವ ಯಂಗ್ ಇಂಡಿಯಾ ಯೂತ್ ಕ್ಲಬ್ ನಾ ಹೊಸ ಕಟ್ಟಡ ನಿರ್ಮಾಣ ಅಭಿವೃದ್ಧಿಗೆ ಶಾಸಕರ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಯಂಗ್ ಇಂಡಿಯಾ ಯುವಕ ಸಂಘದ ಅಧ್ಯಕ್ಷರು ಸಲೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ಕೆ ಆರ್ ಸುನಿ ಗೋಣಿಕೊಪ್ಪ, ಪೂನ್ನಂಪೆಟ್ಟೆಯ ಮಾಚಂಗಡ ಮುತ್ತಣ್ಣ, ಅವರನ್ನ ಸನ್ಮಾನಿಸಿ ಗೌರವಿಸಲಾಯಿತು
ಮುಖ್ಯ ಅತಿಥಿಗಳಾಗಿ ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದ ಕಾರ್ತಿ ಪಿ ಚಿದಂಬರಂ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮೂಕಂಡ ವಿಜು ಸುಬ್ರಮಣಿ, ಗಣೇಶ್, ಹುಣಸೂರು ನಗರ ಸಭಾ ಸದಸ್ಯ ರಮೇಶ್ ಹೆಜ್ಜೂರ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ,ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಅಧ್ಯಕ್ಷ ರಫೀಕ್,ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ನಾಸಿರ್,ವೆಂಕಟೇಶ್, ಸಮಾಜ ಸೇವಕರಾದ ಮದನ್ ಮಾದೇಶ್, ನಂದನ್ ಮಾದೇಶ್, ರತ್ನ ಸುಬ್ಬಯ್ಯ, ವಿನು ಸೋಮಣ್ಣ, ಯಾರಮು ಹಾಜಿ, ಚೇಕು ವಿರಾಜಪೇಟೆ, ಹಂಸ ಅಮ್ಮತಿ, ಅನಿಲ್ ಅಮ್ಮತಿ, ಅಂಜನ್ ಚಿನ್ನಪ್ಪ,ಕಾಳಪ್ಪ ಸೇರಿದಂತೆ ಯಂಗ್ ಇಂಡಿಯಾ ಯೂಥ್ ಕ್ಲಬ್ ನ ಪದಾಧಿಕಾರಿಗಳು, ಸಮಾಜ ಸೇವಕರು, ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಆಟಗಾರರಿಗೆ ಬಹುಮಾನ ವಿತರಣೆ ಮಾಡಲಾಯಿತು.








