Breaking News :

ಎರಡು ದಿನಗಳಿಂದ ಕೆರೆಯಲ್ಲಿ ಸಿಲುಕಿ ಆಹಾರವಿಲ್ಲದೇ ನರಳಾಡುತ್ತಿರೋ ಆನೆ ಮರಿ : ಇಲಾಖೆ ನೀರಿಲಕ್ಷ್ಯಕ್ಕೆ ಬಲಿಯಾಗುವುದೇ ಗಜರಾಜ…!

  ಜನವಾಹಿನಿ NEWS ಮಡಿಕೇರಿ : ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತ್ತಿಮತಿ ಸಮೀಪದ ಕನ್ನಂಬಾಡಿ (ದೇವರಪುರ ವ್ಯಾಪ್ತಿ) ಕೆರೆಯಲ್ಲಿ ಕಾಡಾನೆ ಸಿಲುಕಿಕೊಂಡು ಪರದಾಡುತ್ತಿರುವ ಘಟನೆ ವರದಿಯಾಗಿದೆ. ಕೆಸರು ಮತ್ತು ನೀರಿನ ಆಳದಿಂದಾಗಿ ಆನೆಯು ದಡ ಸೇರಲಾಗದೆ ಸುಮಾರು ೨೪ ಗಂಟೆಗಳಿಗೂ ಹೆಚ್ಚು ಕಾಲ ನರಳಾಡಿದ್ದು, ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರವಿಲ್ಲದೇ ಒದ್ದಾಡುತ್ತಿರುವ ಮರಿ ಆನೆ ಕೆರೆಯಲ್ಲಿ ಸಿಲುಕಿರುವ ಈ ಮರಿ ಆನೆಯು ಕಳೆದ ಎರಡು ದಿನಗಳಿಂದ ಆಹಾರ ಮತ್ತು ವಿಶ್ರಾಂತಿಯಿಲ್ಲದೆ ಕೇವಲ […]

ಜುಲೈ 12ರವರೆಗೆ ಮಡಿಕೇರಿ ರಾಜಾಸೀಟ್ ಉದ್ಯಾನಕ್ಕೆ ಪ್ರವೇಶ ನಿರ್ಬಂಧ

  ಜನವಾಹಿನಿ NEWS ಮಡಿಕೇರಿ: ನಗರದ ಪ್ರಖ್ಯಾತ ಪ್ರವಾಸಿತಾಣ ರಾಜಾಸೀಟ್ ಉದ್ಯಾನಕ್ಕೆ ಜುಲೈ 12ರವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ ಬದಿ ಕುಸಿದು ಸಂಚಾರ ನಿರ್ಬಂಧಿಸಿರುವುದರಿಂದ ರಾಜಾಸೀಟ್ ಉದ್ಯಾನದ ರಸ್ತೆಯಲ್ಲಿ ಬಸ್ ಗಳು ಸಂಚರಿಸುತ್ತಿವೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಸಂಚಾರದಟ್ಟಣೆ ಅಧಿಕವಾಗಿದೆ. ಹಾಗಾಗಿ 12ರವರೆಗೆ ರಾಜಾಸೀಟ್ ಉದ್ಯಾನಕ್ಕೆ ಪ್ರವಾಸಿಗರ ಪ್ರವೇಶ ಮತ್ತು ಉದ್ಯಾನದ ಮುಂದೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ವಿದೇಶದಲ್ಲಿರುವ ಭಾರತೀಯರ ಪಾಸ್‌ಪೋರ್ಟ್ ಶುಲ್ಕ ಹೆಚ್ಚಳವನ್ನು ಮರುಪರಿಶೀಲಿಸಬೇಕು: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)

    ಜನವಾಹಿನಿ NEWS ಮಡಿಕೇರಿ : ಪ್ರವಾಸಿ ಭಾರತೀಯರಿಗಾಗಿ ನ್ಯಾಯಸಮ್ಮತ ಮತ್ತು ಕೈಗೆಟುಕುವ ಪಾಸ್‌ಪೋರ್ಟ್ ಶುಲ್ಕ ನೀತಿಯನ್ನು ಜಾರಿಗೊಳಿಸಲು ಕೆಸಿಎಫ್ ಕೇಂದ್ರ ಸರ್ಕಾರಕ್ಕೆ ಮನವಿ ದಿನಾಂಕ: 1 ಜುಲೈ 2026 ವಿದೇಶಗಳಲ್ಲಿ ವಾಸಿಸುವ ಭಾರತೀಯ ನಾಗರಿಕರಿಗೆ ಅನ್ವಯವಾಗುವ ಪಾಸ್‌ಪೋರ್ಟ್ ಸೇವಾ ಶುಲ್ಕದಲ್ಲಿ ಇತ್ತೀಚೆಗೆ ಮಾಡಿರುವ ಭಾರೀ ಹೆಚ್ಚಳವನ್ನು ತಕ್ಷಣ ಮರುಪರಿಶೀಲಿಸಬೇಕು ಹಾಗೂ ಪ್ರವಾಸಿ ಭಾರತೀಯರಿಗೆ ವಿಧಿಸಲಾಗುತ್ತಿರುವ ಪಾಸ್‌ಪೋರ್ಟ್ ಶುಲ್ಕದಲ್ಲಿ ಕನಿಷ್ಠ 50 ಶೇಕಡಾ ಕಡಿತ ಮಾಡಬೇಕು ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕೇಂದ್ರ ಸರ್ಕಾರವನ್ನು […]

ಡಾ ಅದಿತಿ.ಎಂ.ವಿ ರವರಿಗೆ ಚಿನ್ನದ ಪದಕ

  ಜನವಾಹಿನಿ NEWS ಮಡಿಕೇರಿ : ವಿರಾಜಪೇಟೆ ತಾಲೂಕು ಪುಲಿಯೇರಿ ಗ್ರಾಮದ ನಿವೃತ್ತ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡ) ಅಧಿಕಾರಿ ಎಂ. ವಿದ್ಯಾಧರನ್ ಹಾಗೂ ಪೋಸ್ಟ್ ಮಾಸ್ಟರ್ ಸುಧಾ. ಪಿ.ಎಸ್. ದಂಪತಿಯವರ ಪುತ್ರಿ ಡಾ. ಅದಿತಿ ಎಂ. ವಿ. ಅವರು ವೈದ್ಯಕೀಯ ರಂಗದ ಫಾರ್ಮ ಡಿ ವಿಭಾಗದಲ್ಲಿ ಅತ್ಯಧಿಕ ಅಂಕಗಳೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ.  

ಕಾಡಾನೆ ಹಾವಳಿ ತಡೆಗೆ ವಿಫಲ, ರೈತರ ಕಡೆಗಣನೆ ಆರೋಪ : ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ, ವಾಹನ ಜಾಥಾ

  ಜನವಾಹಿನಿ NEWS ಮಡಿಕೇರಿ : ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾಗೂ ಮಾನವ ಸಂಘರ್ಷವನ್ನು ತಡೆಯಲು ವಿಫಲವಾದ ಹಾಗೂ ರೈತರನ್ನು ಕಡೆಗಣಿಸಿರುವ ರಾಜ್ಯ ಸರ್ಕಾರದ ದೋರಣೆಯ ವಿರುದ್ಧ ಸೋಮವಾರ ಬೃಹತ್ ಜನಾಕ್ರೋಶ ವಾಹನ ಜಾಥಾ ಹಾಗೂ ಪ್ರತಿಭಟನಾ ಸಭೆ ಮಡಿಕೇರಿ ನಗರದಲ್ಲಿ ನಡೆಯಿತು. ಜಿಲ್ಲೆಯ ಭಾಗಮಂಡಲ, ಸೋಮವಾರಪೇಟೆ, ಕುಟ್ಟ, ಸಿದ್ದಾಪುರ, ತೊರೆನೂರು ವ್ಯಾಪ್ತಿಯಿಂದ ನೂರಾರು ವಾಹನಗಳ ಮೂಲಕ ಕಾರ್ಯಕರ್ತರು, ರೈತರೊಂದಿಗೆ ವಾಹನ ಜಾಥಾ ಮೂಲಕ ಆಗಮಿಸಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡರು. ಈ ಸಂದರ್ಭ ಕೊಡಗು ಮತ್ತು […]

ಮುರಿದು ಬಿದ್ದಿರೋ ತಾಲ್ಲೂಕು ಮೈದಾನದ ಗೇಟ್ : ಜೆಡಿಎಸ್ ನಿಂದ ಕಳಪೆ ಕಾಮಗಾರಿ ಆರೋಪ   

  ಜನವಾಹಿನಿ NEWS ವಿರಾಜಪೇಟೆ : ನವೀಕರಣಗೊಳಿಸಿದ ವಿರಾಜಪೇಟೆ ತಾಲ್ಲೂಕು ಆಟದ ಮೈದಾನದ ಮುಖ್ಯ ದ್ವಾರದಲ್ಲಿ ಆಳವಾಡಿಸಲಾಗಿದ್ದ ಕಬ್ಬಿಣದ ಗೇಟ್ ಇದೀಗ ಕೇವಲ ಎರಡು ವರ್ಷಗಳಲ್ಲೇ ಮುರಿದು ಬಿದ್ದಿದೆ. ತಾಲ್ಲೂಕು ಆಡಳಿತ ಕಚೇರಿ ಸಮೀಪದಲ್ಲಿರುವ ಈ ಮೈದಾನವನ್ನು ಪ್ರತಿದಿನ ಹಲವಾರು ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಬಳಸುತ್ತಾರೆ. ಇಂತಹ ಪ್ರಮುಖ ಸ್ಥಳದಲ್ಲೇ ಗೇಟ್ ಮುರಿದು ಬಿದ್ದಿದ್ದರೂ ಸಂಬಂಧಪಟ್ಟ ಇಲಾಖೆ ಇದುವರೆಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲ ಇದರಿಂದ ಸಾರ್ವಜನಿಕರ ಸುರಕ್ಷತೆಯೂ ಪ್ರಶ್ನಾರ್ಹವಾಗಿದೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ […]

ಮಡಿಕೇರಿಯಲ್ಲಿ ಎ.ಐ.ಕೆ.ಎಂ.ಸಿ.ಸಿ ಘಟಕ ಉದ್ಘಾಟನೆ : ಸಚಿವ ಯು.ಟಿ.ಖಾದರ್ ರವರಿಂದ ಚಾಲನೆ

    ಜನವಾಹಿನಿ NEWS ಮಡಿಕೇರಿ : ಆರೋಗ್ಯ ಕ್ಷೇತ್ರದಲ್ಲಿ ದೇಶದ್ಯಾದಂತ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಎ.ಐ.ಕೆ.ಎಂ.ಸಿ.ಸಿ ಸಂಸ್ಥೆಯ ಮಡಿಕೇರಿ ಘಟಕವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಯು.ಟಿ.ಖಾದರ್ ರವರು ಇಂದು ಮಡಿಕೇರಿಯಲ್ಲಿ ಲೋಕಾರ್ಪಣೆ ಮಾಡಿದರು. ಉತ್ತಮ ಆರೋಗ್ಯ ಪಡೆಯುವುದು ಪ್ರತಿಯೊಬ್ಬ ಮನುಷ್ಯನ ಅಜನ್ಮ ಸಿದ್ದ ಹಕ್ಕಾಗಿದೆ.ವ್ಯಕ್ತಿ ಆರೋಗ್ಯ ವಂತನಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.ಈ ನಿಟ್ಟಿನಲ್ಲಿ ಎ.ಐ.ಕೆ.ಎಂ.ಸಿ.ಸಿ. ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಸಂಘ […]

ಮಲ್ಲಳ್ಳಿ ಜಲಪಾತದಲ್ಲಿ ಸಿಲುಕಿದ್ದ ಇಬ್ಬರು ವಿದ್ಯಾರ್ಥಿಗಳ ರಕ್ಷಣೆ

  ಜನವಾಹಿನಿ NEWS ಮಡಿಕೇರಿ :  ಫೋಟೋ ಕ್ಲಿಕ್ಕಿಸಲು ಹೋಗಿ ನೀರಿನ ಭಾರಿ ಹರಿವಿನ ಮಧ್ಯೆ ಸಿಲುಕಿದ್ದ ಬೆಂಗಳೂರಿನ ಆಂಧ್ರ ಮೂಲದ ವಿದ್ಯಾರ್ಥಿಗಳಾದ ಸಂತೋಷ್ ಕುಮಾರ್ ಮತ್ತು ಗಣೇಶ್ ನಾಯಕ್ ಅವರನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಹಗ್ಗದ ಮುಖಾಂತರ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸದ್ಯ ಇಬ್ಬರೂ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಡಾ.ಬಾಬು ಜಗಜೀವನ್ ರಾಂ ಅವರ 40ನೇ ಪುಣ್ಯಸ್ಮರಣೆ 

  ಜನವಾಹಿನಿ NEWS ಮಡಿಕೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಸಿರು ಕ್ರಾಂತೀಯ ಹರಿಕಾರ ಡಾ.ಬಾಬು ಜಗಜೀವನ್‍ರಾಂ ಅವರ 40 ನೇ ಪುಣ್ಯಸ್ಮರಣಾ ಕಾರ್ಯಕ್ರಮವು ಸೋಮವಾರ ಸರಳವಾಗಿ ಆಚರಿಸಲಾಯಿತು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ, ನಗರಸಭೆ ಸದಸ್ಯರಾದ ಸತೀಶ್, […]

ಸ್ಕೂಟಿ ಮೇಲೆ ಮರ ಬಿದ್ದು ಮಹಿಳೆಗೆ ಗಾಯ

  ಜನವಾಹಿನಿ NEWS ವಿರಾಜಪೇಟೆ : ಚಲಿಸುತ್ತಿದ್ದ ಸ್ಕೂಟಿ ಮೇಲೆ ಗಾಳಿ ಮಳೆಯಿಂದಾಗಿ ಮರ ಬಿದ್ದ ಪರಿಣಾಮ ಸ್ಕೂಟಿಯಲ್ಲಿದ್ದ ಮಹಿಳೆ ಗಾಯಗೊಂಡಿರುವ ಘಟನೆ ವಿರಾಜಪೇಟೆ ತಾಲೂಕು ವ್ಯಾಪ್ತಿಯ ಬೇಟೋಳಿ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಸಿಂಧು ಎಂಬುವವರು ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಸ್ಕೂಟಿ ಮೇಲೆ ಮರ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಇವರಿಗೆ ವಿರಾಜಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.