ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಗೆ ನೂತನ ಪದಾಧಿಕಾರಿಗಳ ನೇಮಕ -ಅಧ್ಯಕ್ಷರಾಗಿ ಕುಂಡಂಡ ಸಫಾ ಮಹಮ್ಮದ್ ಹಾಜಿ ಆಯ್ಕೆ

ಜನವಾಹಿನಿ NEWS ಚೆಯ್ಯಂಡಾಣೆ : ಕುಂಜಿಲ ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ನೂತನ ಅಧ್ಯಕ್ಷರಾಗಿ ಕುಂಡಂಡ ಸಫಾ ಮಹಮ್ಮದ್ ಹಾಜಿ ನೇಮಕವಾಗಿದ್ದಾರೆ. ಕುಂಜಿಲ ಪೈನರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಎಂ.ಎ.ಶೌಕತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಉಪಾದ್ಯಕ್ಷರಾಗಿ ಮುಸ್ತು ಬಾರಿಕೆ, ಕಾರ್ಯದರ್ಶಿಯಾಗಿ ಶರೀಫ್ ಪೊಯಕ್ಕರೆ, ಕೋಶಾದಿಕಾರಿಯಾಗಿ ರಶೀದ್ ವಯಕೋಲ್, ರೌಲತುಲ್ ಉಲೂಮ್ ದರ್ಸ್ ಸಮಿತಿ ಅಧ್ಯಕ್ಷರಾಗಿ ಹಾರಿಸ್ ಝೖನಿ, ಕಾರ್ಯದರ್ಶಶಿಯಾಗಿ ಸಾಜಿದ್ ಪಯ್ಯಡಿ, ಕೋಶಾಧಿಕಾರಿಯಾಗಿ […]
ಮರ ಕಪಾತ್ ವೇಳೆ ವಿದ್ಯುತ್ ತಂತಿ ತಗುಲಿ ಬೆಳೆಗಾರ ಸಾವು

ಜನವಾಹಿನಿ NEWS ವಿರಾಜಪೇಟೆ : ಮರ ಕಡಿಯುವ ವೇಳೆ 11 ಕೆವಿ ವಿದ್ಯುತ್ ತಂತಿ ಸ್ಪರ್ಶಿಸಿ ಬೆಳೆಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಿಟ್ಟಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡನೇ ರುದ್ರಗುಪ್ಪೆ ಜೋಡು ಭಗವತಿ ದೇವಾಲಯದ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿ ಬೆಳೆಗಾರ ಕೊಂಗಂಡ ಅರುಣ (52) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಅರುಣ ಅವರು ಮರ ಕಡಿಯುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಮರವು ಸಮೀಪದ 11 ಕೆವಿ ವಿದ್ಯುತ್ ತಂತಿಯ […]
ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿ : ಕೊಡಗು ತಂಡಕ್ಕೆ ಸತತ ಎರಡು ಭರ್ಜರಿ ಜಯ

ಜನವಾಹಿನಿ NEWS ತುಮಕೂರು : ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ತುಮಕೂರಿನ ಎಂ.ಜಿ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಫುಟ್‌ಬಾಲ್ ತಂಡವು ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಪ್ರಶಸ್ತಿಯತ್ತ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ತುಮಕೂರು ತಂಡವನ್ನು ಎದುರಿಸಿದ ಕೊಡಗು ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ 8-0 ಗೋಲುಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು. ತಂಡದ ಪರ ಸಬಿತ್ ಎರಡು ಗೋಲು, ಸವಾದ್ […]
ಧಾರಾಕಾರ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಸಂಪೂರ್ಣ ಹಾನಿ ; ಮನೆಯೊಳಗೆ ಯಾರೂ ಇಲ್ಲದಿದ್ದರಿಂದ ತಪ್ಪಿದ ಬಾರಿ ಅನಾಹುತ

ಜನವಾಹಿನಿ NEWS ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಮನೆಗಳಿಗೆ ಹಾನಿ ಉಂಟಾಗುತ್ತಿದ್ದು, ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ಮನೆಯೊಂದರ ಮೇಲ್ಛಾವಣಿ ಕುಸಿದು ಸಂಪೂರ್ಣ ಹಾನಿಗೊಳಗಾದ ಘಟನೆ ನಡೆದಿದೆ. ಹುಲಿತಾಳ ಗ್ರಾಮದ ನಿವಾಸಿ ಎಚ್.ಟಿ. ಜಾನಕಿ ಅವರ ಮನೆ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕುಸಿದಿದೆ. ಮನೆಯ ಮೇಲ್ಛಾವಣಿಯ ಹಾಗೂ ಹಂಚಿನ ಚಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ ಮನೆಯೊಳಗಿನ ಪೀಠೋಪಕರಣಗಳು ಮತ್ತು ಇತರೆ ಗೃಹೋಪಯೋಗಿ ವಸ್ತುಗಳು ಜಖಂಗೊಂಡಿವೆ. ಘಟನೆ ನಡೆದ ವೇಳೆ ಮನೆಯೊಳಗೆ […]
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ..!

ಜನವಾಹಿನಿ NEWS ಮೂರ್ನಾಡು : ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ, ಕಾರು ಸಂಪೂರ್ಣ ಜಖಂಗೊಂಡಿದ್ದು , ಚಾಲಕನ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿರುವ ಘಟನೆ ಮೂರ್ನಾಡು ವ್ಯಾಪ್ತಿಯ ಕೊಂಡಗೇರಿ ಮಾರ್ಗದಲ್ಲಿ ನಡೆದಿದೆ. ಕೊಂಡಂಗೇರಿ ಐಕೋಳ ಮಾರ್ಗದಲ್ಲಿ ತನ್ನ ಓಮ್ನಿ ಕಾರಿನಲ್ಲಿ ತೆರಳುತ್ತಿದ ಅಲಿ ಎಂಬುವವರ ಕಾರಿನ ಮೇಲೆ ದೊಡ್ಡ ಗಾತ್ರದ ಮರವೊಂದು ಬಿದ್ದ ಪರಿಣಾಮ ಅಲಿ ಎಂಬುವವರ ತಲೆಗೆ ಗಂಬೀರ ಗಾಯಗೊಂಡು ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನೂ ಘಟನೆಯಲ್ಲಿ ಓಮ್ನಿ […]
SIR ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ

ಜನವಾಹಿನಿ NEWS ಮಡಿಕೇರಿ : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಎಸ್‌ಐಆರ್‌ನಲ್ಲಿ ಅಗತ್ಯ ದಾಖಲೆಗಳಿಲ್ಲದ ಕಾರಣ ಜಿಲ್ಲೆಯ ಆದಿವಾಸಿ, ದಲಿತ ಮತ್ತು ಬಡ ಸಮುದಾಯದ ಸುಮಾರು 7 ಸಾವಿರ ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಭೀತಿ ಇದೆ. ಇದನ್ನು ಖಂಡಿಸಿ ಸಿಐಟಿಯು, ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿ ಮತ್ತು ಕೃಷಿ ಕೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನೂರಾರು ಮಂದಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮತದಾನದ ಹಕ್ಕು ಉಳಿಸಿ” ಎಂಬ ಘೋಷಣೆ ಕೂಗಿದ ಪ್ರತಿಭಟನಾಕಾರರು, […]
ಕೊಡಗು : ಕೆರೆಯಲ್ಲಿ ಸಿಲುಕ್ಕಿ ನರಳಾಡಿದ ಕಾಡಾನೆ ಕೊನೆಗೂ ಸುರಕ್ಷಿತವಾಗಿ ದಡ ಸೇರಿ ಕಾಡಿನತ್ತ ಪಯಣ

ಜನವಾಹಿನಿ NEWS ತಿತಿಮತಿ : ಪೊನ್ನಂಪೇಟೆ ತಾಲೂಕಿನ ತಿತ್ತಿಮತಿ ಸಮೀಪದ ಕನ್ನಂಬಾಡಿ ಗ್ರಾಮದ ಖಾಸಗಿ ತೋಟದ ಕರೆಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡು 24 ಗಂಟೆಗೂ ಅಧಿಕ ಸಮಯ ನರಳುತ್ತಿದ್ದ ಸುಮಾರು 35 ವರ್ಷದ ಕಾಡಾನೆ, ಕೊನೆಗೂ ಯಾವುದೇ ಪ್ರಾಣಾಪಾಯವಿಲ್ಲದೆ ತನ್ನಷ್ಟಕ್ಕೇ ತಾನೆ ಕೆರೆಯಿಂದ ಸುರಕ್ಷಿತವಾಗಿ ಮೇಲೆ ಬಂದು ಕಾಡಿನತ್ತ ತೆರಳಿದೆ. ಆರಂಭದಲ್ಲಿ ರಕ್ಷಣಾ ಕಾರ್ಯ ವಿಳಂಬವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರೂ, ಬಳಿಕ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಆನೆಯ ಚಲನವಲನಗಳ ಮೇಲೆ […]
ಬ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ : ಮಳೆ ಮೈದುಂಬಿ ಹರಿಯುತ್ತಿರೋ ಕಾವೇರಿ : ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಳ

ಜನವಾಹಿನಿ NEWS ಭಾಗಮಂಡಲ : ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ನೀರಿನ ಹರಿವು ಹೆಚ್ಚಿದ ಪರಿಣಾಮ ತ್ರಿವೇಣಿ ಸಂಗಮದ ಉದ್ಯಾನವನ ಸಂಪೂರ್ಣ ಜಲಾವೃತಗೊಂಡಿದ್ದು, ಸುತ್ತಮುತ್ತಲಿನ ಕೃಷಿ ಗದ್ದೆಗಳಿಗೂ ನೀರು ನುಗ್ಗಿದೆ. ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇರುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ನಾಪೋಕ್ಲು […]
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಡಿಜಿ ಪೇ ಸೇವೆಗೆ ಚಾಲನೆ

ಜನವಾಹಿನಿ NEWS ಸಿದ್ದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಮಡಿಕೇರಿ ತಾಲೂಕು ವ್ಯಾಪ್ತಿಯ ಸಿದ್ದಾಪುರ ವಲಯದ ಕಾರ್ಯಕ್ಷೇತ್ರದಲ್ಲಿ ನೂತನ ಡಿಜಿಟಲ್ ಪೇ ಸೇವೆಗೆ ಪಟ್ಟಣದ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇದೇ ಪ್ರಥಮ ಬಾರಿಗೆ ಆರಂಭಗೊಂಡಿರುವ ಡಿಜಿ ಪೇ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ಪುರುಷೋತ್ತಮ, ಡಿಜಿ ಪೇ ಸೇವೆಯು ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಸಹಕಾರಿಯಾಗಲಿದೆ. ವಾರದ ನಗದು ಸಂಗ್ರಹಣೆ ದಿನದಂದು ಸದಸ್ಯರು ತಮ್ಮ ಎಟಿಎಂ […]
ಕೊಡಗು ಪತ್ರಕರ್ತ ಸಂಘದ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ಆಶ್ರಫ್ ಗೆ ನರಿಯಂದಡ ಗ್ರಾ.ಪಂ.ನಿಂದ ಸನ್ಮಾನ

ಜನವಾಹಿನಿ NEWS ಚೆಯ್ಯಂಡಾಣೆ : ಕೊಡಗು ಪತ್ರಕರ್ತ ಸಂಘ(ರಿ)ದಿಂದ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಯನ್ನು ಸ್ವೀಕರಿಸಿದ ಪತ್ರಕರ್ತ ಅಶ್ರಫ್ ಅವರನ್ನು ನರಿಯಂದಡ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಅವರು ಮಾತನಾಡಿ ಪತ್ರಕರ್ತ ಅಶ್ರಫ್ ಅವರು ಕಳೆದ 5 ವರ್ಷದಿಂದ ನಮ್ಮೊಡನೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.ಈ ವರ್ಷ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಭವಾನಿಯವರ ಕುರಿತು ಮಾನವೀಯ ವರದಿಯನ್ನು […]