ಕೆಎಸ್‌ಎಫ್‌ಎ ಅಂತರ ಜಿಲ್ಲಾ ಫುಟ್‌ಬಾಲ್ ಟೂರ್ನಿಗೆ ಕೊಡಗು ತಂಡ ಪ್ರಕಟ : ವಿಜೇಶ್‌ಗೆ ನಾಯಕತ್ವ

ಜುಲೈ 7ರಿಂದ ತುಮಕೂರಿನಲ್ಲಿ ನಡೆಯಲಿರುವ ಅಂತರ್ ಜಿಲ್ಲಾ ಪಂದ್ಯಾವಳಿ ಜನವಾಹಿನಿ NEWS ಮಡಿಕೇರಿ : ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (KSFA) ಆಶ್ರಯದಲ್ಲಿ ತುಮಕೂರಿನಲ್ಲಿ ಜುಲೈ 7ರಿಂದ 17ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿಗೆ ಕೊಡಗು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (KDFA) ತನ್ನ 18 ಸದಸ್ಯರ ತಂಡವನ್ನು ಶುಕ್ರವಾರ ಅಮ್ಮತ್ತಿ ಮೈದಾನದಲ್ಲಿ ಅಧಿಕೃತವಾಗಿ ಪ್ರಕಟಿಸಿತು. ಜಿಲ್ಲೆಯ ವಿವಿಧ ಭಾಗಗಳಿಂದ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಈ ಬಾರಿ ಕೊಡಗು ತಂಡ ಉತ್ತಮ […]
ಪ್ರಧಾನಿ ನರೇಂದ್ರ ಮೋದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿ ವಿರುದ್ಧ ದೂರು ದಾಖಲು

ಜನವಾಹಿನಿ NEWS ಪೊನ್ನಂಪೇಟೆ : ದೇಶದ ಪ್ರಧಾನಿಯನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿದ ವ್ಯಕ್ತಿಯ ವಿರುದ್ಧ ಪೊನ್ನಂಪೇಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇಶದ ಪ್ರಧಾನಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸಂಬಂಧ ಮಾಜಿ BSNL ಕೆಲಸಗಾರ ಪವಿತ್ರನ್ ಎಂಬುವವರ ವಿರುದ್ದ ಬಿಜೆಪಿ ಪ್ರಮುಖರು ಪೋನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಜಪೇಟೆ ಮಂಡಲ ಕಾರ್ಯದರ್ಶಿ ಕೋಟೆರ ಕಿಶನ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರು ದಿನೇಶ್ ಚೋಡುಮಾಡ, ರೈತ ಮೋರ್ಚಾ ಮಂಡಲ […]
ಜು.5 ರಂದು ಕೊಡಗು ಜಿಲ್ಲೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ ಪ್ರವಾಸ

ಜನವಾಹಿನಿ NEWS ಮಡಿಕೇರಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ಜುಲೈ, 05 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಸಚಿವರು ಜುಲೈ, 05 ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ ಮಹೇಶ ಕರ್ಜಗಿ ಅವರು ತಿಳಿಸಿದ್ದಾರೆ.
ಮಡಿಕೇರಿ ಆರ್.ಟಿ.ಒ ಕಛೇರಿಗೆ ಡಾ ಮಂತರ್ ಗೌಡ ರವರಿಂದ 4 ಕೋಟಿ 30 ಲಕ್ಷ ರೂ ವೆಚ್ಚದ ಸೆನ್ಸಾರ್ ಟೆಸ್ಟಿಂಗ್ ಟ್ರಾಕ್ ಕೊಡುಗೆ

ಜನವಾಹಿನಿ NEWS ಮಡಿಕೇರಿ : ಮಡಿಕೇರಿಯಲ್ಲಿರುವ ಆರ್.ಟಿ.ಒ ಕಛೇರಿಯಲ್ಲಿ 4ಕೋಟಿ 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸೆನ್ಸಾರ್ ಟೆಸ್ಟಿಂಗ್ ಟ್ರಾಕ್ ನಿರ್ಮಾಣ ಕಾಮಗಾರಿಗೆ ಇಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಭೂಮಿಪೂಜೆ ನೆರವೇರಿಸಿದರು. ಹಿಂದಿನ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರಲ್ಲಿ ಕೊಡಗು ಜಿಲ್ಲೆಯಲ್ಲಿ ವಾಹನ ಚಾಲನೆ ಲೈಸೆನ್ಸ್ ಪಡೆಯುವರು ಕಚ್ಚಾ ರಸ್ತೆಯಲ್ಲಿ ಟೆಸ್ಟಿಂಗ್ ರೈಡ್ ಮಾಡುವಾಗ ಆಗುತ್ತಿದ್ದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಆಧುನಿಕ […]
ಶಾಸಕ ಪೊನ್ನಣ್ಣನಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಮಾಜಿ ಸಿಎಂಗೆ ಮನವಿ

ಜನವಾಹಿನಿ NEWS ಮಡಿಕೇರಿ : ಸಚಿವ ಸಂಪುಟ ವಿಸ್ತರಣೆ ಸಂದರ್ಭ ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ ನವರಿಗೆ ಸಚಿವ ಸ್ಥಾನ ನೀಡುವಂತೆ ಕೊಡಗಿನ ನಿವೃತ ಸೇನಾಧಿಕಾರಿಗಳು, ನಿವೃತ ವಾಯುಪಡೆ ಅಧಿಕಾರಿಗಳು , ಮಾಜಿ ಒಲಿಂಪಿಯನ್‌ಗಳು , ಪ್ರಮುಖರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಕೊಡಗಿನ ಮಾನವ ಪ್ರಾಣಿ ಸಂಘರ್ಷ, ಪ್ರವಾಸೋದ್ಯಮ, ಭೂ ಪರಿವರ್ತನೆಯಂತಹ ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ, ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ […]
ಜು.೧೧ ರಂದು ಬೈಲಕುಪ್ಪೆ ಎಸ್‌ಎಲ್‌ವಿ ಕಲ್ಯಾಣ ಮಂಟಪದಲ್ಲಿ ಮುಕ್ತ ಆಡಿಷನ್ : ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ

ಜನವಾಹಿನಿ NEWS ಮಡಿಕೇರಿ : ಕನ್ನಡ ಚಲನಚಿತ್ರ ನಿರ್ಮಾಣ ಸಂಸ್ಥೆ ರೆಮ್ಸೆಸ್ ಮೋಷನ್ ಪಿಕ್ಚರ್ಸ್ ವತಿಯಿಂದ ಕೊಡಗು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪ್ರತಿಭಾವಂತ ಕಲಾವಿದರಿಗಾಗಿ ಜು.೧೧ ರಂದು ಬೈಲಕುಪ್ಪೆ ಸಮೀಪದ ಎಸ್‌ಎಲ್‌ವಿ ಕಲ್ಯಾಣ ಮಂಟಪದಲ್ಲಿ ಮುಕ್ತ ಆಡಿಷನ್ ಆಯೋಜಿಸಿದೆ ಎಂದು ಚಲನಚಿತ್ರ ನಟ ಮತ್ತು ನಿದೇರ್ಶಕ, ನಿರ್ಮಾಪಕ ರೋಹಾನ್ ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟನೆಗೆ ಆಸಕ್ತಿ ಹೊಂದಿರುವ ಹೊಸ ಪ್ರತಿಭೆಗಳು, ರಂಗಭೂಮಿ ಕಲಾವಿದರು ಹಾಗೂ ವಿವಿಧ ವಯೋಮಾನದ ಕಲಾವಿದರು ಆಡಿಷನ್‌ನಲ್ಲಿ ಭಾಗವಹಿಸಬಹುದು. ಸ್ಥಳೀಯ ಪ್ರತಿಭೆಗಳಿಗೆ […]
ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ 51 ನೇ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಅಧಿಕಾರ ಸ್ವೀಕಾರ

ಜನವಾಹಿನಿ NEWS ಮಡಿಕೇರಿ : ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಮತ್ತು ಕಾಯ೯ದಶಿ೯ಯಾಗಿ ಮೖಣಾಲಿನಿ ಚಿಣ್ಣಪ್ಪ ಅಧಿಕಾರ ಸ್ವೀಕರಿಸಿದರು. ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿಗೆ ಇನ್ನರ್ ವೀಲ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಡಾ.ಜಯಲಕ್ಷ್ಮಿ ಪಾಟ್ಕರ್ ಪದಗ್ರಹಣ ನೆರವೇರಿಸಿದರು. ಇನ್ನರ್ ವೀಲ್ ಜಿಲ್ಲಾ ಸಮಿತಿಯ ನಿದೇ೯ಶಕಿ ದಿವ್ಯಮುತ್ತಣ್ಣ, ನಿಕಟಪೂವ೯ ಅಧ್ಯಕ್ಷೆ ಲಲಿತಾ ರಾಘವನ್ , ನಿಕಟಪೂವ೯ ಕಾಯ೯ದಶಿ೯ ನಮಿತಾರೈ ವೇದಿಕೆಯಲ್ಲಿದ್ದರು. ಆರೋಗ್ಯ ಚಿಕಿತ್ಸೆಗಾಗಿ ಸಿ.ಕೆ.ನಂದೀಶ್ ಕುಮಾರ್ ಅವರಿಗೆ 5 ಸಾವಿರ […]
ರಸಗೊಬ್ಬರ ಮಾರಾಟದಲ್ಲಿ ರೈತರಿಗೆ ಮೋಸವಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ

ಜನವಾಹಿನಿ NEWS ಮಡಿಕೇರಿ : ಕೃಷಿಕರಿಗೆ ನಕಲಿ ಹಾಗೂ ಅಸಲಿ ರಸಗೊಬ್ಬರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಮಾರಾಟಗಾರರು, ವಿತರಕರು ರೈತರಿಗೆ ಮೋಸವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದರು. ಕಳಪೆ ಹಾಗೂ ನಕಲಿ ಬಿತ್ತನೆ ಬೀಜ ಮತ್ತು ಕೀಟನಾಶಕಗಳ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೆಲವು ಅನಧೀಕೃತ ಮತ್ತು […]
ಬಂಡೆ ಕುಸಿದು 7 ಮಂದಿ ಕಾರ್ಮಿಕರ ಸಾವು : ಕಲ್ಲು ಕ್ವಾರಿಯಲ್ಲಿ ನಡೆದ ಘೋರ ದುರಂತ

ಜನವಾಹಿನಿ NEWS ಬೆಂಗಳೂರು : ಬೆಂಗಳೂರಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಬಳಿ ಇರುವ ಕಲ್ಲು ಕ್ವಾರಿಯೊಂದರಲ್ಲಿ ಬಂಡೆ ಕುಸಿದು ಬಿದ್ದ ಪರಿಣಾಮ, ಸ್ಥಳದಲ್ಲೇ ಏಳು ಮಂದಿ ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮಾದಪಟ್ಟಣ ಗ್ರಾಮದ ವ್ಯಾಪ್ತಿಯಲ್ಲಿರುವ ಕಾವೇರಿ ಕ್ರಷರ್ ನಲ್ಲಿ ಎಂದಿನಂತೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹಠಾತ್ ಆಗಿ ಬೃಹತ್ ಗಾತ್ರದ ಕಲ್ಲು ಬಂಡೆಯೊಂದು ಉರುಳಿ ಬಿದ್ದಿದ್ದು, ಅದರಡಿ ಸಿಲುಕಿ ಏಳು ಮಂದಿ ಕಾರ್ಮಿಕರು ಸ್ಥಳದಲ್ಲೇ […]
ಸಿದ್ದಾಪುರ ಮಾರ್ಗ ಮಧ್ಯೆ ಮಣ್ಣುಗುಡ್ಡೆ ವಾಹನ ಸಂಚಾರಕ್ಕೆ ಅಡ್ಡಿ

ಜನವಾಹಿನಿ NEWS ಸಿದ್ದಾಪುರ : ಪಟ್ಟಣದ ಪ್ರಮುಖ ರಸ್ತೆ ಮಾರ್ಗವಾದ ಸಿದ್ದಾಪುರ – ವಿರಾಜಪೇಟೆ ರಸ್ತೆ ಮಧ್ಯೆ ಜಯಲಕ್ಷ್ಮಿ ಬೇಕರಿ ಎದುರು ಚರಂಡಿ ಹೂಳೆತ್ತಲಾಗಿದ್ದು, ತ್ಯಾಜ್ಯಮಿಶ್ರಿತ ಮಣ್ಣು ಗುಡ್ಡೆಯನ್ನು ಅಲ್ಲೇ ಹಾಕಲಾಗಿದೆ ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಪಿಕ್ ಜಾಮ್ ಸಮಸ್ಯೆ ಏರ್ಪಟ್ಟಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಅನುಭವಿಸುವಂತಾಗಿದೆ. ಮೊದಲೇ ಕಿರಿದಾಗಿರುವ ಈ ರಸ್ತೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಣ್ಣು ರಾಶಿ ಹಾಗೆಯೇ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಸ್ಥಳೀಯ ಪಂಚಾಯತಿ ನಿರ್ಲಕ್ಯವೇ ಇದಕ್ಕೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು […]